»   » ಚಿತ್ರಗಳು: 'ತಿಥಿ'ಯಲ್ಲಿ ಪಾಲ್ಗೊಂಡ ಬಾಲಿವುಡ್ ಸ್ಟಾರ್ ಗಳ ಮುದ್ದಾದ ಮಾತು

ಚಿತ್ರಗಳು: 'ತಿಥಿ'ಯಲ್ಲಿ ಪಾಲ್ಗೊಂಡ ಬಾಲಿವುಡ್ ಸ್ಟಾರ್ ಗಳ ಮುದ್ದಾದ ಮಾತು

Posted By:
Subscribe to Filmibeat Kannada

ರಾಮ್ ರೆಡ್ಡಿ ನಿರ್ದೇಶನದ ಕನ್ನಡ ಸಿನಿಮಾ 'ತಿಥಿ' ಬಾಲಿವುಡ್ ಅಂಗಳದಲ್ಲಿ ಸದ್ಯಕ್ಕೆ ಟಾಕ್ ಆಫ್ ದ ಟಾಪಿಕ್ ಆಗಿದೆ. ಇತ್ತೀಚೆಗೆ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟ-ನಟಿಯರಿಗೆ ಪ್ರಶಸ್ತಿ ವಿಜೇತ 'ತಿಥಿ' ಸಿನಿಮಾದ ಸ್ಪೆಷಲ್ ಶೋ ಮುಂಬೈನಲ್ಲಿ ಮೇ 30ರಂದು ನಡೆಸಲಾಗಿತ್ತು.

ಚಿತ್ರದ ವಿಶೇಷ ಪ್ರದರ್ಶನದ ಸಮಯದಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್, ನಿರ್ದೇಶಕ ಅನುರಾಗ್ ಕಶ್ಯಪ್, ಜುಹಿ ಚತುರ್ವೇದಿ, ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ, ನಟಿ ಸ್ವರ ಭಾಸ್ಕರ್, ಗುಲ್ಶನ್ ದೇವಯ್ಯ, ನಟಿ ಅನುಷ್ಕಾ ರಾಂಜಾನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.[ವಿಶ್ವದಾದ್ಯಂತ ಹವಾ ಎಬ್ಬಿಸಿರುವ 'ತಿಥಿ'ಯ ಚಿತ್ರವಿಮರ್ಶೆ]

ಈಗಾಗಲೇ ಬಾಲಿವುಡ್ ನಟಿ ಕಲ್ಕಿ, ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ಬಾಲಿವುಡ್ ನಟ ಅಮೀರ್ ಖಾನ್ ಅವರು ವೀಕ್ಷಿಸಿ ಚಿತ್ರದ ಬಗ್ಗೆ ಹಾಡಿ ಹೊಗಳಿದ್ದಾರೆ. ಇದೀಗ ಬಾಲಿವುಡ್ ನಟಿ ಕಂಗನಾ ಅವರ ಸರದಿ.['ತಿಥಿ' ನೋಡಿ ನಕ್ಕು-ನಕ್ಕು ಸುಸ್ತಾದ ಹಿಂದಿ ನಟ ಅಮೀರ್ ಖಾನ್]

Kannada Movie 'Thithi' special screening at Mumbai

'ಈವರೆಗೆ ಬೆಳ್ಳಿತೆರೆಯ ಮೇಲೆ ಇಂತಹ ಪ್ರಯೋಗವನ್ನು ನೋಡಿರಲಿಲ್ಲ. ಈ ಸಿನಿಮಾದ ಪಾತ್ರಗಳು ಬಹುಕಾಲ ನನ್ನ ಮನಸ್ಸಿನಲ್ಲಿ ಉಳಿಯುತ್ತದೆ' ಎಂದು ನಟಿ ಕಂಗನಾ ರನೌತ್ ಅವರು ಟ್ವೀಟ್ ಮೂಲಕ ಸೆಂಚುರಿ ಗೌಡರ 'ತಿಥಿ'ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಬರೋಬ್ಬರಿ 4ನೇ ಸಲ ನೋಡಿದ್ದಾಗಿ ಸಂಭ್ರಮದಿಂದ ಟ್ವೀಟ್ ಮಾಡಿದ್ದಾರೆ.['ನಾನು ಎಷ್ಟು ಬಾರಿ ಬೇಕಾದರೂ 'ತಿಥಿ' ನೋಡಲು ಸಿದ್ಧ' ಎಂದವರಾರು?]

''ತಿಥಿ' ಸಿನಿಮಾ ನೋಡಿದೆ, ಇದು ಮನಸ್ಸಿಗೆ ತುಂಬಾ ಮುದವಾದ ಅನುಭವ ಕೊಡುವ ಸಿನಿಮಾ' ಎಂದು ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ಟ್ವೀಟ್ ಮಾಡಿದ್ದಾರೆ.

'ತಿಥಿ' ಎಂತಹ ಮುದ್ದಾದ ಸಿನಿಮಾ ರಾಮ್ ರೆಡ್ಡಿ ವೃತ್ತಿಯಲ್ಲಿ ಕಲಾವಿದರಲ್ಲದವರ ಕೈಯಲ್ಲಿ ನಟನೆ ಮಾಡಿಸಿದ್ದಾರೆ. ರಾಮ್ ರೆಡ್ಡಿ ಒಬ್ಬ ಅಸಾಧಾರಣ ನಿರ್ದೇಶಕ, ದಯವಿಟ್ಟು ತುಂಬಾ ನಗಿಸುವ ಸಿನಿಮಾವನ್ನು ಎಲ್ಲರೂ ನೋಡಿ' ಎಂದು ಖ್ಯಾತ ಬರಹಗಾರ್ತಿ ಜೂಹಿ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.[ಸೆಂಚುರಿ ಗೌಡರ 'ತಿಥಿ'ಗೆ ಮಾರು ಹೋದ ಬಾಲಿವುಡ್ ನಟಿ ಕಲ್ಕಿ]

ನಿರ್ದೇಶಕ ರಾಮ್ ರೆಡ್ಡಿ ನಿರ್ದೇಶನ ಮಾಡಿದ್ದ 'ತಿಥಿ' ಸಿನಿಮಾಗೆ ಈರೇ ಗೌಡ ಎಂಬ ಯುವ ಕಥೆಗಾರ ಕಥೆ-ಚಿತ್ರಕಥೆ ಬರೆದು ಸಂಭಾಷಣೆ ಬರೆದಿದ್ದರು. ಚಿತ್ರದಲ್ಲಿ ಮಂಡ್ಯ ಅಸು-ಪಾಸಿನ ಸಾಮಾನ್ಯ ಜನರೇ ಅಭಿನಯಿಸಿದ್ದರು. ಜೂನ್ 3 ರಿಂದ ಈ ಸಿನಿಮಾ ವಿದೇಶದಾದ್ಯಂತ ತೆರೆ ಕಾಣಲಿದೆ.

ಮುಂಬೈನಲ್ಲಿ ನಡೆದ ವಿಶೇಷ 'ತಿಥಿ' ಪ್ರದರ್ಶನದ ಫೋಟೋ ಗ್ಯಾಲರಿ ಕೆಳಗಿನ ಸ್ಲೈಡುಗಳಲ್ಲಿ...

-ನಟಿ ಅನುಷ್ಕಾ ರಾಂಜಾನ್

-ನಟಿ ಅನುಷ್ಕಾ ರಾಂಜಾನ್

-ನಿರ್ದೇಶಕ ಅನುರಾಗ್ ಕಶ್ಯಪ್

-ನಿರ್ದೇಶಕ ಅನುರಾಗ್ ಕಶ್ಯಪ್

-ಬಾಲಿವುಡ್ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ

-ಬಾಲಿವುಡ್ ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಛಾಬ್ರಾ

-ಗುಲ್ಶನ್ ದೇವಯ್ಯ

-ಗುಲ್ಶನ್ ದೇವಯ್ಯ

-ರಾಮ್ ರೆಡ್ಡಿ ಜೊತೆ ಖ್ಯಾತ ಬರಹಗಾರ್ತಿ ಜೂಹಿ ಚತುರ್ವೇದಿ

-ರಾಮ್ ರೆಡ್ಡಿ ಜೊತೆ ಖ್ಯಾತ ಬರಹಗಾರ್ತಿ ಜೂಹಿ ಚತುರ್ವೇದಿ

-ಬಾಲಿವುಡ್ ನಟಿ ಕಂಗನಾ ರನೌತ್

-ಬಾಲಿವುಡ್ ನಟಿ ಕಂಗನಾ ರನೌತ್

-ಬಾಲಿವುಡ್ ನಟಿ ಕಂಗನಾ ರನೌತ್

-ಬಾಲಿವುಡ್ ನಟಿ ಕಂಗನಾ ರನೌತ್

-ಬಾಲಿವುಡ್ ನಟಿ ಕಂಗನಾ ರನೌತ್

-ಬಾಲಿವುಡ್ ನಟಿ ಕಂಗನಾ ರನೌತ್

-ಬಾಲಿವುಡ್ ನಟಿ ಕಂಗನಾ ರನೌತ್

-ಬಾಲಿವುಡ್ ನಟಿ ಕಂಗನಾ ರನೌತ್

-'ತಿಥಿ'ಯಲ್ಲಿ ಪಾಲ್ಗೊಂಡ ಬಾಲಿವುಡ್ ಸ್ಟಾರ್ ಗಳ ಮುದ್ದಾದ ಮಾತು

-'ತಿಥಿ'ಯಲ್ಲಿ ಪಾಲ್ಗೊಂಡ ಬಾಲಿವುಡ್ ಸ್ಟಾರ್ ಗಳ ಮುದ್ದಾದ ಮಾತು

-'ತಿಥಿ'ಯಲ್ಲಿ ಪಾಲ್ಗೊಂಡ ಬಾಲಿವುಡ್ ಸ್ಟಾರ್ ಗಳ ಮುದ್ದಾದ ಮಾತು

-'ತಿಥಿ'ಯಲ್ಲಿ ಪಾಲ್ಗೊಂಡ ಬಾಲಿವುಡ್ ಸ್ಟಾರ್ ಗಳ ಮುದ್ದಾದ ಮಾತು

-ನಟಿ ಸ್ವರ ಭಾಸ್ಕರ್

-ನಟಿ ಸ್ವರ ಭಾಸ್ಕರ್

-ನಟಿ ಸ್ವರ ಭಾಸ್ಕರ್

-ನಟಿ ಸ್ವರ ಭಾಸ್ಕರ್

English summary
Bollywood Actress Kangana Ranaut, Actor Aamir Khan, Anurag Kashyap, Bollywood celebrities praises for Kannada Movie 'Thithi'. Director Raam Reddy's National Award-winning Kannada-language film 'Thithi', which received critical as well as commercial success after its release in Karnataka, will hit theatres across India on June 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada