ಈ ವಾರ ತೆರೆಗೆ ಬರುತ್ತಿದೆ 'ಟೈಟ್ಲು ಬೇಕ'
ಚಿತ್ರಗಳನ್ನು ಗುರುತಿಸುವುದು ಟೈಟಲ್ ಗಳಿಂದ. ಎಷ್ಟೋ ಸಲ, ಟೈಟಲ್ ಕಾರಣಕ್ಕೆ ಗಾಂಧಿನಗರದಲ್ಲಿ ಗುದ್ದಾಟಗಳು ನಡೆದಿವೆ. ಆದ್ರೆ, ಇಲ್ಲೊಂದು ಚಿತ್ರ 'ಟೈಟ್ಲು ಬೇಕ' ಅಂತ ಹೇಳಿಕೊಂಡೇ ಸದ್ದು ಮಾಡುತ್ತಿದೆ.
ಅಸಲಿಗೆ, ಚಿತ್ರದ ಟೈಟಲ್ಲೇ 'ಟೈಟ್ಲು ಬೇಕ'. ಇಂತಹ ಡಿಫರೆಂಟ್ ಟೈಟಲ್ ಇಟ್ಟು ಸಿನಿಮಾ ಮಾಡಿರುವುದು ನವ ನಿರ್ದೇಶಕ ಆನಂದ್.ಜಿ.ಕೆ. ಅಷ್ಟಕ್ಕೂ ಆನಂದ್ ರವರಿಗೆ ಇದು ಮೊದಲ ಪ್ರಯತ್ನ. ಚೊಚ್ಚಲ ಪ್ರಯತ್ನದಲ್ಲೇ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ. [ರೀಲ್ ನಲ್ಲಿ 'ರಿಯಲ್' ಆಗಿ ಸಾ.ರಾ.ಗೋವಿಂದು, ಚಿನ್ನೇಗೌಡ್ರು ನಟನೆ]

'ಟೈಟ್ಲು ಬೇಕ' ಚಿತ್ರದ ಮೂಲಕ ಆಯುಷ್ ಅನ್ನುವ ಯುವ ನಾಯಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ನೇಹಾ ಪಾಟೀಲ್ ನಟಿಸಿದ್ದಾರೆ. ಹೊಸಬರ ಹೊಸ ಪ್ರಯತ್ನವಾಗಿರುವ 'ಟೈಟ್ಲು ಬೇಕ' ಚಿತ್ರದಲ್ಲಿ ಸಾ.ರಾ.ಗೋವಿಂದು, ಚಿನ್ನೇಗೌಡ್ರು ಮತ್ತು ಟೇ.ಶಿ.ವೆಂಕಟೇಶ್ ಬಣ್ಣ ಹಚ್ಚಿರುವುದು ಸ್ಪೆಷಲ್.
ಪಾಕಿಸ್ತಾನ್ ಬಾರ್ಡರ್, ಮನಾಲಿ, ಚಂದ್ರಧಾರ ದಂತಹ ಪ್ರವಾಸಿ ತಾಣಗಳಲ್ಲಿ 'ಟೈಟ್ಲು ಬೇಕ' ಶೂಟಿಂಗ್ ನಡೆದಿದೆ. ಇದೇ ವಾರ ಬೆಂಗಳೂರಿನ ಅನುಪಮ ಚಿತ್ರಮಂದಿರ ಸೇರಿದಂತೆ ರಾಜ್ಯಾದ್ಯಂತ ಸಿನಿಮಾ ತೆರೆಕಾಣುತ್ತಿದೆ. ನೋಡೋಕೆ ನೀವು ರೆಡಿನಾ?


Click it and Unblock the Notifications











