»   » ಅಲ್ಲೆಲೇ, ಬಲ್ಲೆಲೇ ನೀ ಕೇಳು, ಪ್ರೀತಿ ಕಾಮದ ತೇರು

ಅಲ್ಲೆಲೇ, ಬಲ್ಲೆಲೇ ನೀ ಕೇಳು, ಪ್ರೀತಿ ಕಾಮದ ತೇರು

Posted By:
Subscribe to Filmibeat Kannada

ಹೊಸಬರು ಸೇರಿಕೊಂಡು ಮಾಡುತ್ತಿರುವ 'ಟೈಟ್ಲು ಬೇಕ' ಈ ವಾರ ತೆರೆ ಮೇಲೆ ಅಪ್ಪಳಿಸಲಿದ್ದು, ಚಿತ್ರಕ್ಕೆ ನಿರ್ದೇಶಕ ಆನಂದ್ ಜಿ.ಕೆ ಅವರು ಆಕ್ಷನ್-ಕಟ್ ಹೇಳಿದ್ದಾರೆ. ಇನ್ನು ಈ ಚಿತ್ರ ನೋಡಿ ಪ್ರೇಕ್ಷಕರೇ ಸಿನಿಮಾಕ್ಕೆ ಟೈಟಲ್ ನಿರ್ಧರಿಸಲಿ ಅನ್ನೋದು ನಿರ್ದೇಶಕರ ಅಭಿಪ್ರಾಯ ಆದ್ದರಿಂದ ಚಿತ್ರಕ್ಕೆ ಈ ತರದ ಡಿಫರೆಂಟ್ ಟೈಟಲ್ ಕೊಟ್ಟಿದ್ದಾರೆ.

ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳಾದ ಆಯುಷ್ ಹಾಗೂ ನೇಹಾ ಪಾಟೀಲ್ ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆನಂದ್ ಜಿ.ಕೆ ಅವರ ಚೊಚ್ಚಲ ನಿರ್ದೆಶನದಲ್ಲಿ ಮೂಡಿ ಬಂದಿರುವ 'ಟೈಟ್ಲು ಬೇಕ' ಚಿತ್ರದಲ್ಲಿ ಹೊಸಬರ ಅಭಿನಯ ನೋಡಲು ಚಿತ್ರದ ಟ್ರೈಲರ್ ಝಲಕ್ ನೋಡಿ..[ಟೈಟ್ಲು ಬೇಕ ಚಿತ್ರದ ಟೈಟಲ್ ಹಿಂಗ್ಯಾಕೆ ಗೊತ್ತಾ?]

ಇನ್ನು ಚಿತ್ರದಲ್ಲಿರುವ ಹಾಡುಗಳು ಈಗಾಗಲೇ ಯುವ ಮನಸ್ಸುಗಳನ್ನು ಗೆದ್ದಿದ್ದು, ಜೊತೆಗೆ ಚಿತ್ರದ ಎಲ್ಲಾ ಹಾಡುಗಳು ಮಾರ್ಕೆಟ್ ನಲ್ಲಿ ಹಿಟ್ ಲಿಸ್ಟ್ ಪಡೆದುಕೊಂಡಿವೆ.

Kannada movie Titlu Beka releasing October 9th Watch trailer and video song

ಅದರಲ್ಲೂ, ''ಅಲ್ಲೆಲೇ, ಬಲ್ಲೆಲೇ ನೀ ಕೇಳು, ಪ್ರೀತಿ ಕಾಮದ ತೇರು, ಪ್ರೀತಿಸಿ ನೀ ಒಮ್ಮೆ ನೋಡು, ಕಣ್ಣಲ್ಲೇ ಹುಟ್ಟುವ ಪ್ರೀತಿ, ಮುಗಿಯದು ಕಾಮದ ರೀತಿ', ಜಾತಿಯನ್ನರಿಯದ ಪ್ರೀತಿ ಇಣುಕಿದೆ ಕಾಮದ ಕಿಟಕಿ', ಅನ್ನೋ ಹಾಡು ಯೂತ್ ಗೆ ಒಂಥರಾ ಸಂದೇಶ ನೀಡುವಂತಿದೆ. ಚಿತ್ರದ ಹಾಡಿನ ವಿಡಿಯೋ ಇಲ್ಲಿದೆ ನೋಡಿ..[ಈ ವಾರ ತೆರೆಗೆ ಬರುತ್ತಿದೆ 'ಟೈಟ್ಲು ಬೇಕ']

ಹಾಗೂ ಇವಳ್ಯಾರೋ ಎಂಬ ರೋಮ್ಯಾಂಟಿಕ್ ಮೆಲೋಡಿ ಹಾಡು ಕೂಡ ಸಕತ್ ಕ್ಯೂಟ್ ಜೊತೆಗೆ ಸುಂದರವಾಗಿದೆ. ವಿಡಿಯೋ ಇಲ್ಲಿದೆ ನೋಡಿ.

ಒಟ್ನಲ್ಲಿ ಮ್ಯೂಸಿಕಲ್ ಹಿಟ್ ಆಗಿರುವ ಹೊಸಬರ 'ಟೈಟ್ಲು ಬೇಕ' ಚಿತ್ರ ತೆರೆ ಮೇಲೆ ಇದೇ ಶುಕ್ರವಾರ ತೆರೆ ಕಾಣುತ್ತಿದ್ದು, ಹೊಸಬರ ಚಿತ್ರತಂಡಕ್ಕೆ ನಮ್ಮ ಕಡೆಯಿಂದಲೂ ವಿಶ್ ಯೂ ಆಲ್ ದ ಬೆಸ್ಟ್

English summary
Aayush and Neha Patil starrer kannada movie 'Titlu Beka', Releasing October 9th. Watch the movie trailer and video song here. The moive is directed by Anand GK

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada