ಈ ವಾರ ಪುನೀತ್ ಚಿತ್ರಕ್ಕೆ ಪೈಪೋಟಿ ನೀಡಲಿದೆ 'ಟೋರ ಟೋರ'

By Bharath Kumar

ಪವರ್ ಸ್ಟಾರ್ ಅಭಿನಯದ 'ಅಂಜನಿಪುತ್ರ' ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪುನೀತ್ ಸಿನಿಮಾದಲ್ಲಿ ಬೇರೆ ಚಿತ್ರಗಳು ಕನ್ನಡದಲ್ಲಿ ಈ ವಾರ ತೆರೆಕಾಣಲಿದೆ ಎಂಬ ಕುತೂಹಲ ಕಾಡುತ್ತಿದೆ. ಸಾಮಾನ್ಯವಾಗಿ ದೊಡ್ಡ ನಟನ ಸಿನಿಮಾ ಬರ್ತಿದೆ ಅಂದ್ರೆ ಹೊಸಬರ ಚಿತ್ರಗಳು ರಿಲೀಸ್ ದಿನಾಂಕವನ್ನ ಮುಂದಕ್ಕೆ ಹಾಕಿಕೊಳ್ತಾರೆ. ಆದ್ರೆ, ಇಲ್ಲೊಂದು ಸಿನಿಮಾ ಯಾವುದೇ ಮುಲಾಜಿಲ್ಲದೇ ಇದೇ ವಾರ ಚಿತ್ರಮಂದಿರಕ್ಕೆ ಲಗ್ಗೆಯಿಡ್ತಿದೆ.

ಹೌದು, ಹರ್ಷ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ 'ಟೋರ ಟೋರ' ಚಿತ್ರ ಈ ವಾರ ಪುನೀತ್ ಸಿನಿಮಾದ ಎದುರು ತೆರೆಕಾಣಲಿದೆ. ಅಂಜನಿಪುತ್ರ 21ಕ್ಕೆ ತೆರೆಕಂಡ್ರೆ, ಟೋರ ಟೋರ ಡಿಸೆಂಬರ್ 22ಕ್ಕೆ ಬಿಗ್ ಸ್ಕ್ರೀನ್ ಮೇಲೆ ಬರ್ತಿದೆ.

Kannada movie tora tora releasing on december 22nd

ಈಗಾಗಲೇ ಬಿಡುಗಡೆಯಾಗಿರುವ 'ಟೋರ ಟೋರ ಚಿತ್ರದ ಟ್ರೇಲರ್ ಅನ್ನು ಅಧಿಕ ಸಂಖ್ಯೆಯಲ್ಲಿ ವೀಕ್ಷಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕನ್ನಡದಲ್ಲಿ ಮೊದಲ ಬಾರಿಗೆ ಈ ಚಿತ್ರದಲ್ಲಿ ಸಮಯ ಸಂಚಾರ(ಟೈಮ್ ಟ್ರವಲ್) ಥೀಮ್‌ನ ಕಥಾ ಎಳೆಯನ್ನು ಅಳವಡಿಸಿಕೊಂಡಿರುವುದು ವಿಶೇಷ.

ಈ ಚಿತ್ರದಲ್ಲಿ 'ರಂಗಿತರಂಗ' ಚಿತ್ರದ ಪಾಂಡು ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದ ಸಿದ್ದು ಮೂಲಿಮನಿ, ನಟರಾಜ್, ಗಗನ್, ಅನಿರುದ್ಧ, ಸನತ್, ಪೂಜಾ, ಸನಿಹ ಮುಖ್ಯಭೂಮಿಕೆಯಲ್ಲಿದ್ದಾರೆ. ಚಾರ್ಲಿ ಎಂಬ ಹೆಸರಿನ ನಾಯಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಚಿತ್ರಕ್ಕೆ ಸಿದ್ದು ಮೂಲಿಮನಿಯವರೇ ಪ್ರಮೋಷನ್ ಹಾಡು ರಚಿಸಿದ್ದು, ಇದಕ್ಕೆ ಸಿದ್ದಾರ್ಥ್ ಕಾಮತ್ ಅವರು ಚೊಚ್ಚಲ ಬಾರಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ಕಿರಣ್ ಛಾಯಾಗ್ರಹಣ ಹಾಗೂ ಮಣಿ ಸಂಕಲನ ಈ ಚಿತ್ರಕ್ಕಿದೆ.

More from Filmibeat

English summary
Kannada movie Tora Tora is releasing along with Puneeth rajkumar's Anjaniputra on this week. the movie directed by harsha gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X