ನಿಮ್ಮ ಸಂಕ್ರಾಂತಿ ಸಂಭ್ರಮವನ್ನು ಹೆಚ್ಚು ಮಾಡುತ್ತಿವೆ ಈ ಸಿನಿಮಾಗಳು

ಸಂಕ್ರಾತಿ ಹಬ್ಬದ ಸಂತಸಲ್ಲಿರುವ ಕನ್ನಡಿಗರಿಗೆ ಕೆಲ ಸಿನಿಮಾ ತಂಡಗಳು ಆ ಖುಷಿಯನ್ನ ಡಬಲ್ ಮಾಡುತ್ತಿವೆ. ಹಬ್ಬದ ವಿಶೇಷವಾಗಿ ಕನ್ನಡದ ಹೊಸ ಹೊಸ ಸಿನಿಮಾಗಳ ಹಾಡುಗಳು, ಟ್ರೇಲರ್ ಗಳು ಬಿಡುಗಡೆಯಾಗುತ್ತಿದೆ.

ದರ್ಶನ್ ಅಭಿನಯದ 'ಯಜಮಾನ' ಸಿನಿಮಾದ ಹಾಡು, 'ಸೀತಾರಾಮ ಕಲ್ಯಾಣ' ಮದುವೆ ಸಾಂಗ್, ಪುನೀತ್ ರಾಜ್ ಕುಮಾರ್ ಅವರ 'ನಟ ಸಾರ್ವಭೌಮ' ಟ್ರೇಲರ್ ರಿಲೀಸ್ ಡೇಟ್, ರಮೇಶ್ ಅರವಿಂದ್ ನಿರ್ದೇಶನದ 'ಬಟರ್ ಫ್ಲೈ' ಹಾಡು ಹಾಗೂ 'ಮದಗಜ' ಚಿತ್ರದ ಸಾಂಗ್ ರೆಕಾರ್ಡಿಂಗ್ ಸೇರಿದಂತೆ ಕೆಲ ಚಿತ್ರತಂಡಗಳು ಹಬ್ಬದ ದಿನ ಅಭಿಮಾನಿಗಳಿಗೆ ಉಡುಗೊರೆ ನೀಡುತ್ತಿದೆ.

ಈ ವರ್ಷದ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬರುತ್ತಿರುವ ಕನ್ನಡದ ಹೊಸ ಸಿನಿಮಾಗಳ ಟ್ರೇಲರ್ ಮತ್ತು ಹಾಡುಗಳು ಮುಂದಿದೆ...

'ಯಜಮಾನ' ಶಿವನಂದಿ ಹಾಡು

ದರ್ಶನ್ ಅಭಿಮಾನಿಗಳು ನಾಳೆ ಯಾವಾಗ ಆಗುತ್ತದೆಯೋ ಅಂತ ಕಾಯುತ್ತಿದ್ದಾರೆ. ಕಾರಣ ನಾಳೆ 'ಯಜಮಾನ' ಸಿನಿಮಾದ ಮೊದಲ ಹಾಡು ಹೊರ ಬರುತ್ತಿದೆ. 'ಶಿವನಂದಿ..' ಹಾಡು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗುತ್ತಿದೆ. ನಾಳೆ ಬೆಳಗ್ಗೆ 11:04 ನಿಮಿಷಕ್ಕೆ ಸರಿಯಾಗಿ ಹಾಡು ಡಿ ಬೀಟ್ಸ್ ಯೂ ಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗುತ್ತಿದೆ. ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

'ಸೀತಾರಾಮ ಕಲ್ಯಾಣ' ಮದುವೆ ಸಾಂಗ್

'ಸೀತಾರಾಮ ಕಲ್ಯಾಣ' ಮದುವೆ ಸಾಂಗ್

'ಸೀತಾರಾಮ ಕಲ್ಯಾಣ' ಸಿನಿಮಾದ ಮದುವೆಯ ಹಾಡು ಹಬ್ಬದ ಸಂಭ್ರಮವನ್ನು ಹೆಚ್ಚು ಮಾಡಲು ನಾಳೆ ಬರುತ್ತಿದೆ. ಸಿನಿಮಾದ 'ಮಾಂಗಲ್ಯಂ ತಂತುನಾನೇನಾ..' ಹಾಡು ಸಂಕ್ರಾಂತಿಯ ದಿನ 11 ಗಂಟೆ 04 ನಿಮಿಷಕ್ಕೆ ಬಿಡುಗಡೆಯಾಗುತ್ತಿದೆ. ವಿಜಯ್ ಪ್ರಕಾಶ್ ಈ ಹಾಡನ್ನು ಹಾಡಿದ್ದು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಅನೂಪ್ ರುಬೆನ್ಸ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

'ನಟ ಸಾರ್ವಭೌಮ' ಟ್ರೇಲರ್

'ನಟ ಸಾರ್ವಭೌಮ' ಟ್ರೇಲರ್

ನಟ ಪುನೀತ್ ರಾಜ್ ಕುಮಾರ್ ಅಭಿನಯದ 'ನಟ ಸಾರ್ವಭೌಮ' ಸಿನಿಮಾದ ಹಾಡುಗಳು ಈಗಾಗಲೇ ಬಿಡುಗಡೆಯಾಗಿವೆ. ಈಗ ಟ್ರೇಲರ್ ರಿಲೀಸ್ ಸಮಯ ಬಂದಿದೆ. ಸಿನಿಮಾದ ಟ್ರೇಲರ್ ಯಾವಾಗ ಬಿಡುಗಡೆ ಎಂಬ ವಿಷಯವನ್ನು ಸಿನಿಮಾದ ನಿರ್ದೇಶಕ ಪವನ್ ಒಡೆಯರ್ ಇಂದು ಹಂಚಿಕೊಳ್ಳಲಿದ್ದಾರೆ. ರಚಿತಾ ರಾಮ್ ಚಿತ್ರದ ನಾಯಕಿಯಾಗಿದ್ದಾರೆ.

'ಬಟರ್ ಫ್ಲೈ' ಹಾಡು

'ಬಟರ್ ಫ್ಲೈ' ಹಾಡು

ರಮೇಶ್ ಅರವಿಂದ್ ನಿರ್ದೇಶನದಲ್ಲಿ ಬರುತ್ತಿರುವ 'ಬಟರ್ ಫ್ಲೈ' ಸಿನಿಮಾದ ಮೊದಲ ಹಾಡು ಹಬ್ಬದ ನಂತರದ ದಿನ, ಅಂದರೆ ಜನವರಿ 16ಕ್ಕೆ ಬಿಡುಗಡೆಯಾಗುತ್ತಿದ್ದಾರೆ. ಇದು ಕೂಡ ಮದುವೆಯ ಹಾಡಾಗಿದೆ. 'ಕ್ವೀನ್' ಚಿತ್ರದ ರಿಮೇಕ್ ಇದಾಗಿದ್ದು, ನಾಲ್ಕು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಿದೆ. ಕನ್ನಡದಲ್ಲಿ ಪಾರೂಲ್ ಯಾದವ್ ನಾಯಕಿಯಾಗಿದ್ದಾರೆ.

'ಮದಗಜ' ಹಾಡುಗಳು

'ಮದಗಜ' ಹಾಡುಗಳು

ಶ್ರೀ ಮುರಳಿ ನಟನೆಯ 'ಮದಗಜ' ಚಿತ್ರದ ಹಾಡುಗಳ ರೆಕಾರ್ಡಿಂಗ್ ನಾಳೆಯಿಂದ ಶುರುವಾಗಲಿದೆ. ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಬೆಳಗ್ಗೆ 7.30ಕ್ಕೆ ಪೂಜೆ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರಳಿ, ಅರ್ಜುನ ಜನ್ಯ, ಚೇತನ್ ಕುಮಾರ್ (ಭರಾಟೆ) ಉಮಾಪತಿ ಶ್ರೀನಿವಾಸ್ ಗೌಡ , ಸುಪ್ರೀತ್, ನಿರ್ದೇಶಕ ಮಹೇಶ್ ಕುಮಾರ್ ಭಾಗಿಯಾಗಲಿದ್ದಾರೆ.

'ಪೈಲ್ವಾನ್' ಟೀಸರ್

'ಪೈಲ್ವಾನ್' ಟೀಸರ್

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಪೈಲ್ವಾನ್' ಟೀಸರ್ ಸಹ ನಾಳೆ ಬಿಡುಗಡೆಯಾಗುತ್ತಿದೆ. ನಾಳೆ ಸಂಜೆ 4.45ಕ್ಕೆ ಚಿತ್ರದ ಟೀಸರ್ ಅಭಿಮಾನಿಗಳು ಮುಂದೆ ಇರಲಿದೆ. 'ಪೈಲ್ವಾನ್' ಕೃಷ್ಣ ನಿರ್ದೇಶನ ಹಾಗೂ ನಿರ್ಮಾಣದ ಸಿನಿಮಾವಾಗಿದೆ. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

More from Filmibeat

English summary
Kannada movie trailer and songs releasing on the occasion of sankranti.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X