For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ರಂತೆ ಕನ್ನಡದಲ್ಲೂ ಇದ್ದಾನೆ 'ಸುಲ್ತಾನ್'

  By Bharath Kumar
  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ್' ಬಾಕ್ಸ್ ಆಫೀಸ್ ನಲ್ಲಿ ಗೆದ್ದು ಬೀಗಿತ್ತು. ಈ ಚಿತ್ರದಲ್ಲಿ ಸಲ್ಮಾನ್ ಅವರನ್ನ ನೋಡಿದ ಸ್ಯಾಂಡಲ್ ವುಡ್ ಮಂದಿ, ಕನ್ನಡದಲ್ಲೂ ಇಂತಹ ಸಿನಿಮಾ ಮಾಡಬೇಕೆಂದುಕೊಂಡವರು ಇದ್ದಾರೆ.

  ಇಲ್ಲೊಂದು ಸಿನಿಮಾ ಸದ್ದಿಲ್ಲದೇ ಟೀಸರ್ ರಿಲೀಸ್ ಮಾಡಿ ಸಲ್ಮಾನ್ ಖಾನ್ ರೇಂಜ್ ಗೆ ಸುದ್ದಿ ಮಾಡುತ್ತಿದೆ. ಹೌದು, 'ತ್ರಿಬಾಹು' ಎಂಬ ಕನ್ನಡ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ನಾಯಕನಟನ ಎಂಟ್ರಿ, ಖದರ್, ಅಬ್ಬರ ಎಲ್ಲವೂ ಸಲ್ಮಾನ್ ಸಿನಿಮಾವನ್ನ ನೆನಪಿಸುತ್ತಿದೆ.

  ಸಲ್ಮಾನ್ ಸ್ಟೈಲ್ ನಲ್ಲೇ ಎಂದ ಮಾತ್ರಕ್ಕೆ ಇದು ರೀಮೇಕ್ ಚಿತ್ರವಲ್ಲ. ಅಪ್ಪಟ ಕನ್ನಡದ ಸಿನಿಮಾ. ನವ ನಟ ವಿಶ್ವ ಅಭಿನಯದ ಈ ಚಿತ್ರ ಕುಸ್ತಿಪಟುವಿನ ಸುತ್ತ ಕಥೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

  ಸದ್ಯ, ಟೀಸರ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಅಂದ್ಹಾಗೆ, ಈ ಚಿತ್ರವನ್ನ ಸ್ವತಃ ವಿಶ್ವ ಅವರೇ ನಿರ್ದೇಶನ ಮಾಡಿದ್ದಾರೆ.

  English summary
  Sri Vishwa Films Creation presents kannada movie 'Tribaahu' teaser release. the movie Staring vishwa, Vanditha, Umesh banakar in the lead role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X