'ಯು-ಟರ್ನ್' ಪ್ರೀಮಿಯರ್ ಶೋನಲ್ಲಿ ಪಾಲ್ಗೊಳ್ಳಿ ಉಚಿತ ಟೀ-ಶರ್ಟ್ ಪಡೆಯಿರಿ
'ಲೂಸಿಯಾ' ನಿರ್ದೇಶಕ ಪವನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಗದೊಂದು ವಿಭಿನ್ನ ಸಿನಿಮಾ 'ಯು-ಟರ್ನ್' ಬಿಡುಗಡೆಗೆ ಸಿದ್ಧವಾಗಿದ್ದು, ಈ ಅಂಗವಾಗಿ ಅಭಿಮಾನಿಗಳಿಗೆ ಎರಡು ಸಿಹಿ ಸುದ್ದಿ ಕಾದಿದೆ.
ಹೌದು 'ಬ್ರಹ್ಮೋತ್ಸವಂ' ಮತ್ತು 'ಯು-ಟರ್ನ್' ನಡುವೆ ಭೂಮಿಕಾ ಚಿತ್ರಮಂದಿರಕ್ಕಾಗಿ ನಡೆಯುತ್ತಿದ್ದ ಯುದ್ಧಕ್ಕೆ ಇದೀಗ ತೆರೆ ಬಿದ್ದಿದೆ. ಕೊನೆಗೂ ಬೆಂಗಳೂರಿನ ಗಾಂಧಿನಗರದಲ್ಲಿರುವ 'ಭೂಮಿಕಾ' ಚಿತ್ರಮಂದಿರ ಕನ್ನಡ ಚಿತ್ರ 'ಯು-ಟರ್ನ್' ಪಾಲಾಗಿದೆ.[ಇದೆಂತಹ ವಿಪರ್ಯಾಸ: ಕನ್ನಡ ಚಿತ್ರಗಳಿಗೆ ರಾಜಧಾನಿಯಲ್ಲೇ ಚಿತ್ರಮಂದಿರ ಇಲ್ಲ]

ಒಂದು ಸಿಹಿ ಸುದ್ದಿ ಇದಾದರೆ, ಇನ್ನೊಂದು ಸಿಹಿ ಸುದ್ದಿ ಏನಪ್ಪಾ ಅಂದ್ರೆ ಮುಖ್ಯ ಚಿತ್ರಮಂದಿರ 'ಭೂಮಿಕಾ' ದಲ್ಲಿ ಗುರುವಾರ (ಮೇ 19) ದಂದು ಸಂಜೆ 7 ಘಂಟೆಗೆ ಅಭಿಮಾನಿಗಳ ಒತ್ತಾಯದ ಮೇರೆಗೆ 'ಯು-ಟರ್ನ್' ಚಿತ್ರದ ಪ್ರೀಮಿಯರ್ ಶೋ ಹಮ್ಮಿಕೊಳ್ಳಲಾಗಿದೆ.
ಹಾಗೂ ಈ ಪ್ರೀಮಿಯರ್ ಶೋನಲ್ಲಿ ಪಾಲ್ಗೊಂಡು ಸಿನಿಮಾ ನೋಡಿದ ಪ್ರೇಕ್ಷಕರಿಗೆ 'ಯು-ಟರ್ನ್' ಎಂಬ ಬರಹ ಇರುವ ಟಿ-ಶರ್ಟ್ ಗಳು ಉಚಿತವಾಗಿ ದೊರೆಯುತ್ತವೆ. ಟಿಕೆಟ್ ದರಗಳು ಇಂತಿವೆ...[ಬಿಡುಗಡೆಗೂ ಮುನ್ನ ಸದ್ದು ಮಾಡುತ್ತಿದೆ ಪವನ್ ರ 'ಯು-ಟರ್ನ್']

ಬಾಲ್ಕನಿ: ರೂ. 250 + ಫ್ರೀ ಟೀ-ಶರ್ಟ್ (ನೇವಿ ಬ್ಲ್ಯು ಕಲರ್)
ಮಾಮೂಲಿ: ರೂ.150+ ಫ್ರೀ ಟೀ-ಶರ್ಟ್ (ಗ್ರೇ ಕಲರ್)
ಇನ್ನೊಂದು ವಿಷಯ ಏನಪ್ಪಾ ಅಂದ್ರೆ 'ಯು-ಟರ್ನ್' ಚಿತ್ರದ ಪೋಸ್ಟರ್ ಅನ್ನು ಶೇರ್ ಮಾಡಿದವರು ಪ್ರೀಮಿಯರ್ ಶೋ ನೋಡಲು ಸುಲಭವಾಗಿ ಪಾಸ್ ಗಿಟ್ಟಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕ ಪವನ್ ಕುಮಾರ್ ಅವರ ಫೇಸ್ ಬುಕ್ ಲಿಂಕ್ ಇಲ್ಲಿದೆ ಒಮ್ಮೆ ಕ್ಲಿಕ್ಕಿಸಿ...

ನವ ಪ್ರತಿಭೆ ಶ್ರದ್ಧಾ ಶ್ರೀನಾಥ್, 'ರಂಗಿತರಂಗ' ಬೆಡಗಿ ರಾಧಿಕಾ ಚೇತನ್, ಹಾಲಿವುಡ್ ಖ್ಯಾತಿಯ ನಟ ರೋಜರ್ ನಾರಾಯಣ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಮಿಂಚಿರುವ 'ಯು ಟರ್ನ್' ಸಿನಿಮಾ ಮೇ 20, ಶುಕ್ರವಾರದಂದು ಇಡೀ ಕರ್ನಾಟಕದಾದ್ಯಂತ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.[ಬಿಡುಗಡೆಗೂ ಮುನ್ನ ದಾಖಲೆ ಸೃಷ್ಟಿಸಿದ ಪವನ್ ರ 'ಯು ಟರ್ನ್']

ಈಗಾಗಲೇ ವಿದೇಶಗಳಲ್ಲಿ ಪ್ರದರ್ಶನ ಕಂಡು ಎಲ್ಲರ ಮೆಚ್ಚುಗೆ ಗಳಿಸಿರುವ 'ಯು-ಟರ್ನ್' ಸಿನಿಮಾ ಕರ್ನಾಟಕದಲ್ಲೂ ಕನ್ನಡ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಾವುದೇ ಅನುಮಾನ ಇಲ್ಲ.


Click it and Unblock the Notifications











