For Quick Alerts
  ALLOW NOTIFICATIONS  
  For Daily Alerts

  ವಿದೇಶಿ ಭಾಷೆಗೆ ರೀಮೇಕ್ ಆಗಲಿದೆ ಕನ್ನಡದ ಸಿನಿಮಾ

  |

  ಕನ್ನಡದ ಸಿನಿಮಾಗಳು ಆಗಾಗ್ಗೆ ಭಾರತದ ವಿವಿಧ ಭಾಷೆಗಳಿಗೆ ರೀಮೇಕ್ ಆಗುತ್ತಿರುತ್ತದೆ, ಇತರೆ ದಕ್ಷಿಣ ಭಾರತದ ಸಿನಿಮಾಗಳಿಗೆ ಹೋಲಿಸಿಕೊಂಡರೆ ಕನ್ನಡದ ಸಿನಿಮಾಗಳು ಬೇರೆ ಭಾಷೆಗಳಿಗೆ ರೀಮೇಕ್ ಆಗುವುದು ತುಸು ಕಡಿಮೆಯೇ.

  ಹೊಸ ಸಂತಸದ ಸುದ್ದಿಯೆಂದರೆ ಕನ್ನಡದ ಸಿನಿಮಾ ಒಂದು ವಿದೇಶಿ ಭಾಷೆಗೆ ರೀಮೇಕ್ ಆಗುತ್ತಿದೆ. ವಿದೇಶಿ ಭಾಷೆಯ ಸಿನಿಮಾದ ಪೋಸ್ಟರ್ ಸಹ ಈಗಾಗಲೇ ಬಿಡುಗಡೆ ಆಗಿದೆ.

  ಹೌದು, ಪವನ್ ಕುಮಾರ್ ನಿರ್ದೇಶನದ ಯೂ-ಟರ್ನ್ ಸಿನಿಮಾ ಫಿಲಿಪೀನ್ಸ್‌ ದೇಶದ ರಾಷ್ಟ್ರಭಾಷೆ ಫಿಲಿಫೀನೊ ಗೆ ರೀಮೇಕ್ ಆಗುತ್ತಿದೆ.

  ಫಿಲಿಫಿನೋ ಭಾಷೆಯಲ್ಲಿ ಸಹ ಸಿನಿಮಾಕ್ಕೆ ಯೂ-ಟರ್ನ್ ಎಂದೇ ಹೆಸರಿಡಲಾಗಿದೆ. ಫಿಲಿಫಿನೋ ಭಾಷೆಯಲ್ಲಿ ಡೆರಿಕ್ ಕ್ಯಾಬ್ರಿಡೊ ಎಂಬುವರು ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಕಿಮ್ ಚುವೊ ಎಂಬುವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವು ಇದೇ ತಿಂಗಳ 30 ರಂದು ಬಿಡುಗಡೆ ಆಗಲಿದೆ.

  ಕನ್ನಡದ ಯೂ-ಟರ್ನ್ ಸಿನಿಮಾವು ಈಗಾಗಲೇ ತೆಲುಗು ಹಾಗೂ ತಮಿಳು ಭಾಷೆಗೆ ರೀಮೇಕ್ ಆಗಿದೆ. ಸಮಂತಾ ಹಾಗೂ ಭೂಮಿಕ ಈ ರೀಮೇಕ್‌ನಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

  Bhakta Prahlada ಚಿತ್ರದಲ್ಲಿ ನಟಿಸಿದ್ದಾರೆ ನನ್ನ ಭಾಗ್ಯ ಎಂದು ಕಣ್ಣೀರಿಟ್ಟ ಅಪ್ಪು | Filmibeat Kannada

  ಕನ್ನಡದಲ್ಲಿ ಶ್ರದ್ಧಾ ಶ್ರೀನಾಥ್, ರಾಧಿಕಾ ನಾರಾಯಣ್, ದಿಲೀಪ್ ರಾಜ್, ರೋಜರ್ ನಾರಾಯಣ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾ ಒಳ್ಳೆಯ ಹಿಟ್ ಎನಿಸಿಕೊಂಡಿತ್ತು.

  English summary
  Kannada movie U Turn is being remade in Filipino language. Movie will releasing on this month end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X