»   » ಬಿಡುಗಡೆಗೂ ಮುನ್ನ ದಾಖಲೆ ಸೃಷ್ಟಿಸಿದ ಪವನ್ ರ 'ಯು ಟರ್ನ್'

ಬಿಡುಗಡೆಗೂ ಮುನ್ನ ದಾಖಲೆ ಸೃಷ್ಟಿಸಿದ ಪವನ್ ರ 'ಯು ಟರ್ನ್'

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಲೂಸಿಯಾ' ದಂತಹ ವಿಭಿನ್ನ ಸಿನಿಮಾ ಮಾಡಿ ಗೆದ್ದಿರುವ ನಿರ್ದೇಶಕ ಪವನ್ ಕುಮಾರ್ ಅವರು 'ಯು-ಟರ್ನ್' ಎನ್ನುವಂತಹ ಮತ್ತೊಂದು ವಿಭಿನ್ನ ಸಿನಿಮಾವನ್ನು ಕೈಗೆತ್ತಿಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ.

  ಈಗಾಗಲೇ ಚಿತ್ರದ ಟ್ರೈಲರ್ ಕೂಡ ಬಿಡುಗಡೆ ಆಗಿ ನಮ್ಮ ಕನ್ನಡ ಚಿತ್ರರಂಗದ ನಟ-ನಟಿಯರನ್ನು ಹಾಗೂ ಪ್ರೇಕ್ಷಕರನ್ನು ಸೆಳೆದಿದ್ದು ಮಾತ್ರವಲ್ಲದೇ, ಪರಭಾಷಾ ನಟ-ನಟಿಯರನ್ನು ಚಿತ್ರದ ಟ್ರೈಲರ್ ಸೆಳೆಯುವಲ್ಲಿ ಯಶಸ್ವಿಯಾಗಿದೆ.['ಯು ಟರ್ನ್' ಡಬ್ಬಲ್ ರೋಡ್ ಫ್ಲೈ ಓವರ್ ಮೇಲೆ ಏನಿರಬಹುದು?]


  ಅಂದಹಾಗೆ ಈ ಚಿತ್ರ ಎಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಕಾಣಲಿದ್ದು, ಬಿಡುಗಡೆಗೂ ಮುನ್ನವೇ ರೆಕಾರ್ಡ್ ಬ್ರೇಕ್ ಮಾಡಿದೆ. ಖ್ಯಾತ ವಿತರಣಾ ಸಂಸ್ಥೆ 'ದೃಶ್ಯಂ ಫಿಲ್ಮ್ಸ್' ಅವರು ಇಂಗ್ಲೀಷ್ ಸಬ್ ಟೈಟಲ್ ಇರುವ 'ಯು-ಟರ್ನ್' ಚಿತ್ರದ ಕಾಪಿಯನ್ನು ಇಡೀ ವಿಶ್ವದಾದ್ಯಂತ ವಿತರಣೆ ಮಾಡಲು ವಿತರಣಾ ಹಕ್ಕನ್ನು ಖರೀದಿ ಮಾಡಿದ್ದಾರೆ.


  ಈ ವಿತರಣಾ ಸಂಸ್ಥೆ ಕರ್ನಾಟಕ ಪ್ರದೇಶಗಳಲ್ಲಿ ಬಿಟ್ಟು ಇನ್ನಿತರೇ ಪ್ರದೇಶಗಳಾದ ಮುಂಬೈ, ಥಾಣೆ, ಪುಣೆ, ಅಹಮದಾಬಾದ್, ದೆಹಲಿ ಎನ್.ಸಿ.ಆರ್, ಚೆನ್ನೈ, ಹೈದಾರಾಬಾದ್, ಕೊಚ್ಚಿ ಮತ್ತು ವಿಜಯವಾಡಗಳಲ್ಲಿ 'ಯು-ಟರ್ನ್' ಚಿತ್ರವನ್ನು ಇಂಗ್ಲೀಷ್ ಸಬ್ ಟೈಟಲ್ ನೊಂದಿಗೆ ವಿತರಣೆ ಮಾಡಲಿದೆ.['ರಂಗಿ' ಆಯ್ತು ಇದೀಗ 'ಯೂ-ಟರ್ನ್' ತೆಗೆದುಕೊಂಡ ರಾಧಿಕಾ ಚೇತನ್.!]


  ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ, ಡಾಲ್ಬಿ ಅಟ್ಮೋಸ್ ಸೌಂಡ್ ಎಫೆಕ್ಟ್ ಇರುವ ಮೊದಲ ಕನ್ನಡ ಚಿತ್ರ ಇದಾಗಲಿದ್ದು, ಚಿತ್ರಮಂದಿರಗಳಲ್ಲಿ ಈ ಸಿನಿಮಾ ನಿಮಗೆ ವಿಶೇಷ ಅನುಭವ ಹಾಗೂ ಒಳ್ಳೆ ಸೌಂಡ್ ಎಫೆಕ್ಟ್ ನೀಡಲಿದೆ.


  ಕರ್ನಾಟಕ ಪ್ರದೇಶ ಬಿಟ್ಟು ಉಳಿದ ಯಾವ ಯಾವ ಪ್ರದೇಶಗಳಲ್ಲಿ ಬಿಡುಗಡೆ ಆಗಲಿದೆ, ಹಾಗೂ ಅಲ್ಲಿನ ಥಿಯೇಟರ್ ನ ತಾತ್ಕಾಲಿಕ ಲಿಸ್ಟ್ ಅನ್ನು ನಿರ್ದೇಶಕ ಪವನ್ ಕುಮಾರ್ ಫೇಸ್ ಬುಕ್ಕಿನಲ್ಲಿ ಹಾಕಿಕೊಂಡಿದ್ದಾರೆ. ಲಿಸ್ಟ್ ನೋಡಲು ಸ್ಲೈಡ್ಸ್ ಕ್ಲಿಕ್ ಮಾಡಿ...


  ಮುಂಬೈ ಪ್ರದೇಶ

  ಪಿ.ವಿ.ಆರ್ ಜುಹು, (PVR Juhu) ಪಿ.ವಿ.ಆರ್ ಫೊನಿಕ್ಸ್ ಲೋವರ್ ಪ್ಯಾರಲ್,(PVR Phoenix Lower Parel) ಪಿ.ವಿ.ಆರ್ ಅಂಧೇರಿ, (PVR Andheri) ಪಿ.ವಿ.ಆರ್ ಐಕಾನ್ ವರ್ಸೋವಾ, (PVR Icon Versova) ಪಿ.ವಿ.ಆರ್ ಮುಲುಂದ್, (PVR Mulund) ಪಿ.ವಿ.ಆರ್ ಕುರ್ಲಾ,(PVR Kurla) ಸಿನಿಮ್ಯಾಕ್ಸ್ ಸಿಯೋನ್, (Cinemax Sion) ಸಿನಿಪೊಲಿಸ್ ಚೆಂಬುರ್ (Cinepoils Chembur) ಮುಂತಾದ ಮುಂಬೈನ ಚಿತ್ರಮಂದಿರಗಳಲ್ಲಿ ಪವನ್ ಕುಮಾರ್ ಅವರ 'ಯು-ಟರ್ನ್' ಸಿನಿಮಾ ರಿಲೀಸ್ ಆಗಲಿದೆ.[ನಿಕೋಟಿನ್ ಸೇವಿಸುವ ಮೊದಲು ಯೂ ಟರ್ನ್ ಹೊಡೆದ ಪವನ್]


  ಥಾಣೆ

  ಸಿನಿಪೊಲಿಸ್ ವಿವಿಯಾನ್ ಮಾಲ್ ಥಾಣೆ (Cinepolis Viviana Mall Thane) ಯಲ್ಲಿ ಪವನ್ ಕುಮಾರ್ ನಿರ್ದೇಶನದ 'ಯು-ಟರ್ನ್' ಬಿಡುಗಡೆ ಆಗುತ್ತಿದೆ.[ಪಾಕ್ ನಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರ]


  ಪುಣೆ

  ಪುಣೆಯ ಪಿ.ವಿ.ಆರ್ ಕೊರಿಯಗಾನ್ ಪಾರ್ಕ್ (PVR Koregaon Park) ಪಿ.ವಿ.ಆರ್ ಮಾರ್ಕೆಟ್ ಸಿಟಿ ವಿಮಾನ್ ನಗರ ( PVR Marketcity Viman Nagar) ಮುಂತಾದ ಚಿತ್ರಮಂದಿರಗಳಲ್ಲಿ 'ಯು-ಟರ್ನ್' ಸಿನಿಮಾ ತೆರೆ ಕಾಣುತ್ತಿದೆ.


  ಅಹಮದಾಬಾದ್

  ಪಿ.ವಿ.ಆರ್ ಅಕ್ರೊಪೊಲಿಸ್ ಮಾಲ್ ಅಹಮದಾಬಾದ್ ( PVR Acropolis Mall Ahmedabad)


  ದೆಹಲಿ ಎನ್.ಸಿ.ಆರ್

  ಪಿ.ವಿ.ಆರ್ ನರೈನಾ, (PVR Naraina) ಡಿ.ಟಿ ವಸಂತ್ ಕುಂಜಿ, (DT Vasant Kunj) ಕಾರ್ನಿವಲ್ ಸಿನಿಮಾಸ್ TGIP ನೋಯ್ಡಾ (Carnival Cinemas TGIP Noida) ಪಿ.ವಿ.ಆರ್ MGF ಮಾಲ್ ಗುರ್ ಗಾಂವ್ (PVR MGF Mall Gurgaon)


  ಚೆನ್ನೈ

  ಸತ್ಯಂ ಚೆನ್ನೈ, (Satyam Chennai) ಎಸ್ಕೇಪ್ ಚೆನ್ನೈ, (Escape Chennai) ಪಿ.ವಿ.ಆರ್ ಅಂಪ ಚೆನ್ನೈ, (PVR Ampa Chennai) ಪಿ.ವಿ.ಆರ್ ವೆಲಾಚೆರ್ರಿ, (PVR Velacherry Chennai)


  ಹೈದರಾಬಾದ್

  ಪಿ.ವಿ.ಆರ್ ಪಂಜಗುಟ್ಟ, (PVR Panjagutta) ಪಿ.ವಿ.ಆರ್ ಐನೋರ್ ಬಿಟ್ ಸೈಬರ್ ಬ್ಯಾಡ್, (PVR Inorbit Cyberbad) ಪಿ.ವಿ.ಆರ್ ಕುಕಟ್ ಪಲ್ಲಿ ಹೈದರಾಬಾದ್, (PVR Kukatpally Hyderabad)


  ಕೊಚ್ಚಿ

  ಪಿ.ವಿ.ಆರ್ ಲೂಲು ಮಾಲ್ ಕೊಚ್ಚಿ (PVR Lulu Mall Kochi)


  ವಿಜಯವಾಡ

  ಪಿ.ವಿ.ಆರ್ ರಿಪ್ಪಲ್ಸ್ ವಿಜಯವಾಡ (PVR Ripples Vijaywada)


  ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ

  ನವ ಪ್ರತಿಭೆ ಶ್ರದ್ಧಾ ಶ್ರೀನಾಥ್, 'ರಂಗಿತರಂಗ' ಬೆಡಗಿ ರಾಧಿಕಾ ಚೇತನ್, ದಿಲೀಪ್ ರಾಜ್, ಹಾಲಿವುಡ್ ಸಿನಿಮಾ ರಂಗದ ರೋಜರ್ ನಾರಾಯಣ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಎಪ್ರಿಲ್ ತಿಂಗಳಿನಲ್ಲಿ ಸಿನಿಮಾ ತೆರೆ ಮೇಲೆ ಬರುವ ಸಾಧ್ಯತೆ ಇದೆ.


  English summary
  Mumbai-based production company Drishyam Films has announced its first foray into the movie distribution business with acclaimed 'Lucia' fame writer-director Pawan Kumar’s Kannada thriller Movie 'U Turn'. Actress Shraddha Srinath, Kannada Actress Radhika Chetan, Actor Dilip Raj in the lead role.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more