ಫಿಲಿಫೀನ್ಸ್ ದೇಶದ ಸಿನಿಪ್ರಿಯರ ಮನಗೆಲ್ಲಲು ಹೊರಟಿದೆ ಕನ್ನಡದ 'ಯೂ-ಟರ್ನ್'
ಕನ್ನಡದಲ್ಲಿ ಭರ್ಜರಿ ಹಿಟ್ ಎನಿಸಿಕೊಂಡು ವಿಮರ್ಶಕರಿಂದಲೂ ಮೆಚ್ಚುಗೆ ಪಡೆದ ಪವನ್ ಕುಮಾರ್ ನಿರ್ದೇಶನದ 'ಯೂ-ಟರ್ನ್' ಸಿನಿಮಾ ಫಿಲಿಫೀನ್ಸ್ ಗೆ ತೆರಳಲು ಸಜ್ಜಾಗಿದೆ.
ಫಿಲಿಫೀನ್ ನ ಎಬಿಎಸ್-ಸಿಬಿಎನ್ ನಿರ್ಮಾಣ ಸಂಸ್ಥೆಯು ಯೂ-ಟರ್ನ್ ಸಿನಿಮಾವನ್ನು ರಿಮೇಕ್ ಮಾಡಲು ಸಿದ್ಧವಾಗಿದ್ದು, ನಟರನ್ನೂ ಘೋಷಣೆ ಮಾಡಿಯಾಗಿದೆ.
ಫಿಲಿಫೀನ್‌ನ ಖ್ಯಾತ ನಿರ್ದೇಶಕ ಡೆರಿಕ್ ಕ್ಯಾಬ್ರಿಡೊ ಎಂಬುವರು ಯೂ-ಟರ್ನ್ ಚಿತ್ರವನ್ನು ರೀಮೇಕ್ ಮಾಡಲಿದ್ದಾರೆ. ಕಿಂ ಚ್ಯು, ಡಿ ಗುಜ್‌ಮನ್, ಟೋನಿ ಲ್ಯಾಬ್ರುಸ್ಕಾ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.

ಯೂ-ಟರ್ನ್ ಚಿತ್ರವು ಈಗಾಗಲೇ ತೆಲುಗು-ತಮಿಳು ಭಾಷೆಗೆ ರೀಮೇಕ್ ಆಗಿ ಮೆಚ್ಚುಗೆ ಗಳಿಸಿದೆ. ಅಲ್ಲಿ ಖ್ಯಾತ ನಟಿಯರಾದ ಸಮಂತಾ ಅಕ್ಕಿನೇನಿ ಮತ್ತು ಭೂಮಿಕಾ ಚಾವ್ಲಾ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಮಲೆಯಾಳಂ ನಲ್ಲಿ ಕೇರ್‌ಫುಲ್ ಎಂಬ ಹೆಸರಿನಲ್ಲಿ ರೀಮೇಕ್ ಆಗಿ ಮೆಚ್ಚುಗೆ ಗಳಿಸಿತ್ತು.
More from Filmibeat
English summary
Kannada movie U-turn to remade in Philippines. It was originally made in Kannada in 2016 by director Pawan Kumar.


Click it and Unblock the Notifications











