'ಉದ್ದಿಶ್ಯ' ಸಿನಿಮಾ ನೋಡೋದಕ್ಕೆ ಈ ಒಂದು ಕಾರಣ ಸಾಕು
ಟೈಟಲ್ ಹಾಗೂ ಟ್ರೈಲರ್ ಮೂಲಕ ಕುತೂಹಲ ಮೂಡಿಸಿರುವ 'ಉದ್ದಿಶ್ಯ' ನಾಳೆ (ಆಗಸ್ಟ್ 31) ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಸಸ್ಪೆನ್ಸ್-ಥ್ರಿಲ್ಲರ್ ಕಥಾ ಹಂದರವನ್ನ ಹೊಂದಿರುವ ಈ ಸಿನಿಮಾ ಕನ್ನಡ ಪ್ರೇಕ್ಷಕರಿಗೆ ಒಂದೊಳ್ಳೆ ಮನರಂಜನೆ ನೀಡುವ ಉದ್ದೇಶದಿಂದ ಥಿಯೇಟರ್ ಗೆ ಪ್ರವೇಶ ಮಾಡ್ತಿದೆ.
ಶೀರ್ಷಿಕೆಯಿಂದ ವಿಭಿನ್ನವೆನಿಸಿಕೊಂಡಿರುವ ಈ ಚಿತ್ರ ಸಂಪೂರ್ಣವಾಗಿ ಹೊಸಬರೇ ತಯಾರಿಸಿರುವುದು. ಹಾಲಿವುಡ್ ಬರಹಗಾರ ಬರೆದಿರುವ ಕಥೆಯನ್ನ ಇಟ್ಟುಕೊಂಡು ಕನ್ನಡದ ಸಂಸ್ಕ್ರತಿಗೆ ತಕ್ಕಂತೆ ಸಿನಿಮಾ ಮಾಡಿದ್ದಾರೆ.

ಈ ಸಿನಿಮಾವನ್ನ ಯಾಕೆ ನೋಡಬೇಕು ಎಂದು ನಿರ್ದೇಶಕರನ್ನ ಕೇಳಿದಾಗ, ''ಚಿತ್ರ ಆರಂಭದಿಂದ ಕೊನೆಯವರೆಗೂ ನಿಮಗೆ ಮನರಂಜನೆ ನೀಡುತ್ತೆ, ಎಂಜಾಯ್ ಮಾಡ್ತೀರಾ, ಸಿನಿಮಾ ಮುಗಿದ್ಮೇಲೆ ಅದರ ಬಗ್ಗೆ ಯೋಚನೆ ಮಾಡ್ತೀರಾ'' ಅಂತಾರೆ. ಒಂದು ಸಿನಿಮಾ ನೋಡೋಕೆ ಇದಕ್ಕಿಂತ ಮತ್ತೇನ್ ಬೇಕು. ಚಿತ್ರದ ಬಗ್ಗೆ ನಟ-ನಿರ್ದೇಶಕ-ನಿರ್ಮಾಪಕ ಹೇಮಂತ್ ಹಾಗೂ ಇಚ್ಚ ಡಾಲ್ ಮಾತನಾಡಿರುವ ಸಂದರ್ಶನದ ವಿಡಿಯೋ ಇಲ್ಲಿದೆ.
ಹೇಮಂತ್ ಕೃಷ್ಣಪ್ಪ ಈ ಚಿತ್ರವನ್ನ ನಿರ್ದೇಶಿಸಿ, ನಿರ್ಮಿಸಿ, ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಇವರ ಜೊತೆ ಅರ್ಚನಾ ಗಾಯಕ್ವಾಡ್, ಅಕ್ಷತಾ, ಇಚ್ಚ ಡಾಲ್, ಅನಂತವೇಲು, ಅಶ್ವತ್ ನಾರಾಯಣ್, ವಿಜಯ್ ಕೌಂಡಿನ್ಯ, ಮುಂತಾದವರು ಸಾಥ್ ನೀಡಿದ್ದಾರೆ.
ಇನ್ನುಳಿದಂತೆ ಸಹ ನಿರ್ಮಾಪಕರು - ಗ್ಯಾರಿ ಗ್ರಿಫಿನ್ & ಕಾರ್ಲಸ್ ಹೆಜಿನ್, ಛಾಯಾಗ್ರಹಣ - ಚೇತನ್ ರಘುರಾಮ್, ಮೂಲ ಕಥೆ - ರಾಬರ್ಟ್ ಗ್ರಿಫಿನ್, ಸಂಕಲನ-ವೆಂಕಟೇಶ್ ಯು.ಡಿ.ವಿ, ಸಿಂಕ್ ಸೌಂಡ್- ಅದಮ್ಯ ಚೇತನ್, ಸಂಗೀತ - ಶದ್ರಚ್ ಸಾಲೊಮನ್ ಒದಗಿಸಿದ್ದಾರೆ.


Click it and Unblock the Notifications











