ಹಾಲಿವುಡ್ ಶೈಲಿಯ 'ಉದ್ದಿಶ್ಯ' ಚಿತ್ರ ಇದೇ ವಾರ ರಿಲೀಸ್
ಟೈಟಲ್ ಹಾಗೂ ಟ್ರೈಲರ್ ಮೂಲಕ ಹೊಸ ರೀತಿಯಲ್ಲಿ ಕುತೂಹಲ ಹುಟ್ಟುಹಾಕಿರುವ 'ಉದ್ದಿಶ್ಯ' ಸಿನಿಮಾ ಆಗಸ್ಟ್ 31 ರಂದು ರಾಜ್ಯಾದ್ಯಂತ ತೆರೆಗೆ ಬರ್ತಿದೆ. ಸಸ್ಪೆನ್ಸ್-ಥ್ರಿಲ್ಲರ್ ಕಥಾ ಹಂದರವನ್ನ ಹೊಂದಿರುವ ಈ ಸಿನಿಮಾ ಕನ್ನಡ ಪ್ರೇಕ್ಷಕರಿಗೆ ಒಂದೊಳ್ಳೆ ಮನರಂಜನೆ ನೀಡುವ ಉದ್ದೇಶದಿಂದ ಥಿಯೇಟರ್ ಗೆ ಪ್ರವೇಶ ಮಾಡ್ತಿದೆ.
ಅಂದ್ಹಾಗೆ, ಈ ಸಿನಿಮಾ ಬಿಡುಗಡೆಗೂ ಮುಂಚೆ ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ. ವಿದೇಶಗಳಲ್ಲಿ ನಡೆಯುತ್ತಿರುವ ಚಿತ್ರೋತ್ಸವದಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿಕೊಂಡಿದೆ.
ನ್ಯೂಯಾರ್ಕ್‌ನಲ್ಲಿ ನಡೆಯುವ "ಟು ಡಾಲರ್ ಫಿಲ್ಮ್ ಫೆಸ್ಟಿವಲ್'ಗೆ ಅಧಿಕೃತ ಆಯ್ಕೆಗೊಂಡಿದೆ. ಜಪಾನ್‌ನಲ್ಲಿ ನಡೆಯುವ "ಜಾನರ್ ಸೆಲೆಬ್ರೇಷನ್ ಫಿಲ್ಮ್ ಫೆಸ್ಟಿವಲ್'ನಲ್ಲೂ ಅಧಿಕೃತವಾಗಿ ಸೆಲೆಕ್ಟ್ ಆಗಿದೆ. ಅಷ್ಟೇ ಅಲ್ಲ, "ಟಾಪ್ ಇಂಡಿ ಅವಾರ್ಡ್ಸ್ ಆನ್‌ಲೈನ್ ಫಿಲ್ಮ್ ಫೆಸ್ಟಿವಲ್'ಗೆ ಒರಿಜಿನಲ್ ಐಡಿಯಾ ಹಾಗೂ ಮೋಸ್ಟ್ ಟೆರಿಫೈಯಿಂಗ್ ಕೆಟಗರಿಯಲ್ಲಿ ನಾಮ ನಿರ್ದೇಶನಗೊಂಡಿದೆ. ಇದರೊಂದಿಗೆ 'ಬಾರ್ಸಿಲೋನ ಪ್ಲಾನೆಟ್ ಫಿಲ್ಮ್ ಫೆಸ್ಟಿವಲ್'ನಲ್ಲೂ ಚಿತ್ರಪ್ರದರ್ಶನಕ್ಕೆ ಆಹ್ವಾನ ಸಿಕ್ಕಿದೆ.

ಇದು ಬಿಡುಗಡೆಗೂ ಮುಂಚೆ ಚಿತ್ರಕ್ಕೆ ಸಿಕ್ಕಿರುವ ಗೆಲವು ಎನ್ನಬಹುದು. ಹೀಗಾಗಿ, ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆದ್ಮೇಲೆ ಇದೇ ಯಶಸ್ಸನ್ನ ಗಳಿಸಿಕೊಳ್ಳುವ ಭರವಸೆ ಮೂಡಿಸಿದೆ. ವಿಶೇಷ ಅಂದ್ರೆ, ಈ ಸಿನಿಮಾ ಹಾಲಿವುಡ್ ಶೈಲಿಯಲ್ಲಿ ತಯಾರಾಗಿದೆ. ತಾಂತ್ರಿಕ ವಿಭಾಗದಲ್ಲಿ ವಿದೇಶಿಯರೇ ಕೆಲಸ ಮಾಡಿದ್ದಾರೆ. ಸಿನಿಮಾದ ಸೂತ್ರಧಾರ ನಟ-ನಿರ್ದೇಶಕ-ನಾಯಕ ಯುಎಸ್ ನಲ್ಲಿ ವಾಸವಾಗಿದ್ದವರೇ.
ಹೇಮಂತ್ ಕೃಷ್ಣಪ್ಪ ಈ ಚಿತ್ರವನ್ನ ನಿರ್ದೇಶಿಸಿ, ನಿರ್ಮಿಸಿ, ಜೊತೆಗೆ ನಾಯಕರಾಗಿಯೂ ನಟಿಸಿದ್ದಾರೆ. ಇವರ ಜೊತೆ ಅರ್ಚನಾ ಗಾಯಕ್ವಾಡ್, ಅಕ್ಷತಾ, ಅನಂತವೇಲು, ಅಶ್ವತ್ ನಾರಾಯಣ್, ವಿಜಯ್ ಕೌಂಡಿನ್ಯ, ಮುಂತಾದವರು ಸಾಥ್ ನೀಡಿದ್ದಾರೆ.

ಇನ್ನುಳಿದಂತೆ ಸಹ ನಿರ್ಮಾಪಕರು - ಗ್ಯಾರಿ ಗ್ರಿಫಿನ್ & ಕಾರ್ಲಸ್ ಹೆಜಿನ್, ಛಾಯಾಗ್ರಹಣ - ಚೇತನ್ ರಘುರಾಮ್, ಮೂಲ ಕಥೆ - ರಾಬರ್ಟ್ ಗ್ರಿಫಿನ್, ಸಂಕಲನ-ವೆಂಕಟೇಶ್ ಯು.ಡಿ.ವಿ, ಸಿಂಕ್ ಸೌಂಡ್- ಅದಮ್ಯ ಚೇತನ್, ಸಂಗೀತ - ಶದ್ರಚ್ ಸಾಲೊಮನ್ ಒದಗಿಸಿದ್ದಾರೆ.


Click it and Unblock the Notifications











