»   » 'ಉಪ್ಪಿ 2' ಚಿತ್ರದ ಹೊಚ್ಚ ಹೊಸ ಪೋಸ್ಟರ್ ರಿಲೀಸ್

'ಉಪ್ಪಿ 2' ಚಿತ್ರದ ಹೊಚ್ಚ ಹೊಸ ಪೋಸ್ಟರ್ ರಿಲೀಸ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಅವರು ಇಷ್ಟೇಲ್ಲಾ ವಿವಾದದ ಸದ್ದು-ಗದ್ದಲದ ನಡುವೆಯೂ ಸೈಲೆಂಟಾಗಿ ತಮ್ಮ 'ಉಪ್ಪಿ 2' ಚಿತ್ರದ ಹೊಚ್ಚ ಹೊಸ ಪೋಸ್ಟರ್ ಗಳನ್ನು ರಿಲೀಸ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಜಗ್ಗೇಶ್ ಹಾಗೂ ಉಪೇಂದ್ರ ಅಭಿಮಾನಿಗಳ ನಡುವೆ ಟ್ವಿಟ್ಟರ್ ನಲ್ಲಿ 'ಉಪ್ಪಿ 2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್' ಹಾಡಿನ ಬಗ್ಗೆ ಟ್ವಿಟ್ಟರ್ ವಾರ್ ನಡೆಸಿದ್ದು, ಈ ಇಡೀ ಅವಾಂತರದಿಂದ ಗಾಂಧಿನಗರದಲ್ಲಿ 'ಉಪ್ಪಿ 2' ಚಿತ್ರಕ್ಕೆ ಬಿಟ್ಟಿ ಪ್ರಚಾರ ಆಗಿದ್ದಂತೂ ಗ್ಯಾರಂಟಿ.


ಇದೀಗ 'ಉಪ್ಪಿ 2' ಚಿತ್ರದ ಡಿಫರೆಂಟ್ ಪೋಸ್ಟರ್ ಗಳು ರಿಲೀಸ್ ಆಗಿದ್ದು, ರಿಯಲ್ ಸ್ಟಾರ್ ಸಖತ್ ಡಿಫರೆಂಟ್ ಕಾಸ್ಟ್ಯೂಮ್ಸ್ ನಲ್ಲಿ ಮಿಂಚಿದ್ದಾರೆ.[ಉಪ್ಪಿಗಿಂತ ರುಚಿ ಬೇರೆ ಇಲ್ಲ! ಯಾಕೆ ಗೊತ್ತಾ?]


Kannada movie Uppi 2 New look Poster Out

ಎಕ್ಸ್ ಕ್ಲೂಸಿವ್ ಪೋಸ್ಟರ್ ನಲ್ಲಿ ಇವನು ನೋಡೋಕೆ 'ನಾನು' ಇದ್ದಂಗೆ ಇಲ್ಚಾ?!! ಅಂತ ಉಪೇಂದ್ರ ಅವರು ಪ್ರೇಕ್ಷಕನಿಗೆ 'ನಾನು', 'ನೀನು' ಎನ್ನುವ ಕನ್ ಫ್ಯೂಶನ್ ಸೃಷ್ಟಿ ಮಾಡಿದ್ದಾರೆ. [ಟ್ವಿಟ್ಟರ್ ನಲ್ಲಿ ಜಗ್ಗೇಶ್ ವಿರುದ್ಧ ಉಪೇಂದ್ರ ಅಭಿಮಾನಿಗಳ ಯುದ್ಧ]


ಇದೀಗ ರಿಲೀಸ್ ಆಗಿರೋ ಹೊಸ ಪೋಸ್ಟರ್ ನಲ್ಲಿ ಉಪ್ಪಿ ಸಖತ್ ಸ್ಟೈಲೀಷ್ ಆಗಿ ಕಾಣುತ್ತಿದ್ದಾರೆ. ಒಂದಕ್ಕಿಂತ ಒಂದು ಪೋಸ್ಟರ್ ಡಿಫರೆಂಟಾಗಿದೆ.


ಭಂಗಿ ಸೇದುವ ಪೋಸ್ಟರ್ ಸೇರಿದಂತೆ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಮಾರ್ಡನ್ ಮಹರ್ಷಿ ಯಂತೆ ಚಿತ್ರವಿಚಿತ್ರ ಪೋಸ್ಟರ್ ಗಳಲ್ಲಿ ಕಾಣಿಸಿಕೊಂಡು ಉಪೇಂದ್ರ ತಮ್ಮ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದಾರೆ. ['ಉಪ್ಪಿ 2' ಪೋಸ್ಟರ್ ಯಾಕೆ ಖಾಲಿಯಾಗೈತೆ!]


ಪೋಸ್ಟರ್ ಗಳಲ್ಲೇ ಈ ಥರಾದ ಫೋಸ್ ಇರಬೇಕು ಅಂದ್ರೆ, ಇನ್ನೂ ಸಿನೆಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಝಲಕ್ ಹೇಗಿರಬಹುದು ಅಂತಾ ನೀವೇ ಊಹಿಸಿ. ಅದೇನೇ ಇರಲಿ ಇವಿಷ್ಟು 'ಉಪ್ಪಿ 2' ನ ಈಗಿನ ಸುದ್ದಿ. ಹೆಚ್ಚಿನ ಸುದ್ದಿಗಾಗಿ ಚಿತ್ರ ಬಿಡುಗಡೆ ಕಾಣುವ ತನಕ ಕಾದು ನೋಡಬೇಕು.

English summary
Kannada movie "Uppi 2" New look Poster is released. "Uppi 2" features Kannada actor Upendra, Actress Kristina in the lead roles. The movie is directed by Upendra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada