ದೇಸಾಯಿ 'ಉದ್ಘರ್ಷ'ಕ್ಕೆ ಆವೇಶ ಮತ್ತು ಆಕ್ರೋಶದ 'ಸ್ಪರ್ಶ'
ಕನ್ನಡ ಚಿತ್ರರಂಗದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಸುನೀಲ್ ಕುಮಾರ್ ದೇಸಾಯಿ ಅವರು ಹೊಸ ಸಿನಿಮಾ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚು ಮಾಡುತ್ತಿದೆ. ಶೀರ್ಷಿಕೆ, ಪೋಸ್ಟರ್ ನಿಂದ ದೊಡ್ಡ ಮಟ್ಟದ ಸದ್ದು ಮಾಡುತ್ತಿರುವ ಈ ಸಿನಿಮಾ ಈಗ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿ ಸಂಚಲನ ಸೃಷ್ಟಿಸಿದೆ.
ದೇಸಾಯಿ ಸಿನಿಮಾಗಳಲ್ಲಿ ಇರುವಂತಹ ಸಸ್ಪೆನ್ಸ್, ಥ್ರಿಲ್ಲಿಂಗ್, ರೋಚಕತೆ, ಕಥೆ ಎಲ್ಲವನ್ನ ಈ ಚಿತ್ರದಲ್ಲಿ ನಿರೀಕ್ಷೆ ಮಾಡಲಾಗಿದೆ. ಇದರ ಜೊತೆ ಆವೇಶ ಮತ್ತು ಆಕ್ರೋಶದ ಸ್ಪರ್ಶ ಈ ಉದ್ಘರ್ಷದಲ್ಲಿ ಹೆಚ್ಚಿದೆ ಎಂಬ ಸುಳಿವು ಈ ಪೋಸ್ಟರ್ ನೀಡಿದೆ.
ಈಗಾಗಲೇ ಬಹುತೇಕ ಚಿತ್ರೀಕರಣವನ್ನು ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ ನೀಡಿದೆ. 'ಉದ್ಘರ್ಷ' ಚಿತ್ರವನ್ನು ಏಕಕಾಲದಲ್ಲಿ ಕನ್ನಡ, ತೆಲಗು, ತಮಿಳಿನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿರುವ ಸುನೀಲ್ ಕುಮಾರ್ ದೆಸಾಯಿ, ಅದಕ್ಕೆ ಪೂರಕವಾದ ನಟ-ನಟಿಯರನ್ನೇ ಈ ಚಿತ್ರದಲ್ಲಿ ಹಾಕಿಕೊಂಡಿದ್ದಾರೆ.

ಬಹುಭಾಷಾ ನಟನಾಗಿ ಮಿಂಚುತ್ತಿರುವ ಮಿಸ್ಟರ್ ವರ್ಲ್ಡ್ ಸಿಂಗಮ್ -3 ಖ್ಯಾತಿಯ ಠಾಕೂರ್ ಅನೂಪ್ ಸಿಂಗ್, 'ಕಬಾಲಿ' ಖ್ಯಾತಿಯ ಧನ್ಸಿಕಾ, ತಾನ್ಯಾ ಹೋಪ್, ಕಬೀರ್ ಸಿಂಗ್ ದುಹಾನ್, ಬಾಹುಬಲಿ ಖ್ಯಾತಿಯ ಪ್ರಭಾಕರ್, ಕಿಶೋರ್, ವಂಶಿಕೃಷ್ಣ, ಶ್ರವಣ್ ರಾಘವೇಂದ್ರ, ಶ್ರದ್ಧಾ ದಾಸ್, ಮತ್ತು ಅತಿಥಿ ಪಾತ್ರದಲ್ಲಿ ಹರ್ಷಿಕಾ ಪೂಣಚ್ಚ ಸೇರಿದಂತೆ ಬಹುದೊಡ್ಡ ತಾರಾಗಣವನ್ನ ಒಳಗೊಂಡಿದೆ.
ಈ ಚಿತ್ರವನ್ನು ಡಿ ಕ್ರಿಯೇಷನ್ಸ್ ಅಡಿಯಲ್ಲಿ ದೇವರಾಜ್ R ನಿರ್ಮಿಸುತ್ತಿದ್ದು, ಅವರ ಮಿತ್ರರಾದ ಮಂಜುನಾಥ್ .ಡಿ , ತಿರುಮಲೈ , ರಾಜೇಂದ್ರ ಕುಮಾರ್ ಸಹ ನಿರ್ಮಾಪಕರರಾಗಿ ಕೈ ಜೋಡಿಸಿದ್ದಾರೆ.

ಚಿತ್ರದ ಕಥಾವಸ್ತು ವಿಭಿನ್ನವಾಗಿದ್ದು ಅದಕ್ಕೆ M.S ಧೋನಿ , ಬೇಬೀ, ಏ ವೆಡ್ನೆಸ್ಡೇ ಖ್ಯಾತಿಯ ಸಂಜೋಯ್ ಚೌದುರಿ ಸಂಗೀತ ಸಂಯೋಜಿಸುತ್ತಿದ್ದಾರೆ. ವಿಷ್ಣು ವರ್ಧನ್ ಹಾಗೂ P.ರಾಜನ್ ಅವರ ಛಾಯಾಗ್ರಹಣವಿದೆ. ಇನ್ನು ಚಿತ್ರಕ್ಕೆ B.S ಕೆಂಪರಾಜು ಅವರು ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಉದ್ಘರ್ಷ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಸಾಹಸ ನಿರ್ದೇಶಕ ರವಿವರ್ಮ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಒಟ್ಟಾರೆ, ಬಾಕಿ ಇರುವ ಕೆಲಸಗಳನ್ನ ಮುಗಿಸಿ ಆದಷ್ಟೂ ಬೇಗ ತೆರೆಮೇಲೆ ಬರಲಿದೆ.
ಸುನೀಲ್ ಕುಮಾರ್ ದೇಸಾಯಿ ಸಿನಿಮಾಗಳು
ತರ್ಕ, ಉತ್ಕರ್ಷ, ನಿಷ್ಕರ್ಷ, ಸಂಘರ್ಷ, ಮರ್ಮ, ಕ್ಷಣ ಕ್ಷಣ ಮುಂತಾದ ಸೂಪರ್ ಹಿಟ್ ಸಸ್ಪೆನ್ಸ್, ಥ್ರಿಲ್ಲರ್, ಆಕ್ಷನ್ ಚಿತ್ರಗಳನ್ನು ಕನ್ನಡ ಬೆಳ್ಳಿತೆರೆ ಮೇಲೆ ತಂದಿದ್ದಾರೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ.


Click it and Unblock the Notifications











