»   » ಸಂಜನಾ ನಂತರ ಮತ್ತೊಬ್ಬ ಕನ್ನಡ ನಟಿಯ ಬೆತ್ತಲೆ ಬೆನ್ನಿನ ಫೋಟೋ ಲೀಕ್!

ಸಂಜನಾ ನಂತರ ಮತ್ತೊಬ್ಬ ಕನ್ನಡ ನಟಿಯ ಬೆತ್ತಲೆ ಬೆನ್ನಿನ ಫೋಟೋ ಲೀಕ್!

Posted By:
Subscribe to Filmibeat Kannada

ಕೆಲ ತಿಂಗಳ ಹಿಂದೆಯಷ್ಟೇ ನಟಿ ಸಂಜನಾ ರವರ ಬೆತ್ತಲೆ ಬೆನ್ನಿನ ಫೋಟೋಗಳು ಲೀಕ್ ಆಗಿ ದೊಡ್ಡ ಸುದ್ದಿ ಮಾಡಿತ್ತು. '2' ಚಿತ್ರದ ಆ ಫೋಟೋಗಳು ದೊಡ್ಡ ವಿವಾದವನ್ನೇ ಸೃಷ್ಟಿ ಮಾಡಿತ್ತು. ಈಗ ಇಂಥದ್ದೇ ಪ್ರಕರಣಕ್ಕೆ ಗಾಂಧಿನಗರ ಮತ್ತೊಮ್ಮೆ ಸಾಕ್ಷಿಯಾಗಿದೆ.

'ವೈರ' ಎಂಬ ಸಿನಿಮಾದ ಒಂದು ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಿನಿಮಾದ ಒಂದು ದೃಶ್ಯದಲ್ಲಿ ಚಿತ್ರದ ನಾಯಕಿ ಬೆತ್ತಲೆ ಬೆನ್ನು ತೋರಿಸಿದ್ದು, ಅದೇ ಫೋಟೋಗಳು ಈಗ ಲೀಕ್ ಆಗಿವೆ. ಜೊತೆಗೆ ಚಿತ್ರತಂಡದ ಅನುಮತಿ ಇಲ್ಲದೆ ಸಿನಿಮಾದ ಇಂತಹ ಫೋಟೋಗಳನ್ನು ಯಾರು ಲೀಕ್ ಮಾಡಿದರು ಎಂಬ ಪ್ರಶ್ನೆ ಸಹ ಹುಟ್ಟಿಕೊಂಡಿದೆ. ಮುಂದೆ ಓದಿ...

ಫೋಟೋ ಲೀಕ್

ಗಾಂಧಿನಗರದಲ್ಲಿ ಮತ್ತೆ ಫೋಟೋ ಲೀಕ್ ವಿವಾದ ಹುಟ್ಟಿಕೊಂಡಿದೆ. 'ವೈರ' ಸಿನಿಮಾದ ನಟಿಯ ಬೆತ್ತಲೆ ಬೆನ್ನಿನ ಫೋಟೋ ಈಗ ವೈರಲ್ ಆಗಿದೆ.

ಯಾರು ಆ ನಟಿ?

ಪ್ರಿಯಾಂಕ ಮಲ್ನಾಡ್ ಎಂಬ ನಟಿ 'ವೈರ' ಸಿನಿಮಾದ ನಾಯಕಿಯಾಗಿದ್ದಾರೆ. ಈ ನಟಿಯ ಬೆತ್ತಲೆ ಬೆನ್ನಿನ ಫೋಟೋಗಳು ಈ ಲೀಕ್ ಆಗಿದೆ. ಪ್ರಿಯಾಂಕ 'ಗೌಡ್ರುಡುಗ್ರು' ಮತ್ತು 'BMW' ಎಂಬ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.

ಪ್ರಚಾರ ತಂತ್ರ ಇರಬಹುದಾ?

'ವೈರ' ಸಿನಿಮಾ ಅಕ್ಟೋಬರ್ 6ಕ್ಕೆ ಬಿಡುಗಡೆಯಾಗಲಿದೆ. ಹೀಗಾಗಿ ಇದು ಸಿನಿಮಾದ ಪ್ರಚಾರ ತಂತ್ರ ಇರಬಹುದಾ ಎಂಬ ಅನುಮಾನವನ್ನು ಮೂಡಿಸಿದೆ.

'ಎ' ಸರ್ಟಿಫಿಕೇಟ್

ಈಗಾಗಲೇ 'ವೈರ' ಸಿನಿಮಾದಲ್ಲಿ ಇಂತಹ ದೃಶ್ಯಗಳಿರುವುದರಿಂದ ಚಿತ್ರಕ್ಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದೆ.

ಸಿಟ್ಟಿಗೆದ್ದ ನಾಯಕಿ

ಸಿನಿಮಾದ ಫೋಟೋಗಳು ಲೀಕ್ ಆಗಿರುವುದರಿಂದ ನಟಿ ಪ್ರಿಯಾಂಕ ಸಖತ್ ಕೋಪಗೊಂಡಿದ್ದಾರಂತೆ.

ಬೆನ್ನು ಪ್ರದರ್ಶನ

ಸಿನಿಮಾಗಾಗಿ ಕನ್ನಡದ ನಾಯಕಿಯರು ತಮ್ಮ ಬೆನ್ನು ಪ್ರದರ್ಶನ ಮಾಡುವುದು ಈಗ ಹೆಚ್ಚಾಗಿದೆ. ನಟಿ ಪೂಜಾ ಗಾಂಧಿ, ಸಂಗೀತ ಭಟ್, ಸಂಜನಾ ನಂತರ ಈಗ ಪ್ರಿಯಾಂಕ ಕೂಡ ಅದೇ ರೀತಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

English summary
'Vaira' Kannada Movie is in controversy.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada