'ಗಜಪಡೆ' ಹರ್ಷ ಅಭಿನಯದ 'ವರ್ಧನ' ರಿಲೀಸ್ ಗೆ ರೆಡಿ

ರಾಜಾಹುಲಿ ಖ್ಯಾತಿಯ ಹರ್ಷ ಈಗ ಸ್ಯಾಂಡಲ್ ವುಡ್ ನಲ್ಲಿ 'ವರ್ಧನ' ಆಗಿದ್ದಾರೆ. ಚಿತ್ರೀಕರಣ ಮುಗಿಸಿರುವ ವರ್ಧನ ರಿಲೀಸ್ ಗೆ ರೆಡಿಯಾಗಿದೆ.

By Bharath Kumar

'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ರಾಧಿಕಾ ಪಂಡಿತ್ (ಚಂಚಲ) ಅವರ ಮೊದಲ ಬಾಯ್ ಫ್ರೆಂಡ್ ಪಾತ್ರ ಮಾಡಿದ್ದ ಹುಡುಗ ನೆನಪಿದ್ದಾನಾ? ನೆನಪಿಲ್ಲ ಅಂದ್ರೆ, ಒಮ್ಮೆ 'ರಾಜಾಹುಲಿ' ಚಿತ್ರದಲ್ಲಿ ಯಶ್ ಗೆಳೆಯ 'ಮೋನಿ' ಪಾತ್ರಧಾರಿಯನ್ನ ನೆನಪಿಸಿಕೊಳ್ಳಿ. 'ಪವರ್ ***' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಜೊತೆ ನಟಿಸಿದ್ದ ಹರ್ಷ, 'ಗಜಪಡೆ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಪದಾರ್ಪಣೆ ಮಾಡಿದರು. ಈಗ ಅದೇ ಹರ್ಷ 'ವರ್ಧನ' ಆಗಿದ್ದಾರೆ.

ಈಗಾಗಲೇ 'ವರ್ಧನ' ಚಿತ್ರದ ಚಿತ್ರೀಕರಣಕ್ಕೆ ಕುಂಬಳಕಾಯಿ ಹೊಡೆದದ್ದು, ಥಿಯೇಟರ್ ಸಿಕ್ಕ ಕೂಡಲೆ ತೆರೆಗೆ ಬರಲಿದೆ. 'ವರ್ಧನ' ಚಿತ್ರದ ಸ್ಪೆಷಾಲಿಟಿಗಳ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ಓದಿರಿ...

'ವರ್ಧನ' ಚಿತ್ರೀಕರಣ ಮುಕ್ತಾಯ

'ವರ್ಧನ' ಚಿತ್ರೀಕರಣ ಮುಕ್ತಾಯ

ಸೈಲಾಂಟ್ ಆಗಿ ಶೂಟಿಂಗ್ ಮಾಡುತ್ತಿದ್ದ 'ವರ್ಧನ' ಚಿತ್ರದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸುಮಾರು 35 ದಿನಗಳ ಕಾಲ ಬೆಂಗಳೂರು ಸುತ್ತ-ಮುತ್ತ ಚಿತ್ರೀಕರಣ ಮಾಡಿದ್ದ ಚಿತ್ರತಂಡ, ಯಾವುದೇ ವಿವಾದ ಇಲ್ಲದೇ ಯಶಸ್ವಿಯಾಗಿ ಶೂಟಿಂಗ್ ಪ್ಯಾಕಪ್ ಮಾಡಿದೆ.

ಕಾಮಿಡಿ 'ವರ್ಧನ'

ಕಾಮಿಡಿ 'ವರ್ಧನ'

ಅಂದ್ಹಾಗೆ, 'ವರ್ಧನ' ಕಾಮಿಡಿ ಸಿನಿಮಾ. ಚಿತ್ರದ 70ರಷ್ಟು ಭಾಗ ಕಾಮಿಡಿಯಿಂದ ಕೂಡಿದ್ದು, ಉಳಿದ ಭಾಗ ಸೆಂಟಿಮೆಂಟ್ ಅಂಶಗಳನ್ನ ಹೊಂದಿದೆಯಂತೆ.

ನಾಗೇಂದ್ರ ಅರಸ್ ಸಾರಥ್ಯ

ನಾಗೇಂದ್ರ ಅರಸ್ ಸಾರಥ್ಯ

'ವರ್ಧನ' ಚಿತ್ರಕ್ಕೆ ನಾಗೇಂದ್ರ ಅರಸ್ ಆಕ್ಷನ್ ಕಟ್ ಹೇಳಿದ್ದಾರೆ. ನಾಗೇಂದ್ರ ಅರಸ್ ನಿರ್ದೇಶನದ 6ನೇ ಚಿತ್ರ ಇದಾಗಿದೆ. ಸುಮಾರು 190 ಚಿತ್ರಗಳಿಗೆ ಸಂಕಲನಕಾರರಾಗಿ ಕಾರ್ಯನಿರ್ವಹಿಸಿರುವ ನಾಗೇಂದ್ರ ಅರಸ್, 'ವರ್ಧನ' ಚಿತ್ರಕ್ಕೆ, ನಿರ್ದೇಶನದ ಜೊತೆ ಕಥೆ-ಚಿತ್ರಕಥೆ-ಸಂಕಲನ ಹಾಗೂ ನೃತ್ಯ ಸಂಯೋಜನೆಯ ಜವಾಬ್ದಾರಿ ಕೂಡ ನಿರ್ವಹಿಸಿದ್ದಾರೆ.

'ವರ್ಧನ' ಜೊತೆ ನೇಹಾ

'ವರ್ಧನ' ಜೊತೆ ನೇಹಾ

'ರಾಜಾಹುಲಿ' ಖ್ಯಾತಿಯ ಹರ್ಷಗೆ, 'ವರ್ಧನ' ಚಿತ್ರದಲ್ಲಿ ನೇಹಾ ಪಾಟೀಲ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.

ಕೆ.ವಿ.ಎಸ್ ಪ್ರೊಡಕ್ಷನ್ ನಿರ್ಮಾಣ

ಕೆ.ವಿ.ಎಸ್ ಪ್ರೊಡಕ್ಷನ್ ನಿರ್ಮಾಣ

ಉದ್ಯಮಿ ಕೆ.ಸುಧಾಕರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಮೊದಲಿನಿಂದಲೂ ಸಿನಿಮಾ ಮಾಡುವ ಆಸಕ್ತಿ ಹೊಂದಿದ್ದ ಕೆ.ಸುಧಾಕರ್ ಅವರು, ಇದು ಉತ್ತಮ ಕಥೆ ಅಂತ ನಿರ್ಧರಿಸಿ, 'ವರ್ಧನ' ಚಿತ್ರಕ್ಕೆ ದುಡ್ಡು ಹಾಕಿದ್ದಾರೆ.

'ವರ್ಧನ' ಚಿತ್ರತಂಡ

'ವರ್ಧನ' ಚಿತ್ರತಂಡ

'ವರ್ಧನ' ಚಿತ್ರಕ್ಕೆ ರಾಜೇಶ್ ಸಿ ತಿಲಕ್ ಅವರ ಛಾಯಗ್ರಹಣವಿದೆ. ಮ್ಯಾಥ್ಯೂ ಮನು ಅವರ ಸಂಗೀತವಿದೆ. ಉಳಿದಂತೆ ಚಿತ್ರದಲ್ಲಿ ಚಿಕ್ಕಣ್ಣ, ಪದ್ಮಜಾ ರಾವ್, ಶೋಭ್ ರಾಜ್, ಪೆಟ್ರೋಲ್ ಪ್ರಸನ್ನ, ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ರಿಲೀಸ್ ಯಾವಾಗ,?

ರಿಲೀಸ್ ಯಾವಾಗ,?

ಸದ್ಯ, ಕಂಪ್ಲೀಟ್ ಶೂಟಿಂಗ್ ಮುಗಿಸಿರುವ 'ವರ್ಧನ', ಈಗ ರೀ-ರೆಕಾರ್ಡಿಂಗ್ ಕೆಲಸದಲ್ಲಿ ಬಿಜಿಯಾಗಿದೆ. ಎಲ್ಲ ಅಂದುಕೊಂಡಂತೆ ಆದ್ರೆ, ನವೆಂಬರ್ ಮೊದಲ ವಾರದಲ್ಲಿ ಚಿತ್ರಮಂದಿರಕ್ಕೆ 'ವರ್ಧನ' ಆಗಮನವಾಗಲಿದೆ.

More from Filmibeat

English summary
Kannada Actor Harsha of 'Moggina Manasu' and 'Rajahuli' fame is now busy with his second movie called 'Vardhana'. Shooting of 'Vardhana' is already completed and is ready for release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X