ಈ ತಿಂಗಳಾಂತ್ಯಕ್ಕೆ 'ವಾಸ್ಕೊಡಿಗಾಮ' ನಿಮ್ಮ ಮುಂದೆ
ಗಾಂಧಿನಗರದಲ್ಲಿ ಚಿತ್ರಮಂದಿರದ ಅಭಾವದಿಂದ 'ವಾಸ್ಕೋಡಿಗಾಮ' ಚಿತ್ರ ಬಿಡುಗಡೆ ಮುಂದಕ್ಕೆ ಹೋಗುತ್ತಲೆ ಇತ್ತು. ಇದೀಗ ಥಿಯೇಟರ್ ಸಮಸ್ಯೆಯನ್ನ ಬಗೆಹರಿಸಿಕೊಂಡಿರುವ 'ವಾಸ್ಕೋಡಿಗಾಮ' ಈ ತಿಂಗಳಾಂತ್ಯಕ್ಕೆ ತೆರೆ ಕಾಣಲಿದೆ.
ಹೌದು, ಅಕ್ಟೋಬರ್ 23 ರಂದು ದಸರಾ ಹಬ್ಬದ ಶುಭ ಸಂದರ್ಭದಲ್ಲಿ ರಾಜ್ಯಾದ್ಯಂತ 'ವಾಸ್ಕೊಡಿಗಾಮ'ನ ಆರ್ಭಟ ಶುರುವಾಗಲಿದೆ. 'ವಾಸ್ಕೋಡಿಗಾಮ' ಚಿತ್ರಕ್ಕೆ ಬೆಂಗಳೂರಿನ ಕೆ.ಜಿ.ರೋಡ್ ನಲ್ಲಿರುವ ತ್ರಿಭುವನ್ ಮೇನ್ ಥಿಯೇಟರ್ ಆಗಿ ಫಿಕ್ಸ್ ಆಗಿದೆ. ['ವಾಸ್ಕೋಡಿಗಾಮ' ಚಿತ್ರಕ್ಕೆ ವಿದ್ಯಾರ್ಥಿಯೇ ಪ್ರೊಡ್ಯೂಸರ್]

ಈಗಾಗಲೇ ರಿಲೀಸ್ ಆಗಿರುವ 'ವಾಸ್ಕೋಡಿಗಾಮ' ಚಿತ್ರದ ಟ್ರೈಲರ್ ಕಾಲೇಜುಗಳ ಅಂಗಳದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಕಾಲೇಜು ಪ್ರೊಫೆಸರ್ ಆಗಿ ವಿವಿಧ ಶೇಡ್ ಗಳಲ್ಲಿ ನಟ ಕಿಶೋರ್ ಕಾಣಿಸಿಕೊಂಡಿದ್ರೆ, ಅವರಿಗೆ ಜೋಡಿಯಾಗಿ ಪಾರ್ವತಿ ನಾಯರ್ ಇದ್ದಾರೆ.[ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ 'ವಾಸ್ಕೋಡಿಗಾಮ' ಯಾರು?]
ಇಂದಿನ ಶಿಕ್ಷಣ ವ್ಯವಸ್ಥೆ ಬಗ್ಗೆ ರಾಗ ಎಳೆಯುವ 'ವಾಸ್ಕೊಡಿಗಾಮ' ಚಿತ್ರಕ್ಕೆ ಮಧುಚಂದ್ರ ಆಕ್ಷನ್ ಕಟ್ ಹೇಳಿದ್ರೆ, ಅಶ್ವಿನ್ ವಿಜಯ್ ಕುಮಾರ್ ಎಂಬ ಎಂ.ಬಿ.ಎ ಸ್ಟುಡೆಂಟ್ ಬಂಡವಾಳ ಹಾಕಿದ್ದಾರೆ.


Click it and Unblock the Notifications











