ಅಕ್ಟೋಬರ್ 23ಕ್ಕೆ 'ವಾಸ್ಕೋಡಿಗಾಮ'ನ ಅಬ್ಬರ ಶುರು ಗುರು..!
ಬಹುಭಾಷಾ ನಟ ಕಿಶೋರ್ ಅವರು 'ಹುಲಿ' ಚಿತ್ರದ ನಂತರ ಮತ್ತೊಮ್ಮೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಬಹು ನಿರೀಕ್ಷಿತ ಚಿತ್ರ 'ವಾಸ್ಕೋಡಿಗಾಮ' ಈ ವಾರ ಭರ್ಜರಿಯಾಗಿ ತೆರೆ ಕಾಣುತ್ತಿದೆ.
ಅಶ್ವಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಮೂಡಿಬರುತ್ತಿರುವ, ನಿರ್ಮಾಪಕ ಅಶ್ವಿನ್ ವಿಜಯಕುಮಾರ್ ಅವರು ಬಂಡವಾಳ ಹಾಕಿರುವ 'ವಾಸ್ಕೋಡಿಗಾಮ', ಅಕ್ಟೋಬರ್ 23ರಂದು ರಾಜ್ಯಾದ್ಯಂತ ಭರ್ಜರಿಯಾಗಿ ತೆರೆ ಕಾಣುತ್ತಿದೆ.['ವಾಸ್ಕೋಡಿಗಾಮ' ಕಿಶೋರ್ ಜೊತೆ ಚಿಟ್ ಚಾಟ್]
ನಿರ್ದೇಶಕ ಮಧುಚಂದ್ರ ಅವರು ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ 'ವಾಸ್ಕೋಡಿಗಾಮ' ಚಿತ್ರಕ್ಕೆ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಇನ್ನು ನಾಯಕ ನಟ ಕಿಶೋರ್ ಅವರು ಅಪ್ಪಟ ಕನ್ನಡದ ಹುಡುಗನಾದರೂ ಜಾಸ್ತಿ ಫೇಮಸ್ ಆಗಿದ್ದು ಮಾತ್ರ ಪರಭಾಷೆಗಳಲ್ಲಿ. ಹೆಚ್ಚಾಗಿ ವಿಲನ್ ರೋಲ್ ಮಾಡುವ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿರುವ ಇವರು ಸಖತ್ ಟ್ಯಾಲೆಂಟೆಡ್ ನಟ.[ನಿಜ ಜೀವನದ ಹೀರೋ ಯಾರು? ಕಿಶೋರ್ ಕೇಳಿ ]
'ವಾಸ್ಕೋಡಿಗಾಮ' ಚಿತ್ರದಲ್ಲಿ ನಟ ಕಿಶೋರ್ ಅವರು ಕಾಲೇಜು ಲೆಕ್ಚರ್ ಪಾತ್ರ ಮಾಡಿದ್ದು, ಇವರಿಗೆ ನಾಯಕಿಯಾಗಿ ಪಾರ್ವತಿ ನಾಯರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ನಟ ಕಿಶೋರ್ ಅವರು ರಿಯಲ್ ಲೈಫ್ ನಲ್ಲೂ ಕಾಲೇಜು ಲೆಕ್ಚರ್ ಆಗಿದ್ದರು. ಇದೀಗ ರೀಲ್ ನಲ್ಲಿಯೂ ಲೆಕ್ಚರ್ ಪಾತ್ರ ಮಾಡುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸಿದ್ದಾರೆ.[200 ಕಾಲೇಜುಗಳಲ್ಲಿ 'ವಾಸ್ಕೋಡಗಾಮ'ನ ಟ್ರೈಲರ್]
ನಟ ಕಿಶೋರ್, ಪಾರ್ವತಿ ನಾಯರ್, ಸುಚೇಂದ್ರ ಪ್ರಸಾದ್ ಹಾಗೂ ಸುಂದರ್ ಕಾಣಿಸಿಕೊಂಡಿರುವ 'ವಾಸ್ಕೋಡಿಗಾಮ' ಪ್ರೇಕ್ಷಕರನ್ನು ಕಮಾಲ್ ಮಾಡುತ್ತ ಕಾದು ನೋಡಬೇಕು.


Click it and Unblock the Notifications













