twitter
    For Quick Alerts
    ALLOW NOTIFICATIONS  
    For Daily Alerts

    ’ವೀಲ್‌ಚೇರ್‌ ರೋಮಿಯೋ’: ಭಾವನೆಗಳ ಯಾನದಲ್ಲಿ ಸುಂದರ ಪಯಣ

    |

    ಆಸೆ ಮಾನವನ ಸಹಜ ಗುಣ. ಸತ್ತವನಿಗಲ್ಲದೆ ಯಾರಿಗಿರುವುದಿಲ್ಲ ಆಸೆ, ಎಲ್ಲ ಬಿಟ್ಟು ಜಪಕ್ಕೆ ಕೂತ ಸನ್ಯಾಸಿಗೂ ಮೋಕ್ಷದ ಆಸೆ ಇದ್ದೇ ಇದೆ.

    ನಡೆಯಲಾಗದ ಹುಡುಗ, ನೋಡಗಲಾದ ಹುಡುಗಿಗೆ ಆಸೆಗಳು ಇರುವುದಿಲ್ಲ ಎಂದೇನೂ ಇಲ್ಲವಲ್ಲ. ಅವರಿಗೂ ಆಸೆ ಇರುತ್ತೇ. ಆ ಆಸೆಗಳನ್ನು ಬೆನ್ನಟ್ಟಿ ಹೊರಟಾಗ? ಅವರ ಬೆನ್ನಿಗೆ ನಿಂತವರು ಏನೆಲ್ಲಾ ಸವಾಲುಗಳನ್ನು ಎದುರಿಸಿ ನಿಲ್ಲಬೇಕು? ಎಂಬುವುದೇ ಈ ಶುಕ್ರವಾರ ಬಿಡುಗಡೆ ಆಗಿರುವ ಕನ್ನಡ ಸಿನಿಮಾ 'ವೀಲ್ ಚೇರ್ ರೋಮಿಯೋ' ಕತೆ.

    ಆರಂಭದಿಂದಲೂ ತನ್ನ ಗಟ್ಟಿಯಾದ ಕಂಟೆಂಟಿನಿಂದ ಗಮನಸೆಳೆದ 'ವೀಲ್ ಚೇರ್ ರೋಮಿಯೋ' ಸಿನಿಮಾ ಥಿಯೇಟರ್ ಅಂಗಳದಲ್ಲಿ ಭರಪೂರ ಮನರಂಜನೆ ಉಣಬಡಿಸಿದೆ. ನಾಯಕ ಎಂದರೆ ಆಳುದ್ದ ಇರಬೇಕು, ಸಿಕ್ಸ್ ಪ್ಯಾಕ್ ಇರಬೇಕು ಎಂದೆಲ್ಲ ಸಿದ್ಧ ಮಾದರಿಯಿಂದ ಹೊರ ಬಂದು, ನಾಯಕ ಹೀಗಿದ್ದರೂ ಪ್ರೇಕ್ಷಕ ಒಪ್ಪಿಕೊಳ್ತಾನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ನಿರ್ದೇಶಕ ನಟರಾಜ್. ಇದು ಅವರ ಮೊದಲ ಪ್ರಯತ್ನ ಹಾಗೂ ಆ ಪ್ರಯತ್ನದಲ್ಲಿ ಗೆಲುವು ಸಾಧಿಸಿದ್ದಾರೆ ಸಹ.

    ಸಿನಿಮಾದ ಕಥೆ ಏನು?

    ಸಿನಿಮಾದ ಕಥೆ ಏನು?

    ಸಿನಿಮಾದ ಹೆಸರೇ ಹೇಳುವಂತೆ ವೀಲ್ ಚೇರ್ ನಿಂದ ಎದ್ದು ನಡೆಯಲಾಗದ ನಾಯಕನಿಗೆ ನೂರಾರು ಕನಸುಗಳಿವೆ. ಆ ಕನಸುಗಳಿಗೆ ಅಪ್ಪನೇ ಸದಾ ಬೆನ್ನೆಲು. ಮಗ ಬೆಳೆದು ನಿಂತಮೇಲೆ ದೇಹದಾಸೆಗೆ ಹಂಬಲಿಸುತ್ತಾನೆ. ಆಗ ಮಗನ ಆಸೆ ಈಡೇರಿಸಲು ಅಪ್ಪ ಹೊರಟಾಗ ಏನಾಗುತ್ತದೆ? ಮೋಹದಾಸೆಗೆ ಮಿಲನಕ್ಕೆ ಹತೊರೆಯುವ ನಾಯಕನಿಗೆ ನಾಯಕಿಯ ಮೇಲೆ ಪ್ರೀತಿ ಹುಟ್ಟುತ್ತದೆ? ಆ ಪ್ರೀತಿಯನ್ನು ಕಣ್ಣು ಕಾಣದ ವೇಶ್ಯೆ ಸ್ವೀಕರಿಸುತ್ತಾಳಾ? ಮುಂದೆ ಏನಾಗುತ್ತದೆ ಎನ್ನುವುದೇ ಸಿನಿಮಾದ ಸ್ಟೋರಿ.

    ಬೋರ್ ಹೊಡೆಸದೆ ಸಾಗುವ ಕತೆ

    ಬೋರ್ ಹೊಡೆಸದೆ ಸಾಗುವ ಕತೆ

    ಸೂಕ್ಷ್ಮ ಕಥೆಗೆ ನಿರ್ದೇಶಕ ನಟರಾಜ್ ಮಾಡಿರುವ ಕಲಾ ಕುಸೂರಿ ಮೆಚ್ಚುವಂತಹದ್ದು. ನಾಯಕನನ್ನು ಇಡೀ ಸಿನಿಮಾ ವೀಲ್ ಚೇರ್ ಮೇಲೆ ಕುರಿಸಿಯೂ ನಾಯಕನ್ನು ಗೆಲ್ಲಿಸಿದ್ದಾರೆ, ಜೊತೆಗೆ ತಾವೂ ಗೆದ್ದಿದ್ದಾರೆ. ತಾಜಾತನ ತುಂಬಿರುವ ಅಪರೂಪದ ಕಥೆ, ಚಿತ್ರಕಥೆಗೆ ಜೊತೆಗೆ ಜೀವನದ ಮಹತ್ವ ಹೇಳುವ ಪಂಚಿಂಗ್ ಡೈಲಾಗ್ ನೋಡುಗರಿಗೆ ಸಖತ್ ಮಜಾ ಕೊಡುತ್ತಿವೆ. ಎಲ್ಲೂ ಬೋರ್ ಹೊಡೆಸದೇ ಸಾಗುವ ಕಥಾನಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

    ಅದ್ಭುತವಾಗಿ ನಟಿಸಿರುವ ರಾಮ್ ಚೇತನ್, ಮಯೂರಿ

    ಅದ್ಭುತವಾಗಿ ನಟಿಸಿರುವ ರಾಮ್ ಚೇತನ್, ಮಯೂರಿ

    ರಾಮ್ ಚೇತನ್‌ಗೆ ನಾಯಕನಾಗಿ ಇದು ಮೊದಲ ಸಿನಿಮಾ. ಆದರೂ ಸಹ ಮಾಗಿದ ಅಭಿನಯ ನೀಡಿದ್ದಾರೆ. ಇಡೀ ಸಿನಿಮಾವನ್ನು ವೀಲ್ ಚೇರ್ ಮೇಲೆ ಕುಳಿತು ಅದ್ಭುತವಾಗಿ ಪಾತ್ರ ಪೋಷಣೆ ಮಾಡಿದ್ದಾರೆ. ಮಯೂರಿ ಎಂದಿನಂತೆ ಅತ್ಯದ್ಭುತ ಅಭಿನಯ ನೀಡಿದ್ದಾರೆ. ಹಿರಿಯ ನಟರಾದ ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲಾ ನಾಣಿ ಪಾತ್ರಗಳು ಸಿನಿಮಾಕ್ಕೆ ಬೇರೆಯದ್ದೇ ತೂಕವನ್ನು ಪ್ರಾಪ್ತಿ ಮಾಡಿವೆ. ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ.

    ಹಲವು ಭಾವುಕ ದೃಶ್ಯಗಳಿವೆ

    ಹಲವು ಭಾವುಕ ದೃಶ್ಯಗಳಿವೆ

    'ವೀಲ್ ಚೇರ್ ರೋಮಿಯೊ' ಸಿನಿಮಾ ಇದೇ ಶುಕ್ರವಾರ ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಕುರುಡು ವೇಶ್ಯೆ ಹಾಗೂ ಅಂಗವಿಕಲ ಯುವಕನ ನಡುವೆ ಕತೆಯನ್ನು ಸಿನಿಮಾ ಒಳಗೊಂಡಿದೆ. ವೇಶ್ಯೆಯ ಕತೆ ಇದ್ದರೂ ಸಿನಿಮಾದಲ್ಲಿ ಒಂದೂ ಕೆಟ್ಟ ದೃಶ್ಯಗಳಿಲ್ಲ ಬದಲಿಗೆ ಸಿನಿಮಾದಲ್ಲಿ ಹಲವು ಭಾವುಕ ದೃಶ್ಯಗಳಿವೆ. ನೋಡುಗರನ್ನುನ ಆರ್ದ್ರಗೊಳಿಸುವ ದೃಶ್ಯಗಳು ಇವೆ.

    English summary
    Kannada movie Wheel Chair Romeo released recently in teaters. Movie has very good message with emotional story line.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X