twitter
    For Quick Alerts
    ALLOW NOTIFICATIONS  
    For Daily Alerts

    'ವೀಲ್ ಚೇರ್ ರೋಮಿಯೋ' ಒಂದೇ ದೃಶ್ಯದಲ್ಲೂ Expose ಇಲ್ವಂತೆ!

    |

    'ಕೆಜಿಎಫ್ 2' ಸಿನಿಮಾ ಬಳಿಕ ಒಂದೊಂದೇ ಕನ್ನಡ ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಡುತ್ತಿವೆ. ಅದರಂತೆ ಈ ವಾರ ಕನ್ನಡದ 'ವೀಲ್‌ ಚೇರ್ ರೋಮಿಯೋ' ಕೂಡ ಅಖಾಡಕ್ಕೆ ಇಳಿಯುವುದಕ್ಕೆ ಸಜ್ಜಾಗಿ ನಿಂತಿದೆ. ಈ ಹೊಸ ಸಿನಿಮಾ ಬಗ್ಗೆ ಈಗಾಗಲೇ ಕುತೂಹಲ ಗರಿಗೆದರಿದೆ. ಇದೇ ವೇಳೆ 'ವೀಲ್ ಚೇರ್ ರೋಮಿಯೋ' ಟೀಮ್ ಒಂದೊಂದು ರಹಸ್ಯವನ್ನು ಹೊರಹಾಕುತ್ತಿದೆ.

    ಸ್ಯಾಂಡಲ್‌ವುಡ್ ಸಿನಿಮಾದ ಟ್ರೆಂಡಿಂಗ್ ಬದಲಾಗಿದೆ. ಸಿನಿಮಾದಲ್ಲೊಂದು ಐಟಂ ಸಾಂಗ್ ಇದ್ದು, ಸೊಂಟ ಬಳುಕಿಸುವ ಪೋರಿ ಇದ್ದರೆ, ಪಡ್ಡೆ ಹೈಕ್ಳ ಎದೆಯಲ್ಲಿ ಹೆಜ್ಜೆ ಹಾಕಿ ಕುಣಿದಂತಿರುತ್ತದೆ. ಮಾಸ್ ಎಲಿಮೆಂಟ್ಸ್, ಟಪ್ಪಾಂಗುಚ್ಚಿ ಸಾಂಗ್‌ಗಳಿಗೆ ಕುಣಿಯುವವರು ಹೆಚ್ಚು. ಆದರೆ ಇಂಥ ಬದಲಾದ ಸನ್ನಿವೇಶದಲ್ಲೊಂದು ಕಂಟೆಂಟ್ ಓರಿಯೆಂಟ್ ಸಿನಿಮಾ ಸದ್ದು ಮಾಡ್ತಿದೆ ಎಂದರೆ ಅದು 'ವೀಲ್ ಚೇರ್ ರೋಮಿಯೋ'.

    'ವೀಲ್ ಚೇರ್ ರೋಮಿಯೋ' ಸಿನಿಮಾದ ಟ್ರೈಲರ್ ಹಾಗೂ ಹಾಡುಗಳನ್ನು ಈಗಾಗಲೇ ಮೆಚ್ಚುಗೆ ಗಳಿಸಿದೆ. ಈ ಟ್ರೈಲರ್ ನೋಡಿದವರಿಗೆ ಸಿನಿಮಾ ಯಾವ ರೀತಿ ಇರಬಹುದೆಂಬುದು ಸ್ಪಷ್ಟವಾಗಿದೆ. ಈ ಟ್ರೈಲರ್‌ನಲ್ಲಿ ಎಲ್ಲಿಯೂ ಗ್ಲಾಮರಸ್ ಎಂಬುದು ಕಂಡೆ ಇಲ್ಲ. ಹಾಗಂತ ಬೋರ್ ಹೊಡೆಸುವ ಕಾನ್ಸೆಪ್ಟ್ ಇದರಲ್ಲಿ ಇಲ್ಲವೇ ಇಲ್ಲ. ಲವ್ ಇದೆ. ಫೈಟ್ ಇದೆ. ರೊಮ್ಯಾಂಟಿಕ್ ಮೂಡಿದೆ. ಡ್ಯೂಯೆಟ್ ಸಾಂಗಿದೆ. ಆದರೆ ಹುಡುಗನಿಗೆ ಕಾಲಿಲ್ಲ. ಹುಡುಗಿಗೆ ಕಣ್ಣಿಲ್ಲ. ಇದ್ಯಾವುದು ಇಲ್ಲದಿದ್ದರೂ, ಮಾನವೀಯತೆ ಹೆಚ್ಚಿದೆ. ಪ್ರೀತಿ ಬೇಕಾದಷ್ಟಿದೆ. ಇದೆ ಕಾರಣಕ್ಕೆ ಸಿನಿಮಾ ಗೆದ್ದೇ ಗೆಲ್ಲುತ್ತೆ ಎಂಬ ಅಪಾರವಾದ ನಂಬಿಕೆ ಇದೆ.

    Kannada Movie Wheel Chair Romeo Has No Expose Scenes

    ಕೆಲವೊಂದು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ. ಕಂಟೆಂಟ್ ಒರಿಯೆಂಟೆಡ್ ಸಿನಿಮಾಗಳು ಜನರಿಗೆ ಬೇಗ ಅರ್ಥವಾಗುತ್ತದೆ. ಮನಸ್ಸನ್ನು ವಿಚಲಿತಗೊಳಿಸುತ್ತದೆ. ವಾಸ್ತವಕ್ಕೆ ಬಂದು ನಾವೂ ನೋಡಿದ್ದ ತೆರೆಮೇಲಿನ ಸಿನಿಮಾವನ್ನು ಅಥವಾ ನಮ್ಮ ಅಕ್ಕ ಪಕ್ಕ ನಡೆದ ಘಟನೆಯನ್ನಾ? ಎಂಬ ಅನುಮಾನ ಮೂಡಿಸುವಷ್ಟು ಹಿಡಿದಿಟ್ಟು ಬಿಡುತ್ತದೆ. 'ವೀಲ್ ಚೇರ್ ರೋಮಿಯೋ' ಕೂಡ ನಮ್ಮ ಮನಸ್ಸಲ್ಲಿ ಬಿಗಿಯಾಗಿ ಕುಳಿತುಕೊಳ್ಳುವುದರಲ್ಲಿ ಯಾವುದೇ ಡೌಟ್ ಇಲ್ಲ.

    Kannada Movie Wheel Chair Romeo Has No Expose Scenes

    ಸದ್ಯ ಹಲವು ವರ್ಷಗಳಿಂದ ಸಿನಿಮಾದಲ್ಲಿ ಅದರಲ್ಲೂ ನಿರ್ದೇಶಕನಾಗಿ ಏನನ್ನೋ ಸಾಧಿಸಲೇಬೇಕೆಂದು ಹೊರಟವರು ನಟರಾಜ್. ಇದೀಗ ಆಸೆ ಅವರ ಆಸೆ ಕೈಗೂಡಿದೆ. ಮೊದಲ ಕೂಸನ್ನು ಇದೇ ತಿಂಗಳ 27ಕ್ಕೆ ಎಲ್ಲರ ಮುಂದೆ ಇಡಲಿದ್ದಾರೆ. ಹರಸಿ, ಹಾರೈಸಬೇಕಾದವರು ನೀವೂ. ಈ ಸಿನಿಮಾಗೆ ನಿರ್ದೇಶಕನ ಕಥೆಗೆ ತಕ್ಕಂತೆ ರಾಮ್ ಚೇತನ್ ನಾಯಕನಾಗಿ ನಟಿಸಿದ್ದು, ಮಯೂರಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ.

    Kannada Movie Wheel Chair Romeo Has No Expose Scenes

    ಬಿ.ಜೆ.ಭರತ್ ಸಂಗೀತ ನಿರ್ದೇಶನದಲ್ಲಿ ಹಾಡು ಹಾಗೂ ಹಿನ್ನೆಲೆ ಸಂಗೀತ ಮೂಡಿ ಬಂದಿದ್ದು, ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್, ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರಕ್ಕಿದೆ. ಸುಚೇಂದ್ರಪ್ರಸಾದ್, ತಬಲ ನಾಣಿ, ರಂಗಾಯಣ ರಘು ಚಿತ್ರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮಹರಾಷ್ಟ್ರ, ಪುಣೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ.

    English summary
    Kannada Movie Wheel Chair Romeo Has No Expose Scenes, Know More.
    Wednesday, May 25, 2022, 11:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X