For Quick Alerts
  ALLOW NOTIFICATIONS  
  For Daily Alerts

  ತುಂಬಾ ವಿಶೇಷವಾಗಿದೆ 'ವಿಂಡೋಸೀಟ್' ಟೀಸರ್: ಸುದೀಪ್ ಮೆಚ್ಚುಗೆ

  |

  ನಟಿ ಹಾಗೂ ಸುದ್ದಿ ವಾಹಿನಿಯ ಮಾಜಿ ನಿರೂಪಕಿ ಶೀತಲ್ ಶೆಟ್ಟಿ ನಿರ್ದೇಶನ ಮಾಡುತ್ತಿರುವ 'ವಿಂಡೋಸೀಟ್' ಚಿತ್ರದ ಟೀಸರ್ ಇಂದು ಬಿಡುಗಡೆಯಾಗಿದೆ. ಇದು ಶೀತಲ್ ಶೆಟ್ಟಿ ಆಕ್ಷನ್ ಕಟ್ ಹೇಳುತ್ತಿರುವ ಮೊದಲ ಚಿತ್ರ.

  'ರಂಗಿತರಂಗ' ಖ್ಯಾತಿಯ ನಿರೂಪ್ ಭಂಡಾರಿ ನಾಯಕನಾಗಿ ನಟಿಸಿರುವ ಈ ಚಿತ್ರದ ಫಸ್ಟ್ ಲುಕ್ ಬಹಳ ಗಮನ ಸೆಳೆದಿತ್ತು. ಇದೀಗ, ಚಿತ್ರದ ಅಧಿಕೃತ ಟೀಸರ್ ರಿಲೀಸ್ ಆಗಿದೆ.

  ನಟಿ, ನಿರೂಪಕಿ ಶೀತಲ್ ಶೆಟ್ಟಿ 'ಕಾರು' ಬಿಡುಗಡೆಗೆ ಸಿದ್ಧನಟಿ, ನಿರೂಪಕಿ ಶೀತಲ್ ಶೆಟ್ಟಿ 'ಕಾರು' ಬಿಡುಗಡೆಗೆ ಸಿದ್ಧ

  'ವಿಂಡೋಸೀಟ್' ರೊಮ್ಯಾಂಟಿಕ್ ಅನುಭವ ಕೊಡುವ ಚಿತ್ರಕಥೆ ಹೊಂದಿದೆ ಎನ್ನುವುದಕ್ಕೆ ಈ ಟೀಸರ್ ಸಾಕ್ಷಿಯಾಗಿದೆ. ನಿರ್ದೇಶಕಿ ಶೀತಲ್ ಶೆಟ್ಟಿ ಮೊದಲಿನಿಂದಲೂ ಇದು ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಎಂದು ಹೇಳುತ್ತಾ ಬಂದಿದ್ದಾರೆ. ಅದನ್ನು ನಿಜವಾಗಿಸುವಂತಹ ಟೀಸರ್ ಇದಾಗಿದೆ.

  ವಿಂಡೋ ಸೀಟ್‌ನಲ್ಲಿ ಮಧುರವಾದ ಪ್ರೇಮಕಥೆ ಎಂಬ ಸ್ಪಷ್ಟ ಸುಳಿವು ಇದರಲ್ಲಿ ಸಿಕ್ಕಿದೆ. ಕುತೂಹಲ ಕೆರಳಿಸುವ ಚಿತ್ರಕಥೆಯೂ ಅದರಲ್ಲಿ ಅಡಗಿದೆ. ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಸಹ ಇದೆ ಎನ್ನುವುದಕ್ಕೆ ಕೊನೆಯಲ್ಲಿ ಒಂದು ಝಲಕ್ ತೋರಿಸಲಾಗಿದೆ.

  ''ವಿಂಡೋ ಸೀಟ್‌'ನ ಟೀಸರ್ ಬಹಳ ಭರವಸೆಯಿಂದ ಕಾಣುತ್ತಿದೆ. ಪ್ರತಿ ಫ್ರೇಮ್ ಸಹ ಅಚ್ಚುಕಟ್ಟಾಗಿ ಹೆಣೆದಂತೆ ಕಾಣುತ್ತದೆ. ಖಂಡಿತವಾಗಿಯೂ ಚಿತ್ರತಂಡ ಶ್ರಮಿಸಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಈ ಚಿತ್ರವನ್ನು ನೋಡಲು ಎದುರು ನೋಡುತ್ತಿದ್ದೇನೆ'' ಎಂದು ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಒಟ್ಟಾರೆ, 'ವಿಂಡೋಸೀಟ್' ಸಿನಿಮಾ ಕನ್ನಡ ಪ್ರೇಕ್ಷಕರಿಗೆ ಒಂದೊಳ್ಳೆ ಮನರಂಜನೆಯ ಚಿತ್ರ ಆಗಲಿದೆ ಎಂಬ ನಿರೀಕ್ಷೆ ಹುಟ್ಟಿಕೊಂಡಿದೆ. ನಿರೂಪ್‌ಗೆ ನಾಯಕಿಯಾಗಿ ಅಮೃತಾ ಅಯ್ಯಂಗರ್ ಮತ್ತು ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ.

  ನಮ್ಮನ್ನೆಲ್ಲ ಒಂದು ಫ್ಯಾಮಿಲಿ ಮಾಡಿದ್ದು ರವಿ ಬೆಳಗೆರೆ ಎಂದ ಶೈನ್ ಶೆಟ್ಟಿ | Filmibeat Kannada

  ರವಿಶಂಕರ್, ಮಧುಸೂದನ್ ರಾವ್, ಲೇಖ, ಸೂರಜ್ ಸೇರಿದಂತೆ ಇನ್ನಿತರ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಜಾಕ್ ಮಂಜು ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಘ್ನೆಶ್ ರಾಜ್ ಛಾಯಾಗ್ರಹಣವಿದ್ದು, ಋತಿಕ್ ಸಂಕಲನ ನೀಡಿದ್ದಾರೆ.

  English summary
  Kannada actor Nirup Bhandari starrer 'Window Seat' movie teaser released. the movie directed by Sheetal shetty.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X