twitter
    For Quick Alerts
    ALLOW NOTIFICATIONS  
    For Daily Alerts

    ಪರಭಾಷೆಯ ಎಲ್ಲ ಸಿನಿಮಾಗಳನ್ನು ಹಿಂದೆ ಹಾಕಿವೆ ಕನ್ನಡದ ಈ 2 ಚಿತ್ರಗಳು!

    By Naveen
    |

    ಕನ್ನಡ ಸಿನಿಮಾ ಪ್ರಿಯರು ಈಗ ಹೆಮ್ಮೆ ಪಡುವ ರೀತಿಯ ಸಿನಿಮಾ ಬರುತ್ತಿವೆ. ಸ್ಯಾಂಡಲ್ ವುಡ್ ನಲ್ಲಿ ಬೇರೆ ಬೇರೆ ರೀತಿಯ ಚಿತ್ರಗಳು, ಒಳ್ಳೆಯ ಪ್ರಯತ್ನಗಳು ಹೆಚ್ಚಾಗುತ್ತಿವೆ. ಇಂತಹ ಸಿನಿಮಾಗಳು ಪರಭಾಷೆಯ ಸಿನಿಮಾಗಳನ್ನು ಹಿಂದೆ ಹಾಕಿವೆ.

    ಸದ್ಯ ಕನ್ನಡ ಸಿನಿಮಾಗಳ ಶಕ್ತಿ ತಿಳಿಯಬೇಕು ಅಂದರೆ ಬುಕ್ ಮೈ ಶೋ ತೆರೆಯಿರಿ. ಹೌದು, ಬುಕ್ ಮೈ ಶೋ ರೇಟಿಂಗ್ ನಲ್ಲಿ ಈಗ ಕನ್ನಡ ಸಿನಿಮಾಗಳು ಮೇಲೆ ಇವೆ. ಹಿಂದಿಯ 'ಗೋಲ್ಡ್', ತೆಲುಗಿನ 'ಗೀತಾ ಗೋವಿಂದಂ' ಸೇರಿದಂತೆ ಎಲ್ಲ ಪರಭಾಷೆಯ ಚಿತ್ರಗಳನ್ನು ಈ ಎರಡು ಕನ್ನಡ ಸಿನಿಮಾಗಳು ಹಿಂದೆ ಹಾಕಿದೆ.

    ಕನ್ನಡದ ಅದ್ಬುತ ಸಿನಿಮಾವನ್ನು ತುಳಿಯುತ್ತಿದೆ ಬುಕ್ ಮೈ ಶೋ! ಕನ್ನಡದ ಅದ್ಬುತ ಸಿನಿಮಾವನ್ನು ತುಳಿಯುತ್ತಿದೆ ಬುಕ್ ಮೈ ಶೋ!

    ಬುಕ್ ಮೈ ಶೋ ರೇಟಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿ ಇರುವ ಕನ್ನಡ ಚಿತ್ರಗಳ ಪಟ್ಟಿ ಹೀಗಿದೆ ಮುಂದೆ ಓದಿ....

    ನಂಬರ್ ಒನ್ ಸ್ಥಾನದಲ್ಲಿ ಸಮೀರ

    ನಂಬರ್ ಒನ್ ಸ್ಥಾನದಲ್ಲಿ ಸಮೀರ

    ಕನ್ನಡದಲ್ಲಿ ಬಂದ ಅಪರೂಪದ ಮತ್ತು ಅದ್ಭುತ ಸಿನಿಮಾ 'ಒಂದಲ್ಲಾ ಎರಡಲ್ಲಾ'. ಈ ಚಿತ್ರದ 91% ರೇಟಿಂಗ್ ಹೊಂದಿದ್ದು, ಮೊದಲ ಸ್ಥಾನದಲ್ಲಿ ಇದೆ. ಈ ಸಿನಿಮಾಗೆ ಯೂಸರ್ ರೇಟಿಂಗ್ ಜೊತೆಗೆ ಕ್ರಿಟಿಕ್ಸ್ ರೇಟಿಂಗ್ ಸಹ ಸೇರಿಸಲಾಗಿದೆ. ಈ ಕಾರಣ ಸಿನಿಮಾದ ರೇಟಿಂಗ್ ಕೊಂಚ ಕಡಿಮೆ ಆಗಿದೆ ಎಂದು ಚಿತ್ರತಂಡ ಆರೋಪ ಮಾಡಿದೆ.

    ಎರಡನೇ ಸ್ಥಾನದಲ್ಲಿ ಶಾಲೆ ಮಕ್ಕಳು

    ಎರಡನೇ ಸ್ಥಾನದಲ್ಲಿ ಶಾಲೆ ಮಕ್ಕಳು

    'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಸಿನಿಮಾ ಬುಕ್ ಮೈ ಶೋ ರೇಟಿಂಗ್ ನಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಚಿತ್ರದ ಯೂಸರ್ ರೇಟಿಂಗ್ 90% ಇದೆ. ಕಳೆದ ಶುಕ್ರವಾರ ಬಿಡುಗಡೆಯಾದ ಈ ಅಪ್ಪಟ್ಟ ಕನ್ನಡ ಸಿನಿಮಾ ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

    'ಒಂದಲ್ಲಾ ಎರಡಲ್ಲಾ': ನೀವು ನೋಡಲೇಬೇಕು ಈ ಸಿನಿಮಾ 'ಒಂದಲ್ಲಾ ಎರಡಲ್ಲಾ': ನೀವು ನೋಡಲೇಬೇಕು ಈ ಸಿನಿಮಾ

    'ಗೋಲ್ಡ್', 'ಗೀತಾ ಗೋವಿಂದಂ' ರೇಟಿಂಗ್ ಕಡಿಮೆ

    'ಗೋಲ್ಡ್', 'ಗೀತಾ ಗೋವಿಂದಂ' ರೇಟಿಂಗ್ ಕಡಿಮೆ

    ಕನ್ನಡದ ಈ ಸಿನಿಮಾಗಳಿಗೆ ಹೋಲಿಸಿದರೆ ಹಿಂದಿಯ 'ಗೋಲ್ಡ್' ಹಾಗೂ ತೆಲುಗಿನ 'ಗೀತಾ ಗೋವಿಂದಂ' ಸಿನಿಮಾಗೆ ಇರುವ ರೇಟಿಂಗ್ ಕಡಿಮೆ. ಗೀತಾ ಗೋವಿಂದಂ' 87% ಹಾಗೂ 81% ರೇಟಿಂಗ್ ಅನ್ನು ಗೋಲ್ಡ್ ಹೊಂದಿದೆ. ಕನ್ನಡ ಚಿತ್ರಗಳ ರೇಟಿಂಗ್ ಈ ಎರಡು ಚಿತ್ರಗಳಿಗಿಂತ ಹೆಚ್ಚಿದೆ.

    ರೇಟಿಂಗ್ ಕಡಿಮೆ ಇದ್ದರೂ ಹೆಚ್ಚು ಚಿತ್ರಮಂದಿರ

    ರೇಟಿಂಗ್ ಕಡಿಮೆ ಇದ್ದರೂ ಹೆಚ್ಚು ಚಿತ್ರಮಂದಿರ

    ಸಿನಿಮಾ ನೋಡಿದ ಜನರು ನೀಡಿದ ರೇಟಿಂಗ್ ಅನ್ನು ತೆಗೆದುಕೊಂಡರೆ ಅಲ್ಲಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಹಾಗೂ 'ಒಂದಲ್ಲಾ ಎರಡಲ್ಲಾ' ಚಿತ್ರಕ್ಕೆ ರೇಟಿಂಗ್ ಹೆಚ್ಚಿದೆ. ಹೀಗಿದ್ದರೂ 'ಗೀತಾ ಗೋವಿಂದಂ' ಸಿನಿಮಾಗೆ ಬೆಂಗಳೂರಿನಲ್ಲಿ ಕನ್ನಡದ ಈ ಎರಡು ಚಿತ್ರಗಳಿಗಿಂತ ಹೆಚ್ಚು ಸ್ಕ್ರೀನ್ ಗಳನ್ನು ನೀಡಲಾಗಿದೆ.

    'ಸರ್ಕಾರಿ ಹಿ.ಪ್ರಾ.ಶಾಲೆ'ಗೆ ಹೋಗಿ ಹಾಜರಿ ಹಾಕಿ ಬನ್ನಿ 'ಸರ್ಕಾರಿ ಹಿ.ಪ್ರಾ.ಶಾಲೆ'ಗೆ ಹೋಗಿ ಹಾಜರಿ ಹಾಕಿ ಬನ್ನಿ

    ಗೆಲ್ಲಬೇಕು ವಿಭಿನ್ನ ಕಥೆಯ ಈ ಎರಡು ಚಿತ್ರಗಳು

    ಗೆಲ್ಲಬೇಕು ವಿಭಿನ್ನ ಕಥೆಯ ಈ ಎರಡು ಚಿತ್ರಗಳು

    ಕನ್ನಡದಲ್ಲಿ ಸದ್ಯ ಬಂದಿರುವ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಹಾಗೂ 'ಒಂದಲ್ಲಾ ಎರಡಲ್ಲಾ' ಎರಡೂ ಸಿನಿಮಾಗಳು ಕೂಡ ಹೊಸ ರೀತಿಯ ಸಿನಿಮಾಗಳು. ಮನರಂಜನೆಯನ್ನು ಮೀರಿದ ಇಂತಹ ರೀತಿಯ ಸಿನಿಮಾಗಳು ಮತ್ತೆ ಮತ್ತೆ ಬರಬೇಕು... ಮತ್ತೆ ಮತ್ತೆ ಗೆಲ್ಲಬೇಕು.

    English summary
    Kannada movie 'Ondalla Eradalla' and 'Sarkari Hiriya Prathamika Shale Kasaragodu movie are in Book My Show top ratings.
    Wednesday, August 29, 2018, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X