twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ನಾಚಿಕೆ ಆಗಬೇಕು..ಥೂ.!

    By Harshitha
    |

    ಹೀಗಂತ ಹೇಳುತ್ತಿರುವವರು ಕನ್ನಡ ಸಿನಿ ಪ್ರಿಯರು ಹಾಗೂ ಕನ್ನಡ ಚಿತ್ರರಂಗದವರೇ ಸ್ವಾಮಿ.! ಯಾಕೆ ಅಂತ ಡೀಟೇಲ್ ಆಗಿ ಹೇಳ್ತೀವಿ ಕೇಳಿ...

    ಆಫೀಸ್ ಟೆನ್ಷನ್ ನಿಂದ ಕೊಂಚ ಫ್ರೀ ಮಾಡಿಕೊಂಡು ಒಂದೊಳ್ಳೆ ಕನ್ನಡ ಸಿನಿಮಾ ನೋಡೋಣ, ಈ ವಾರ ರಿಲೀಸ್ ಆಗಿರುವ 'ಆಕ್ಟರ್', 'ಮಧುರ ಸ್ವಪ್ನ' ಹಾಗೂ 'ಭಲೇ ಜೋಡಿ' ಪೈಕಿ ಯಾವುದಾದರೂ ಒಂದು ಚಿತ್ರವನ್ನ ನೋಡಿಕೊಂಡು ಬರೋಣ, ಫ್ಯಾಮಿಲಿ ಆದ್ದರಿಂದ ಮಲ್ಟಿಪ್ಲೆಕ್ಸ್ ಬೆಸ್ಟ್! ಅದಕ್ಕೆ ಈಗಲೇ ಟಿಕೆಟ್ ಬುಕ್ ಮಾಡೋಣ ಅಂತ ನೀವೇನಾದರೂ, 'ಬುಕ್ ಮೈ ಶೋ' ಓಪನ್ ಮಾಡಿ ಟಿಕೆಟ್ ಬುಕ್ ಮಾಡಲು ಹೋದರೆ ನಿಮಗೆ ನಿರಾಸೆ ಗ್ಯಾರೆಂಟಿ.! [ಮಲ್ಟಿಪ್ಲೆಕ್ಸ್ ಗಳಲ್ಲಿನ್ನು ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ!]

    ಯಾಕಂದ್ರೆ, ಕಳೆದ ಶುಕ್ರವಾರ ರಿಲೀಸ್ ಆಗಿರುವ 'ಆಕ್ಟರ್', 'ಭಲೇ ಜೋಡಿ' ಹಾಗೂ 'ಮಧುರ ಸ್ವಪ್ನ' ಚಿತ್ರಗಳು ಮಲ್ಟಿಪ್ಲೆಕ್ಸ್ ಗಳಲ್ಲಿ 'ಸತತ' ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಮುಂದೆ ಓದಿ.....

    ಹೌಸ್ ಫುಲ್ ಪ್ರದರ್ಶನ! ಒಳ್ಳೆ ಪ್ರತಿಕ್ರಿಯೆ ಅಲ್ವೇ?

    ಹೌಸ್ ಫುಲ್ ಪ್ರದರ್ಶನ! ಒಳ್ಳೆ ಪ್ರತಿಕ್ರಿಯೆ ಅಲ್ವೇ?

    'ಆಕ್ಟರ್', 'ಭಲೇ ಜೋಡಿ' ಹಾಗೂ 'ಮಧುರ ಸ್ವಪ್ನ' ಚಿತ್ರಗಳ ಟಿಕೆಟ್ ಸೋಲ್ಡ್ ಔಟ್ ಆಗಿರುವುದನ್ನ ಕಂಡು ''ಓಹ್...ಸಿನಿಮಾ ಚೆನ್ನಾಗಿರಬೇಕು. ಅದಕ್ಕೆ ಹೌಸ್ ಫುಲ್ ಆಗಿದೆ'' ಅಂತ ನೀವೆಲ್ಲಾ ಹುಬ್ಬೇರಿಸಬಹುದು. ಆದ್ರೆ, ವಾಸ್ತವ ಬೇರೆ.! ಮುಂದಿನ ಸ್ಲೈಡ್ ಕ್ಲಿಕ್ಕಿಸಿ...

    [ಕಲೆಕ್ಷನ್ ಚೆನ್ನಾಗಿದ್ದರೂ 'ಪುಟ್ಟಣ್ಣ'ನಿಗೆ ಮಲ್ಟಿಪ್ಲೆಕ್ಸ್ ಸಿಗುತ್ತಿಲ್ಲ]

    ಚಿತ್ರಮಂದಿರದಲ್ಲಿ ನಾಲ್ಕು ಜನ ಇಲ್ಲ!

    ಚಿತ್ರಮಂದಿರದಲ್ಲಿ ನಾಲ್ಕು ಜನ ಇಲ್ಲ!

    'ಬುಕ್ ಮೈ ಶೋ' ವೆಬ್ ತಾಣದಲ್ಲಿ 'ಆಕ್ಟರ್', 'ಭಲೇ ಜೋಡಿ' ಹಾಗೂ 'ಮಧುರ ಸ್ವಪ್ನ' ಚಿತ್ರಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ ಅಂತ ತೋರಿಸುತ್ತಿದ್ದರೂ, ಚಿತ್ರಮಂದಿರ ಮಾತ್ರ ತುಂಬಿರುವುದಿಲ್ಲ. ನಿಜ ಹೇಳ್ಬೇಕಂದ್ರೆ, ಥಿಯೇಟರ್ ಒಳಗೆ ಬೆರಳೆಣಿಕೆಯ ಸೀಟ್ ಗಳೂ ಭರ್ತಿ ಆಗಿರುವುದಿಲ್ಲ. [ವಿಮರ್ಶೆ : ಬಣ್ಣದ ಬದುಕಿಗೆ ಕನ್ನಡಿ ಹಿಡಿಯುವ 'ಆಕ್ಟರ್']

    ತಪ್ಪು ಮಾಹಿತಿ ನೀಡುತ್ತಿದ್ದಾರೆ ಮಲ್ಟಿಪ್ಲೆಕ್ಸ್ ನವರು!

    ತಪ್ಪು ಮಾಹಿತಿ ನೀಡುತ್ತಿದ್ದಾರೆ ಮಲ್ಟಿಪ್ಲೆಕ್ಸ್ ನವರು!

    'ಆಕ್ಟರ್', 'ಭಲೇ ಜೋಡಿ' ಹಾಗೂ 'ಮಧುರ ಸ್ವಪ್ನ' ಚಿತ್ರಗಳ ಟಿಕೆಟ್ ಗಳು ಲಭ್ಯವಿದ್ದರೂ, ಅದಕ್ಕೆ ಬುಕ್ಕಿಂಗ್ ಅವಕಾಶ ಮಾಡಿಕೊಡದೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು 'ಫೇಕ್ ಹೌಸ್ ಫುಲ್ ಬೋರ್ಡ್' ಹಾಕಿ ಕನ್ನಡ ಚಿತ್ರಗಳನ್ನ ಕೊಲೆ ಮಾಡುತ್ತಿವೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ. ['ಆಕ್ಟರ್' ಅಂತರಂಗ ಕಂಡ ವಿಮರ್ಶಕರು ನೀಡಿದ ಮಾರ್ಕ್ಸ್ ಎಷ್ಟು?]

    ಸಮಸ್ಯೆ 'ಬುಕ್ ಮೈ ಶೋ' ವೆಬ್ ತಾಣದ್ದಲ್ಲ!

    ಸಮಸ್ಯೆ 'ಬುಕ್ ಮೈ ಶೋ' ವೆಬ್ ತಾಣದ್ದಲ್ಲ!

    ಮಲ್ಟಿಪ್ಲೆಕ್ಸ್ ಚಿತ್ರಮಂದಿರದವರು ನೀಡುವ ಟಿಕೆಟ್ ಮಾಹಿತಿಯನ್ನಷ್ಟೇ 'ಬುಕ್ ಮೈ ಶೋ' ವೆಬ್ ತಾಣ ತೋರಿಸುತ್ತದೆ. ಹೀಗಾಗಿ, ಸಮಸ್ಯೆ ಮಲ್ಟಿಪ್ಲೆಕ್ಸ್ ನವರದ್ದೇ ಹೊರತು 'ಬುಕ್ ಮೈ ಶೋ'ನದ್ದಲ್ಲ ಎನ್ನಲಾಗಿದೆ.

    ನಿರ್ಮಾಪಕರ ಮೇಲೆ ಬರೆ ಎಳೆಯುತ್ತಿರುವ ಮಲ್ಟಿಪ್ಲೆಕ್ಸ್ ಗಳು!

    ನಿರ್ಮಾಪಕರ ಮೇಲೆ ಬರೆ ಎಳೆಯುತ್ತಿರುವ ಮಲ್ಟಿಪ್ಲೆಕ್ಸ್ ಗಳು!

    'ಆಕ್ಟರ್' ಸಿನಿಮಾ ನೋಡಲು ಆಸಕ್ತಿ ಹೊಂದಿರುವ ಅದೆಷ್ಟೋ ಮಂದಿ ಟಿಕೆಟ್ ಬುಕ್ ಮಾಡಲು ಯತ್ನಿಸಿದಾಗ ಮಲ್ಟಿಪ್ಲೆಕ್ಸ್ ಗಳಲ್ಲಿ ಟಿಕೆಟ್ ಲಭ್ಯವಾಗಿಲ್ಲ. ಅನವಶ್ಯಕವಾಗಿ 'ಹೌಸ್ ಫುಲ್' ಬೋರ್ಡ್ ತೋರಿಸುತ್ತಿರುವ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ನಿರ್ಮಾಪಕರ ಮೇಲೆ ಬರೆ ಎಳೆಯುತ್ತಿವೆ.

    ಜನ ನೋಡಿದ ಹಾಗೂ ಅಲ್ಲ! ದುಡ್ಡು ಬಂದ ಹಾಗೂ ಇಲ್ಲ!

    ಜನ ನೋಡಿದ ಹಾಗೂ ಅಲ್ಲ! ದುಡ್ಡು ಬಂದ ಹಾಗೂ ಇಲ್ಲ!

    ಮಲ್ಟಿಪ್ಲೆಕ್ಸ್ ಚಿತ್ರಮಂದಿರದವರ ಈ ಅವಾಂತರದಿಂದ ಲಾಸ್ ಅನುಭವಿಸುತ್ತಿರುವುದು ಕನ್ನಡ ಚಿತ್ರ ನಿರ್ಮಾಪಕರುಗಳು. ಅತ್ತ ಹೌಸ್ ಫುಲ್ ಬೋರ್ಡ್ ಬಿದ್ದಿದ್ದರೂ ನಿರ್ಮಾಪಕರ ಜೇಬು ತುಂಬುತ್ತಿಲ್ಲ. ಇತ್ತ ಚಿತ್ರ ನೋಡ ಬಯಸುವವರಿಗೆ ಟಿಕೆಟ್ ಇಲ್ಲ!

    ಮುಲಾಜಿಲ್ಲದೆ ಕನ್ನಡ ಚಿತ್ರಗಳನ್ನ ಕಿತ್ತೆಸೆಯುತ್ತಾರೆ!

    ಮುಲಾಜಿಲ್ಲದೆ ಕನ್ನಡ ಚಿತ್ರಗಳನ್ನ ಕಿತ್ತೆಸೆಯುತ್ತಾರೆ!

    ನಿನ್ನೆ, ಮೊನ್ನೆ ಎಲ್ಲಾ ಟಿಕೆಟ್ ಸೋಲ್ಡ್ ಔಟ್ ಅಂತ ತೋರಿಸುತ್ತಿದ್ದ 'ಆಕ್ಟರ್' ಸಿನಿಮಾ ಪ್ರದರ್ಶನ ಇಂದಿನಿಂದ ಸಿನಿಪೊಲಿಸ್ ಚಿತ್ರಮಂದಿರದಲ್ಲಿ ಇಲ್ಲ. ಹೌಸ್ ಫುಲ್ ಓಡುವ ಸಿನಿಮಾಗಳನ್ನ (ಮಲ್ಟಿಪ್ಲೆಕ್ಸ್ ಚಿತ್ರಮಂದಿರದವರ ಪ್ರಕಾರ) ಮಲ್ಟಿಪ್ಲೆಕ್ಸ್ ನಿಂದ ಕಿತ್ತೆಸೆಯುವುದಾದರೂ ಯಾಕೆ?

    ಪರಭಾಷೆ ಚಿತ್ರಗಳಿಗೆ ಲಾಭಿ?

    ಪರಭಾಷೆ ಚಿತ್ರಗಳಿಗೆ ಲಾಭಿ?

    ಒಂದ್ಕಡೆ ಲಾಸ್ ಅಂತ ತೋರಿಸಿ, ಕನ್ನಡ ಚಿತ್ರಗಳನ್ನ ಎತ್ತಂಗಡಿ ಮಾಡಿ ಪರಭಾಷೆ ಸಿನಿಮಾಗಳಿಗೆ ಜಾಗ ಮಾಡಿಕೊಡಲು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಲಾಭಿ ನಡೆಸುತ್ತಿವೆಯಾ?

    ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಜಾಗ ಇಲ್ಲ!

    ಕನ್ನಡ ಚಿತ್ರಗಳಿಗೆ ಕರ್ನಾಟಕದಲ್ಲೇ ಜಾಗ ಇಲ್ಲ!

    ಎಂತಹ ಪರಿಸ್ಥಿತಿ ಬಂತು ನೋಡಿ, ಕನ್ನಡ ಚಿತ್ರಗಳ ವೀಕ್ಷಣೆಗೆ ಕರ್ನಾಟಕದಲ್ಲೇ ಜಾಗ ಇಲ್ಲ.

    ಪರಭಾಷೆಗೂ ಹೀಗೆ ಮಾಡ್ತಾರಾ?

    ಪರಭಾಷೆಗೂ ಹೀಗೆ ಮಾಡ್ತಾರಾ?

    ಮಲ್ಟಿಪ್ಲೆಕ್ಸ್ ಗಳಲ್ಲಿ ಸದಾ ರಾರಾಜಿಸುವ ಹಿಂದಿ, ತಮಿಳು, ತೆಲುಗು ಮತ್ತು ಇಂಗ್ಲೀಷ್ ಭಾಷೆಯ ಚಿತ್ರಗಳಿಗೂ ಮಲ್ಟಿಪ್ಲೆಕ್ಸ್ ನವರು ಹೀಗೆ ಮಾಡ್ತಾರಾ? ಎಂಬ ಪ್ರಶ್ನೆ ಎದ್ದಿದೆ.

    ಇದೇ ಮೊದಲು ಅಲ್ಲ!

    ಇದೇ ಮೊದಲು ಅಲ್ಲ!

    ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಇದ್ದರೂ, ಮಲ್ಟಿಪ್ಲೆಕ್ಸ್ ನಿಂದ ಸಿನಿಮಾ ಎತ್ತಂಗಡಿ ಮಾಡಿದ್ದಕ್ಕೆ 'ಮದುವೆಯ ಮಮತೆಯ ಕರೆಯೋಲೆ' ಸಿನಿಮಾ ತಂಡ ಬೀದಿಗಿಳಿದು ಪ್ರತಿಭಟನೆ ಮಾಡಿತ್ತು. ಆದರೂ, ಮಲ್ಟಿಪ್ಲೆಕ್ಸ್ ನವರು ತಮ್ಮ ಹಳೇ ಚಾಳಿ ಬಿಟ್ಟಿಲ್ಲ.

    ಫಿಲ್ಮ್ ಚೇಂಬರ್ ಏನು ಮಾಡುತ್ತಿದೆ?

    ಫಿಲ್ಮ್ ಚೇಂಬರ್ ಏನು ಮಾಡುತ್ತಿದೆ?

    ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನ ತುಳಿಯುತ್ತಿದ್ದರೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾತ್ರ ಮೌನ ವಹಿಸಿದೆ. 'ಆಕ್ಟರ್' ಚಿತ್ರ ನಿರ್ಮಾಪಕ ಕೆ.ಎಂ.ವೀರೇಶ್ ಸದ್ಯ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ದೂರಿನ ಪರಿಣಾಮ ಫಿಲ್ಮ್ ಚೇಂಬರ್ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಈಗ ಎಲ್ಲರ ಗಮನ.

    ಸಾಮಾಜಿಕ ಜಾಲತಾಣಗಳಲ್ಲಿ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ!

    ಸಾಮಾಜಿಕ ಜಾಲತಾಣಗಳಲ್ಲಿ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ!

    ಮಲ್ಟಿಪ್ಲೆಕ್ಸ್ ಗಳ ವಿರುದ್ಧ ರೊಚ್ಚಿಗೆದ್ದಿರುವ ಕನ್ನಡ ಸಿನಿ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ.

    ಕನ್ನಡ ಸಿನಿಮಾಗಳನ್ನು ಕೊಲ್ಲುತ್ತಿರುವ ಬುಕ್ ಮೈ ಶೋ ಹಾಗೂ ಪಿವಿಆರ್ ವಿರುದ್ಧ ಸಮರ ಶುರುವಾಗಿದೆ..ಈಗ ತಾನೇ ಆಕ್ಟರ್ ಸಿನಿಮಾ ನಿರ್ಮಾಪಕರನ್ನೂ ಕರ್ಕೊಂಡು ಪಿವಿಆರ್ ಗೆ ಹೋಗಿ ಪ್ರಶ್ನೆ ಮಾಡಿದ್ದೇವೆ..ಸಿನಿಮಾ ಹೌಸ್ ಫುಲ್ ಅಂತ ತೋರಿಸಿ, ಟಿಕೆಟ್ ಬುಕ್ ಮಾಡದಂತೆ ಮಾಡಿ ಕನ್ನಡ ಸಿನಿಮಾಗಳನ್ನು ಕೊಲೆ ಮಾಡುತ್ತಿದ್ದಾರೆ...ಧಿಕ್ಕಾರ ಧಿಕ್ಕಾರ...ಇನ್ನು ಬಿಡೋದು ಬೇಡ...! #SaveKannadaFilms

    Posted by Kirik Keerthi - ಕಿರಿಕ್ ಕೀರ್ತಿ on Sunday, February 21, 2016

    ವಿಡಿಯೋ ಇದೆ ನೋಡಿ....

    ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಮಾಡುತ್ತಿರುವ ಈ ಮೋಸವನ್ನ 'ಆಕ್ಟರ್' ಚಿತ್ರದ ನಿರ್ಮಾಪಕ ವೀರೇಶ್ ಬಯಲಿಗೆಳೆದಿದ್ದಾರೆ. ಫುಲ್ ವಿಡಿಯೋ ನೋಡಿ....

    English summary
    Non-Kannada Movies lobby working big time in Karnataka. Kannada Movies are knocked out of Multiplexes. Kannada Movie 'Actor' Producer K.M.Veeresh gives complaint to KFCC.
    Monday, February 22, 2016, 14:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X