ಬೆಂಗಳೂರು ಫಿಲಂ ಫೆಸ್ಟಿವಲ್'ನಲ್ಲಿ ಸ್ಪರ್ಧೆ ಮಾಡಲಿರುವ ಕನ್ನಡ ಚಿತ್ರಗಳ ಪಟ್ಟಿ
11ನೇ ಆವೃತ್ತಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 21ರಿಂದ ಆರಂಭವಾಗುತ್ತಿದ್ದು, ಫೆಬ್ರವರಿ 28ರ ವರೆಗೂ ನಡೆಯಲಿದೆ. ರಾಜಾಜಿನಗರದ ಒರೆಯಾನ್ ಮಾಲ್ ನ 11 ಸ್ಕ್ರೀನ್ ಗಳಲ್ಲಿ ಸಿನಿಮಾ ಪ್ರದರ್ಶನವಾಗಲಿದೆ. 60 ದೇಶದ 225 ಚಿತ್ರಗಳು ಚಿತ್ರೋತ್ಸವದಲ್ಲಿ ಭಾಗವಹಿಸುತ್ತಿದೆ.
ಬೆಂಗಳೂರು ಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಹಲವು ಕನ್ನಡ ಸಿನಿಮಾಗಳು ಭಾಗವಹಿಸಿದ್ದು, ವರ್ಲ್ಡ್ ಸಿನಿಮಾ, ಏಷ್ಯಾ ಸಿನಿಮಾ, ಭಾರತೀಯ ಸಿನಿಮಾ ಹಾಗೂ ಕನ್ನಡ ಸಿನಿಮಾ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಬೆಂಗಳೂರು ಚಿತ್ರೋತ್ಸವ ಆಗಿರುವುದರಿಂದ ಕನ್ನಡದ ಯಾವ ಚಿತ್ರಗಳು ಸ್ಪರ್ಧೆಯಲ್ಲಿವೆ ಎಂಬುದು ಸದ್ಯದ ಕುತೂಹಲ. ಈ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ. ಯಾವ ವಿಭಾಗದಲ್ಲಿ ಯಾವ ಕನ್ನಡ ಸಿನಿಮಾ ಆಯ್ಕೆಯಾಗಿದೆ ಎಂಬುದನ್ನ ತಿಳಿಯಲು ಮುಂದೆ ಓದಿ......

ಏಷ್ಯಾ ವಿಭಾಗ
ವರ್ಲ್ಡ್ ಸಿನಿಮಾ ವಿಭಾಗದಲ್ಲಿ ಬರಿ ವಿದೇಶಿ ಚಿತ್ರಗಳು ಮಾತ್ರ ಸ್ಥಾನ ಪಡೆದುಕೊಂಡಿರುತ್ತೆ. ಹಾಗಾಗಿ ಅಲ್ಲಿ ಕನ್ನಡ ಸಿನಿಮಾಗಳು ಇರುವುದಿಲ್ಲ. ಏಷ್ಯಾ ವಿಭಾಗದಲ್ಲಿ ನೋಡಿದ್ರೆ ಒಟ್ಟು 15 ಚಿತ್ರಗಳು ನಾಮನಿರ್ದೇಶನವಾಗಿದ್ದು, ಪಿ ಶೇಷಾದ್ರಿ ನಿರ್ದೇಶನದ 'ಮೂಕಜ್ಜಿಯ ಕನಸುಗಳು' ಕನ್ನಡದಿಂದ ಆಯ್ಕೆಯಾಗಿದೆ.

ಭಾರತೀಯ ಸಿನಿಮಾ ವಿಭಾಗ
ಭಾರತೀಯ ಸಿನಿಮಾ ವಿಭಾಗದಲ್ಲಿ ಒಟ್ಟು 12 ಚಿತ್ರಗಳು ಭಾಗವಹಿಸಿದ್ದು, ಇದರಲ್ಲಿ ಎರಡು ಕನ್ನಡ ಚಿತ್ರಗಳು ಇವೆ. ದಯಾಳ್ ಪದ್ಮನಾಭನ್ ನಿರ್ದೇಶನದ 'ಆ ಕರಾಳ ರಾತ್ರಿ' ಮತ್ತು 'ಅಮ್ಮಚ್ಚಿಯೆಂಬ ನೆನಪು' ಚಿತ್ರ ನಾಮನಿರ್ದೇಶನವಾಗಿದೆ.

ಕನ್ನಡ ಸಿನಿಮಾ ವಿಭಾಗ
ಕನ್ನಡ ಸಿನಿಮಾ ವಿಭಾದ ಸ್ಪರ್ಧೆಯಲ್ಲಿ ಒಟ್ಟು 13 ಚಿತ್ರಗಳು ಪೈಪೋಟಿ ನಡೆಸಲಿವೆ. ಅನಂತು ವರ್ಸಸ್ ನುಸ್ರತ್, ಅನುತ್ತರ, ಅತ್ತಯ್ಯ ವರ್ಸಸ್ ಹಂದಿ ಕಾಯೋಳು, ಬೆಳಕಿನ ಕನ್ನಡಿ, ಕಾನೂರಾಯಾಣ, ನಾತಿಚರಮಿ, ನೀರು, ಮೂಕಜ್ಜಿಯ ಕನಸುಗಳು, ಒಂದಲ್ಲಾ ಎರಡಲ್ಲಾ, ರಾಮನ ಸವಾರಿ, ಸಮಾನತೆಯ ಕಡೆಗೆ, ಸ್ಮಶಾನ ಮೌನ, ಸಾವಿತ್ರಿ ಬಾಯಿ ಫುಲೆ ಮತ್ತು ವಿಶ್ವಮಾನವ ಚಿತ್ರಗಳಿವೆ.

ಜನಪ್ರಿಯ ಚಿತ್ರಗಳ ವಿಭಾಗ
ವರ್ಷದ ಅತ್ಯುತ್ತಮ ಮನರಂಜನ ಚಿತ್ರಗಳ ವಿಭಾಗದಲ್ಲಿ ಅಯೋಗ್ಯ, ಕೆಜಿಎಫ್, ರಾಜು ಕನ್ನಡ ಮೀಡಿಯಂ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ, ಹಂಬಲ್ ಪೊಲಿಟಿಶಿಯನ್ ನೊಗರಾಜ್, ರ್ಯಾಂಬೋ 2, ಟಗರು ಮತ್ತು ದಿ ವಿಲನ್ ಚಿತ್ರಗಳ ನಡುವೆ ಸ್ಪರ್ಧೆ ನಡೆಯಲಿದೆ.


Click it and Unblock the Notifications











