ಕನ್ನಡದ ಮೂರು ಚಿತ್ರಗಳ ಬಗ್ಗೆ ತಿಳಿಯಲು ಈ ಸ್ಟೋರಿ ಓದಿ
ಕನ್ನಡದಲ್ಲಿ ಪ್ರತಿವಾರವೂ ಹೊಸ ಹೊಸ ಸಿನಿಮಾಗಳು, ಹೊಸ ಹೊಸ ಕಲಾವಿದರು ಎಂಟ್ರಿ ಆಗುತ್ತಲೇ ಇರುತ್ತೆ. ಅದೇ ರೀತಿ ಕೆಲವು ಹೊಸಬರು ಚಿತ್ರಗಳು ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿದೆ. ಯಾವುದು ಆ ಚಿತ್ರಗಳು, ಆ ಚಿತ್ರ ಯಾವ ಹಂತದಲ್ಲಿದೆ ಎಂಬ ಕುತೂಹಲಕ್ಕೆ ಉತ್ತರ ಸಿಲ್ಲಿದೆ.
ಎಸ್ಕೇಪ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ನಡೆಯತ್ತಿದೆ
ದರ್ಶನ್ ಕನಕ ನಿರ್ಮಿಸಿ, ಛಾಯಾಗ್ರಹಣ ನಿರ್ವಹಿಸುತ್ತಿರುವ 'ಎಸ್ಕೇಪ್' ಚಿತ್ರಕ್ಕೆ ಹಿನ್ನೆಲೆ ಸಂಗೀತ ಕಾರ್ಯ ಸಾಗುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾವಸ್ತುವುಳ್ಳ ಈ ಚಿತ್ರದ ಕಥೆ-ಚಿತ್ರಕಥೆ ಬರೆದು ಸ್ವತಃ ದರ್ಶನ್ ನಿರ್ದೇಶನ ಮಾಡಿದ್ದಾರೆ. ಸಾಯಿಕಿರಣ್ ಅವರ ಸಂಗೀತ ಚಿತ್ರಕ್ಕಿದೆ. ಇನ್ನುಳಿದಂತೆ ಚಿತ್ರದಲ್ಲಿ ದೀಪಮ್ ಕೊಯ್ಲಿ, ಪ್ರಗ್ಯಾ ನಯನ್, ಭರತ್, ರಘು ಪಾಂಡೇಶ್ವರ್, ಮಾ|| ಹೇಮಂತ್, ಮುಂತಾದವರು ಅಭಿನಯಿಸಿದ್ದಾರೆ.

'ಶಂಖನಾದ' ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್
ಶ್ರೀ ಸಿದ್ಧರಾಮೇಶ್ವರ ಫಿಲಂಸ್ ಲಾಂಛನದಲ್ಲಿ ವಿಜಯಾರೆಡ್ಡಿ ಎಸ್ ಚೌದರಿ ನಿರ್ಮಾಣದ 'ಶಂಖನಾದ' ಚಿತ್ರಕ್ಕೆ ಇತ್ತೀಚೆಗೆ ಸೆನ್ಸಾರ್ ಮಂಡಳಿಯು ಚಿತ್ರ ವೀಕ್ಷಿಸಿ ಯು/ಎ ಸರ್ಟಿಫಿಕೆಟ್ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ನಿರ್ದೇಶನ ವಿಶ್ವನಾಥ ಬಸಪ್ಪ ಕಾಳಗಿ, ಸಂಗೀತ ವಿನು ಮನಸು ಒದಗಿಸಿದ್ದಾರೆ. ಶಾಂತರೆಡ್ಡಿ ಪಾಟೀಲ್, ನಯನ, ನಂ ಶ್ರೀನಿವಾಸ, ಶ್ರೀ, ರಶ್ಮಿತಾ, ಅಶೋಕ್ ಕಂಬಳಿ, ಸಿದ್ಧಾರ್ಥ ಕೆ, ರಾಜಾರಾಂ, ಶಂಕರ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಗಂಡ ಊರಿಗೆ ಹೋದಾಗ
ಸಾಯಿಕೃಷ್ಣ ನಿರ್ದೇಶನದಲ್ಲಿ ಒಂದು ಶುದ್ಧ ಹಾಸ್ಯ, ಥ್ರಿಲ್ಲರ್, ಸಸ್ಪೆನ್ಸ್ ಹಾಗೂ ಮನರಂಜನೆಯ ಚಿತ್ರ "ಗಂಡ ಊರಿಗೆ ಹೋದಾಗ" ಚಿತ್ರದ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಮೂಡಿಬಂದಿದ್ದು ಯೂಟ್ಯೂಬ್ ನಲ್ಲಿ ಟ್ರೈಲರ್ ಹಾಗೂ ಹಾಡುಗಳಿಗೆ ಪ್ರೇಕ್ಷಕರಿಂದ ಸುಮಾರು 14 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಸಿಂಧೂ ರಾವ್, ಸ್ವಪ್ನ, ಅನೂಗೌಡ, ರಾಧಿಕಾ ಹಾಗೂ ಶಾಲಿನಿ ಈ ಐದು ಜನ ನಟಿಯರು ಸಿನಿಮಾದಲ್ಲಿ ಗಂಡ ಊರಿಗೆ ಹೋದಾಗ ಏನೇನು ಮಾಡುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು ಅರುಣ್ ಆಂಡ್ರೋ ಸಂಗೀತವನ್ನು ನೀಡಿದ್ದಾರೆ. ಜಾನ್, ಜಗದೀಶ್ ಹಾಗೂ ಕಿರಣ್ ಹಣ ಹೂಡುವುದರ ಮೂಲಕ ನಿರ್ಮಾಪಕರಾಗುವುದರ ಜೊತೆಗೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ವಿ.ಸಿ.ಎನ್ ಮಂಜು ಚಿತ್ರದಲ್ಲಿ ಅಭಿನಯಿಸಿ ಕಾರ್ಯಕಾರಿ ನಿರ್ಮಾಪಕನ ಜವಾಬ್ಧಾರಿಯನ್ನು ಹೊತ್ತಿದ್ದಾರೆ.


Click it and Unblock the Notifications











