ಜೂನ್ ತಿಂಗಳು ಬಿಡುಗಡೆ ಆಗಲಿರುವ ಕನ್ನಡ ಸಿನಿಮಾಗಳು
ಕನ್ನಡದ '777 ಚಾರ್ಲಿ' ರಿಲೀಸ್ ಆಗಿ ಹಿಟ್ ಲಿಸ್ಟ್ ಸೇರಿದೆ. ಚಾರ್ಲಿ ನಾಯಕ ಪ್ರಧಾನ ಸಿನಿಮಾ ಅಲ್ಲ, ಕಮರ್ಷಿಯಲ್ ಎಂಟರ್‌ಟೈನರ್ ಅಲ್ಲ, ಕಂಟೆಂಟ್ ಇರುವ ಸಿನಿಮಾ. ಈ ಸಿನಿಮಾ ನೋಡಿ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. '777 ಚಾರ್ಲಿ' ಸಿನಿಮಾ ಗೆದ್ದ ಬೆನ್ನಲ್ಲೇ ಈ ವಾರ ಮತ್ತಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗುತ್ತಿವೆ.
ಈ ವಾರ ಕನ್ನಡದಲ್ಲಿ ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿವೆ. ಎಲ್ಲಾ ಚಿತ್ರಗಳು ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾಗಳಾಗಿವೆ. ಈ ವಾರ ಕಳೆಯುತ್ತಿದ್ದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಮಗ ವಿಕ್ರಮ್ ಅಭಿನಯದ ಮೊದಲ ಸಿನಿಮಾ 'ತ್ರಿವಿಕ್ರಮ್' ರಿಲೀಸ್ ಆಗ್ತಿರೋದು ವಿಶೇಷ.
ವಿಕ್ರಂ ರವಿಚಂದ್ರನ್ ಮೊದಲ ಸಿನಿಮಾ ತ್ರಿವಿಕ್ರಮ. ಸಹನಾ ಮೂರ್ತಿ ನಿರ್ದೇಶನದ ಸಿನಿಮಾ ಇದು. ಇದು ಲವ್ ಸ್ಟೋರಿ ಹೇಳಲು ಬರ್ತಿರುವ ಸಿನಿಮಾ. ವಿಕ್ರಂ ಜೊತೆಗೆ ಆಕಾಂಕ್ಷಾ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ಸಿಕ್ಕಾ ಎಕ್ಸ್‌ಪೆಕ್ಟೆಟೇಷನ್ ಇದೆ. 'ತ್ರಿವಿಕ್ರಮ್' ಬಿಡುಗಡೆಗೂ ಮುನ್ನ ಮೂರು ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

'ಮೇಡ್ ಇನ್ ಚೈನಾ' ಹೆಸರಿನ ಕನ್ನಡ ಸಿನಿಮಾ ಸಿನಿಮಾ ಜೂನ್ 17 ರಂದು ಬಿಡುಗಡೆ ಆಗುತ್ತಿದೆ. ನಾಗಭೂಷಣ್ ಈ ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದಾರೆ. 'ಹರಿಕಥೆ ಅಲ್ಲ ಗಿರಿಕಥೆ' ಜೂನ್ 23ರಂದು ರಿಲೀಸ್ ಆಗ್ತಿದೆ. ರಿಷಬ್ ಶೆಟ್ಟಿ ಹೀರೋ ಆಗಿರುವ 'ಹರಿಕಥೆ ಅಲ್ಲ ಗಿರಿಕಥೆ' ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್‌ಗೆ ಉತ್ತಮ ಪ್ರಶಂಸೆ ಸಿಕ್ಕಿದೆ. 'ಗರುಡ ಗಮನ ವೃಷಭ ವಾಹನ' ಚಿತ್ರದ ಬಳಿಕ ಮತ್ತೊಮ್ಮೆ ತೆರೆ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಡಲು ಬರುತ್ತಿದ್ದಾರೆ ರಿಷಬ್ ಶೆಟ್ಟಿ.
ಇನ್ನು ವಿಭಿನ್ನ ಗಮನ ಸೆಳೆದ 'ತುರ್ತು ನಿರ್ಗಮನ' ಚಿತ್ರ ಕೂಡ ಜೂನ್ 24ಕ್ಕೆ ರಿಲೀಸ್ ಆಗ್ತಿದೆ. ಈ ಚಿತ್ರದ ಟ್ರೈಲರ್ ಮತ್ತು ಕಂಟೆಂಟ್ ಭಿನ್ನವಾಗಿ ಗಮನ ಸೆಳೆದಿದೆ. ಸುಧಾರಾಣಿ, ಸುನಿಲ್ ರಾವ್ ಮತ್ತೆ ಚಿತ್ರರಂಗಕ್ಕೆ ಮರಳಿದ್ದಾರೆ ಅನ್ನೋದು ಚಿತ್ರದ ಇನ್ನೊಂದು ಹೈಲೈಟ್.

'ಬಡ್ಡೀಸ್' ಕಿರುತೆರೆ ನಟ ಕಿರಣ್ ರಾಜ್ ಅಭಿನಯದ ಸಿನಿಮಾ. ಇದು ಹೊಸತನ ಇರುವ ಸಿನಿಮಾ.ಚಿತ್ರದ ನಾಯಕ ನಟಕಿರಣ್ ರಾಜ್ ಎಲ್ಲರಿಗೂ ಚಿರಪರಿಚಿತ, ಇನ್ನು ನಾಯಕಿ ಸಿರಿ ಪ್ರಹ್ಲಾದ್ ಈಗಾಗಲೇ ಒಂದು ಶಿಕಾರಿಯ ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ. 'ಬಡ್ಡೀಸ್' ಸಿನಿಮಾವನ್ನು ಗುರುತೇಜ್ ಶೆಟ್ಟಿ ನಿರ್ದೇಶಿಸಿದ್ದಾರೆ.


Click it and Unblock the Notifications











