ಈ ಚಿತ್ರಗಳಲ್ಲಿ ಯಾವುದಕ್ಕೆ 'ಸೌತ್ ಫಿಲ್ಮ್ ಫೇರ್' ಪ್ರಶಸ್ತಿ ಸಿಗಲಿದೆ.?

By Bharath Kumar

2017-18ನೇ ಸಾಲಿನ ಸೌತ್ ಫಿಲ್ಮ್ ಫೇರ್ ಪ್ರಶಸ್ತಿಯ ನಾಮಿನೇಷನ್ ಪಟ್ಟಿ ಬಿಡುಗಡೆಯಾಗಿದ್ದು, ಕನ್ನಡದಲ್ಲಿ ಯಾವ ಯಾವ ಚಿತ್ರಗಳು ಪ್ರಶಸ್ತಿ ರೇಸ್ ನಲ್ಲಿದೆ ಎಂಬುದು ಕುತೂಹಲ ಮೂಡಿಸಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಸಿನಿಮಾಗಳ ಪೈಕಿ ಐದು ಚಿತ್ರಗಳು 'ಅತ್ಯುತ್ತಮ ಚಿತ್ರ ವಿಭಾಗ'ದಲ್ಲಿ ನಾಮಿನೇಟ್ ಆಗಿದೆ. ಈ ಸಿನಿಮಾಗಳಲ್ಲಿ ಯಾರಿಗೆ ಅದೃಷ್ಟ ಸಿಗಲಿದೆ ಎಂಬುದು ಈಗ ಚರ್ಚೆಯಾಗುತ್ತಿದೆ.

Kannada Movies Nomination in Filmfare Awards

ನಾಮನಿರ್ದೇಶನಗೊಂಡಿರುವ ಈ ಐದು ಚಿತ್ರಗಳು ಯಾವುದು ಎಂಬುದನ್ನ ನೋಡೋದಾದರೇ, ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದ 50ನೇ ಸಿನಿಮಾ 'ಚೌಕ'. ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್, ವಿಜಯ ರಾಘವೇಂದ್ರ, ದಿಗಂತ್ ಈ ಚಿತ್ರದಲ್ಲಿ ಅಭಿನಯಿಸಿದ್ದರು.

ರೋಹಿತ್ ಪದಕಿ ನಿರ್ದೇಶನ ಮಾಡಿದ್ದ 'ದಯವಿಟ್ಟು ಗಮನಿಸಿ'. ವಸಿಷ್ಠ ಸಿಂಹ, ಸಂಗೀತಾ ಭಟ್, ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ, ರಘು ಮುಖರ್ಜಿ, ಸಂಯುಕ್ತ ಹೊರನಾಡು ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದರು.

Kannada Movies Nomination in Filmfare Awards

ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ 'ಒಂದು ಮೊಟ್ಟೆಯ ಕಥೆ' ಸಿನಿಮಾ ಕೂಡ ಸೌತ್ ಫಿಲ್ಮ್ ಫೇರ್ ಪ್ರಶಸ್ತಿಗಾಗಿ ನಾಮಿನೇಟ್ ಆಗಿದೆ.

ಇನ್ನು ಕಳೆದ ವರ್ಷ ಗಮನ ಸೆಳೆದ ಮಹಿಳಾ ಪ್ರಧಾನ ಸಿನಿಮಾಗಳಾದ 'ಶುದ್ಧಿ' ಮತ್ತು 'ಉರ್ವಿ' ಚಿತ್ರಗಳು ಈ ರೇಸ್ ನಲ್ಲಿದೆ.

Kannada Movies Nomination in Filmfare Awards

ಒಟ್ಟು ಐದು ಚಿತ್ರಗಳು ಅತ್ಯುತ್ತಮ ಚಿತ್ರ ಕನ್ನಡ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದು, ಯಾವ ಚಿತ್ರಕ್ಕೆ ಪ್ರಶಸ್ತಿ ಸಿಗಲಿದೆ ಎಂಬುದು ಜೂನ್ 16 ರಂದು ನೋಡಬೇಕಿದೆ.

More from Filmibeat

English summary
Time to celebrate the best of South Indian cinema, which is only getting bigger and better every passing year. Come June 16th and we’ll see excellence in Tamil, Telugu, Malayalam and Kannada cinema being honoured in Hyderabad at the 65th Jio Filmfare Awards (South). But before that, take a look at who all our nominated this year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X