twitter
    For Quick Alerts
    ALLOW NOTIFICATIONS  
    For Daily Alerts

    ಈ ಚಿತ್ರಗಳಲ್ಲಿ ಯಾವುದಕ್ಕೆ 'ಸೌತ್ ಫಿಲ್ಮ್ ಫೇರ್' ಪ್ರಶಸ್ತಿ ಸಿಗಲಿದೆ.?

    By Bharath Kumar
    |

    2017-18ನೇ ಸಾಲಿನ ಸೌತ್ ಫಿಲ್ಮ್ ಫೇರ್ ಪ್ರಶಸ್ತಿಯ ನಾಮಿನೇಷನ್ ಪಟ್ಟಿ ಬಿಡುಗಡೆಯಾಗಿದ್ದು, ಕನ್ನಡದಲ್ಲಿ ಯಾವ ಯಾವ ಚಿತ್ರಗಳು ಪ್ರಶಸ್ತಿ ರೇಸ್ ನಲ್ಲಿದೆ ಎಂಬುದು ಕುತೂಹಲ ಮೂಡಿಸಿದೆ.

    ಕಳೆದ ವರ್ಷ ಬಿಡುಗಡೆಯಾಗಿದ್ದ ಸೂಪರ್ ಹಿಟ್ ಸಿನಿಮಾಗಳ ಪೈಕಿ ಐದು ಚಿತ್ರಗಳು 'ಅತ್ಯುತ್ತಮ ಚಿತ್ರ ವಿಭಾಗ'ದಲ್ಲಿ ನಾಮಿನೇಟ್ ಆಗಿದೆ. ಈ ಸಿನಿಮಾಗಳಲ್ಲಿ ಯಾರಿಗೆ ಅದೃಷ್ಟ ಸಿಗಲಿದೆ ಎಂಬುದು ಈಗ ಚರ್ಚೆಯಾಗುತ್ತಿದೆ.

    Kannada Movies Nomination in Filmfare Awards

    ಸೌತ್ ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಯಾರ ಮುಡಿಗೆ ? ಸೌತ್ ಫಿಲ್ಮ್ ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಯಾರ ಮುಡಿಗೆ ?

    ನಾಮನಿರ್ದೇಶನಗೊಂಡಿರುವ ಈ ಐದು ಚಿತ್ರಗಳು ಯಾವುದು ಎಂಬುದನ್ನ ನೋಡೋದಾದರೇ, ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದ್ದ 50ನೇ ಸಿನಿಮಾ 'ಚೌಕ'. ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್, ವಿಜಯ ರಾಘವೇಂದ್ರ, ದಿಗಂತ್ ಈ ಚಿತ್ರದಲ್ಲಿ ಅಭಿನಯಿಸಿದ್ದರು.

    ರೋಹಿತ್ ಪದಕಿ ನಿರ್ದೇಶನ ಮಾಡಿದ್ದ 'ದಯವಿಟ್ಟು ಗಮನಿಸಿ'. ವಸಿಷ್ಠ ಸಿಂಹ, ಸಂಗೀತಾ ಭಟ್, ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ, ರಘು ಮುಖರ್ಜಿ, ಸಂಯುಕ್ತ ಹೊರನಾಡು ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದರು.

    Kannada Movies Nomination in Filmfare Awards

    ಈ ವರ್ಷದ 'ಸೌತ್ ಫಿಲ್ಮ್ ಫೇರ್' ಕನ್ನಡ ನಟಿ ಪ್ರಶಸ್ತಿ ಯಾರಿಗೆ.?ಈ ವರ್ಷದ 'ಸೌತ್ ಫಿಲ್ಮ್ ಫೇರ್' ಕನ್ನಡ ನಟಿ ಪ್ರಶಸ್ತಿ ಯಾರಿಗೆ.?

    ರಾಜ್ ಬಿ ಶೆಟ್ಟಿ ನಟಿಸಿ ನಿರ್ದೇಶನ ಮಾಡಿದ್ದ 'ಒಂದು ಮೊಟ್ಟೆಯ ಕಥೆ' ಸಿನಿಮಾ ಕೂಡ ಸೌತ್ ಫಿಲ್ಮ್ ಫೇರ್ ಪ್ರಶಸ್ತಿಗಾಗಿ ನಾಮಿನೇಟ್ ಆಗಿದೆ.

    ಇನ್ನು ಕಳೆದ ವರ್ಷ ಗಮನ ಸೆಳೆದ ಮಹಿಳಾ ಪ್ರಧಾನ ಸಿನಿಮಾಗಳಾದ 'ಶುದ್ಧಿ' ಮತ್ತು 'ಉರ್ವಿ' ಚಿತ್ರಗಳು ಈ ರೇಸ್ ನಲ್ಲಿದೆ.

    Kannada Movies Nomination in Filmfare Awards

    ಒಟ್ಟು ಐದು ಚಿತ್ರಗಳು ಅತ್ಯುತ್ತಮ ಚಿತ್ರ ಕನ್ನಡ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದು, ಯಾವ ಚಿತ್ರಕ್ಕೆ ಪ್ರಶಸ್ತಿ ಸಿಗಲಿದೆ ಎಂಬುದು ಜೂನ್ 16 ರಂದು ನೋಡಬೇಕಿದೆ.

    English summary
    Time to celebrate the best of South Indian cinema, which is only getting bigger and better every passing year. Come June 16th and we’ll see excellence in Tamil, Telugu, Malayalam and Kannada cinema being honoured in Hyderabad at the 65th Jio Filmfare Awards (South). But before that, take a look at who all our nominated this year.
    Thursday, June 7, 2018, 20:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X