ರಾಜ್ಯೋತ್ಸವದ ವಿಶೇಷ : ಸ್ಟಾರ್ ನಟರ ಕಡೆಯಿಂದ ಬಂದ ಶುಭಾಶಯಗಳು
ಇವತ್ತು ಕನ್ನಡ ಹಬ್ಬವನ್ನು ಎಲ್ಲರೂ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ಹಬ್ಬದ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳ ಪೋಸ್ಟರ್ ಗಳು ಬಿಡುಗಡೆಯಾಗಿವೆ.
ನಟ ಶಿವರಾಜ್ ಕುಮಾರ್ ಅವರ 'ಕವಚ', ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾದ ಟೈಟಲ್ ಲಾಂಚ್, '777 ಚಾರ್ಲಿ', 'ಕನ್ನಡ ಗೊತ್ತಿಲ್ಲ' ಹಾಗೂ 'ಸೀತಾರಾಮ ಕಲ್ಯಾಣ' ಸಿನಿಮಾಗಳ ಪೋಸ್ಟರ್ ಗಳು ಬಿಡುಗಡೆಯಾಗಿದೆ.
ಒಂದು ಕಡೆ ಇಂದು ಐದು ಕನ್ನಡ ಸಿನಿಮಾಗಳು ಬಿಡುಗಡೆಯಾಗಿದೆ. ಇತ್ತ ಕೆಲ ಚಿತ್ರತಂಡಗಳು ತಮ್ಮ ಸಿನಿಮಾಗಳ ಪೋಸ್ಟರ್ ಗಳನ್ನು ರಿಲೀಸ್ ಮಾಡುವ ಮೂಲಕ ಕನ್ನಡಿಗರಿಗೆ ಶುಭ ಹಾರೈಸಿದ್ದಾರೆ. ಮುಂದೆ ಓದಿ...

'ಯುವರತ್ನ' ಟೈಟಲ್ ಲಾಂಚ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಅವರ ಹೊಸ ಚಿತ್ರದ ಟೈಟಲ್ ಏನು ಎಂದು ಕಳೆದ ತಿಂಗಳಿನಿಂದ ಭಾರಿ ಕುತೂಹಲ ಮೂಡಿಸಿತ್ತು. ಇಂದು ಅಂತಿಮವಾಗಿ ಟೈಟಲ್ ಅನಾವರಣ ಆಗಿದೆ. ಕನ್ನಡ ರಾಜ್ಯೋತ್ಸವದ ವಿಶೇಷ ದಿನದಂದು ಪುನೀತ್-ಸಂತೋಷ್ ಜೋಡಿಯ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದು, 'ಯುವರತ್ನ' ದಿ ಪವರ್ ಆಫ್ ದಿ ಯೂತ್ ಎಂದು ನಾಮಕರಣ ಮಾಡಲಾಗಿದೆ.

'ಕವಚ' ಪೋಸ್ಟರ್
ನಟ ಶಿವರಾಜ್ ಕುಮಾರ್ ಅವರ 'ಕವಚ' ಸಿನಿಮಾ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ರಾಜ್ಯೋತ್ಸವದ ಶುಭಾಶಯ ತಿಳಿಸಿದೆ. ಇದು ಮಲೆಯಾಳಂ ಭಾಷೆಯ 'ಒಪ್ಪಂ' ಸಿನಿಮಾದ ರಿಮೇಕ್ ಆಗಿದೆ. ಶಿವಣ್ಣ ಇಲ್ಲಿ ಅಂಧನ ಪಾತ್ರ ಮಾಡುತ್ತಿದ್ದಾರೆ.

'777 ಚಾರ್ಲಿ' ಪೋಸ್ಟರ್
ನಟ ರಕ್ಷಿತ್ ಶೆಟ್ಟಿ ಅವರ '777 ಚಾರ್ಲಿ' ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಸಿನಿಮಾ ಶ್ವಾನ ಮತ್ತು ಮನುಷ್ಯನ ಬಾಂಡಿಂಗ್ ಹೇಳುವಂತಹ ಕಥೆಯನ್ನು ಹೊಂದಿದೆ. ಕಿರಣ್ ರಾಜ್ ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್‌ಗೆ ನಿರ್ದೇಶಕ ಪರಿಚಿತವಾಗುತ್ತಿದ್ದಾರೆ. ರಕ್ಷಿತ್ ಈ ಚಿತ್ರವನ್ನ ತಾವೇ ನಿರ್ಮಾಣ ಮಾಡುತ್ತಿದ್ದಾರೆ.

'ಕನ್ನಡ ಗೊತ್ತಿಲ್ಲ' ಪೋಸ್ಟರ್
ನಟಿ ಹರಿಪ್ರಿಯಾ ಅವರ 'ಕನ್ನಡ್ ಗೊತ್ತಿಲ್ಲ' ಸಿನಿಮಾ ಟೈಟಲ್ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇಂದು ಈ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಈ ಚಿತ್ರವನ್ನು ಆರ್ ಜೆ ಮಯೂರ್ ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಹಾರರ್ ಜಾನರ್ ನಲ್ಲಿ ಸಿನಿಮಾ ಇರಲಿದ್ದು, ಇಂದಿನ ದಿನಕ್ಕೆ ತುಂಬ ಹತ್ತಿರ ಆಗಲಿದೆಯಂತೆ.

'ಸೀತಾರಾಮ ಕಲ್ಯಾಣ' ಪೋಸ್ಟರ್
ನಟ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ಬಿಡುಗಡೆ ಯಾವಾಗ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇದೆ. ಇದೀಗ ಸಿನಿಮಾದ ಹೊಸ ಪೋಸ್ಟರ್ ಕನ್ನಡದ ಹಬ್ಬಕ್ಕೆ ಬಂದಿದೆ. ಈ ಚಿತ್ರವನ್ನು ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ರಚಿತಾ ರಾಮ್ ಚಿತ್ರದ ನಾಯಕಿ ಆಗಿದ್ದಾರೆ.


Click it and Unblock the Notifications











