For Quick Alerts
  ALLOW NOTIFICATIONS  
  For Daily Alerts

  'ರತ್ನನ್ ಪ್ರಪಂಚ' ಸೂಪರ್, ನಿರಂಜನ್ ಹುಟ್ಟುಹಬ್ಬಕ್ಕೆ 'ಸೂಪರ್ ಸ್ಟಾರ್'

  |

  ಸ್ಯಾಂಡಲ್‌ವುಡ್‌ನಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜೋರಾಗಿದೆ. ಯಾವ ಚಿತ್ರವೂ ಬಿಡುಗಡೆಯಾಗಿಲ್ಲ ಎನ್ನುವ ಬೇಸರದ ನಡುವೆಯೂ ಕೆಲವು ಪೋಸ್ಟರ್, ಟ್ರೈಲರ್ ಚಿತ್ರಪ್ರೇಮಿಗಳಿಗೆ ಖುಷಿ ಕೊಟ್ಟಿದೆ.

  ಧನಂಜಯ್ ಅಭಿನಯದ 'ರತ್ನನ್ ಪ್ರಪಂಚ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿದೆ. ದಯವಿಟ್ಟು ಗಮನಿಸಿ ಸಿನಿಮಾದ ಬಳಿಕ ರೋಹಿತ್ ಪದಕಿ ನಿರ್ದೇಶಿಸಿರುವ ಈ ಸಿನಿಮಾ ಬಹಳ ವಿಶೇಷವಾಗಿ ಮೂಡಿ ಬಂದಿದೆ ಎನ್ನುವುದಕ್ಕೆ ಟ್ರೈಲರ್ ತಾಜಾ ಉದಾಹರಣೆಯಾಗಿದೆ.

  ಮುಂದುವರಿದ ಶಿವಣ್ಣನ ಸಿನಿಮಾ ಪರ್ವ: ಯುವ ನಿರ್ದೇಶಕನ ಜೊತೆ 127ನೇ ಚಿತ್ರಮುಂದುವರಿದ ಶಿವಣ್ಣನ ಸಿನಿಮಾ ಪರ್ವ: ಯುವ ನಿರ್ದೇಶಕನ ಜೊತೆ 127ನೇ ಚಿತ್ರ

  ಧನಂಜಯ್ ಜೊತೆ ರೆಬಾ ಜಾನ್, ಉಮಾಶ್ರೀ, ಶ್ರುತಿ, ಪ್ರಮೋದ್ ಶೆಟ್ಟಿ, ಅನು ಪ್ರಭಾಕರ್, ರವಿಶಂಕರ್ , ವೈನಿಧಿ, ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಅಡಿಯಲ್ಲಿ ಕಾರ್ತಿಕ್ ಮತ್ತು ಯೋಗಿ ಜಿ ರಾಜು ಬಂಡವಾಳ ಹಾಕಿದ್ದಾರೆ.

  ಕೆಜಿಎಫ್ ಚಾಪ್ಟರ್ 2 ಸ್ಯಾಟ್‌ಲೈಟ್ ಹಕ್ಕು ಖರೀದಿಸಿದ ಜೀ ಸಂಸ್ಥೆಕೆಜಿಎಫ್ ಚಾಪ್ಟರ್ 2 ಸ್ಯಾಟ್‌ಲೈಟ್ ಹಕ್ಕು ಖರೀದಿಸಿದ ಜೀ ಸಂಸ್ಥೆ

  ಅಜಿತ್ ಕುಮಾರ್ ನಟಿಸಿ ನಿರ್ದೇಶಿಸಿರುವ ಸಿನಿಮಾ 'ರೈಮ್ಸ್' ಟ್ರೈಲರ್ ಸಹ ಇವತ್ತೆ ಬಿಡುಗಡೆಯಾಗಿದೆ. ಮರ್ಡರ್ ಮಿಸ್ಟರಿ ಕಥೆ ಹೊಂದಿರುವ ಈ ಚಿತ್ರ ಸಖತ್ ಸಸ್ಪೆನ್ಸ್‌ನಿಂದ ಕೂಡಿದೆ. ಶುಭ ಪೂಂಜಾ, ಸುಷ್ಮಾ ನಾಯರ್, ಅಭಿಮನ್ಯು ಸೇರಿದಂತೆ ಹಲವರು ನಟಿಸಿದ್ದಾರೆ. ಇದರ ಜೊತೆ ಇನ್ನು ಹಲವು ಸಿನಿಮಾಗಳು ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಮುಂದೆ ಓದಿ...

  'ಸೂಪರ್ ಸ್ಟಾರ್' ಟೀಸರ್

  'ಸೂಪರ್ ಸ್ಟಾರ್' ಟೀಸರ್

  ರಿಯಲ್ ಸ್ಟಾರ್ ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ಸುಧೀರ್ ನಟನೆಯ 'ಸೂಪರ್ ಸ್ಟಾರ್' ಚಿತ್ರದ ಬರ್ತಡೇ ಟೀಸರ್ ಬಿಡುಗಡೆಯಾಗಿದೆ. ಆಗಸ್ಟ್ 20 ರಂದು ನಿರಂಜನ್ ಹುಟ್ಟುಹಬ್ಬ. ಈ ಹಿನ್ನೆಲೆ ಸೂಪರ್ ಸ್ಟಾರ್ ಚಿತ್ರ ಟೀಸರ್ ರಿಲೀಸ್ ಆಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ. ಈ ಚಿತ್ರಕ್ಕೆ ರಮೇಶ್ ವೆಂಕಟೇಶ್ ಬಾಬು ಆಕ್ಷನ್ ಕಟ್ ಹೇಳಿದ್ದಾರೆ.

  ಲವ್ ಯೂ ರಚ್ಚು ಪೋಸ್ಟರ್

  ಲವ್ ಯೂ ರಚ್ಚು ಪೋಸ್ಟರ್

  ಅಜಯ್ ರಾವ್ ಮತ್ತು ರಚಿತಾ ರಾಮ್ ನಟನೆಯ 'ಲವ್ ಯೂ ರಚ್ಚು' ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಗುರುದೇಶಪಾಂಡೆ ನಿರ್ಮಾಣದ ಈ ಚಿತ್ರಕ್ಕೆ ಶಂಕರ್ ನಿರ್ದೇಶನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣ ವೇಳೆ ದುರಂತ ಸಂಭವಿಸಿ ವಿವೇಕ್ ಎಂಬ ಸಾಹಸ ಕಲಾವಿದ ಮೃತಪಟ್ಟಿದ್ದ. ಈ ಕೇಸ್ ಸಂಬಂಧಿತ ಫೈಟ್ ಮಾಸ್ಟರ್ ವಿನೋದ್, ನಿರ್ದೇಶಕ ಶಂಕರ್ ಹಾಗೂ ಕ್ರೇನ್ ಆಪರೇಟರ್‌ನ್ನು ಅರೆಸ್ಟ್ ಮಾಡಿದ್ದರು.

  ಶಿವಣ್ಣನ 127ನೇ ಚಿತ್ರ ಘೋಷಣೆ

  ಶಿವಣ್ಣನ 127ನೇ ಚಿತ್ರ ಘೋಷಣೆ

  ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಶಿವರಾಜ್ ಕುಮಾರ್ ಅವರ 127ನೇ ಸಿನಿಮಾ ಘೋಷಣೆಯಾಗಿದೆ. 'ಮಮ್ಮಿ ಸೇವ್ ಮಿ' ಹಾಗೂ 'ದೇವಕಿ' ಚಿತ್ರಗಳನ್ನು ನಿರ್ದೇಶಿಸಿದ ಎಚ್ ಲೋಹಿತ್ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ಸತ್ಯಮಂಗಳ' ಎಂದು ಹೆಸರಿಡಲಾಗಿದೆ. ಈಗಾಗಲೇ ಹ್ಯಾಟ್ರಿಕ್ ಹೀರೋ ಜೊತೆ 'ಬೈರಾಗಿ' ಸಿನಿಮಾ ಮಾಡ್ತಿರುವ ಕೃಷ್ಣ ಸಾರ್ಥಕ್ 127ನೇ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ಒದಗಿಸುತ್ತಿದ್ದಾರೆ.

  ದುನಿಯಾ ವಿಜಯ್ 'ಸಲಗ'

  ದುನಿಯಾ ವಿಜಯ್ 'ಸಲಗ'

  ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ 'ಸಲಗ' ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆಯಾಗಬೇಕಿತ್ತು. ಅದರೆ, ಚಿತ್ರಮಂದಿರದಲ್ಲಿ 100 ಪರ್ಸೆಂಟ್ ಅನುಮತಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ರಿಲೀಸ್‌ನಿಂದ ಹಿಂದೆ ಸರಿದಿದೆ. ಆದರೂ ಹಬ್ಬಕ್ಕೆ ಹೊಸ ಪೋಸ್ಟರ್ ಬಿಡುಗಡೆ ಮಾಡಿ ಶುಭಾಶಯ ಕೋರಿದೆ. ಕೆಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಇದೆ. ಧನಂಜಯ್, ಸಂಜನಾ ಆನಂದ್ ನಟಿಸಿದ್ದಾರೆ.

  ಪೆಟ್ರೋಮ್ಯಾಕ್ಸ್-ತೋತಾಪುರಿ

  ಪೆಟ್ರೋಮ್ಯಾಕ್ಸ್-ತೋತಾಪುರಿ

  'ನೀರ್‌ದೋಸೆ' ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ಎರಡು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ. ಜಗ್ಗೇಶ್ ನಟನೆಯಲ್ಲಿ 'ತೋತಾಪುರಿ ಭಾಗ 1' ಮತ್ತು ಸತೀಶ್ ನೀನಾಸಂ ಅಭಿನಯದ 'ಪೆಟ್ರೋಮ್ಯಾಕ್ಸ್' ಚಿತ್ರದ ಪೋಸ್ಟರ್ ಇಂದು ಬಿಡುಗಡೆಯಾಗಿದೆ. ಈ ಎರಡು ಸಿನಿಮಾ ವಿಜಯ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ.

  ಅದೊಂದಿತ್ತು ಕಾಲ

  ಅದೊಂದಿತ್ತು ಕಾಲ

  ವಿನಯ್ ರಾಜ್ ಕುಮಾರ್ ನಟನೆಯ 'ಅದೊಂದಿತ್ತು ಕಾಲ' ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಕೀರ್ತಿ ಈ ಚಿತ್ರ ನಿರ್ದೇಶಿಸಿದ್ದು, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಭುವನ್ ಸುರೇಶ್ ನಿರ್ಮಾಣ ಮಾಡಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ಹೋಸ ಪೋಸ್ಟರ್ ರಿಲೀಸ್ ಮಾಡಿದೆ.

  English summary
  Kannada Movies Posters Released on the occasion of Varamahalakshmi festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X