»   » ರಾಮಾ ರಾಮ...., ಗೋಧಿ ಬಣ್ಣ..., ಉಪ್ಪಿನ ಕಾಗದ ಚಿತ್ರಗಳಿಗೆ ಪ್ರಶಸ್ತಿ

ರಾಮಾ ರಾಮ...., ಗೋಧಿ ಬಣ್ಣ..., ಉಪ್ಪಿನ ಕಾಗದ ಚಿತ್ರಗಳಿಗೆ ಪ್ರಶಸ್ತಿ

Posted By:
Subscribe to Filmibeat Kannada

ಮೈಸೂರು, ಫೆಬ್ರವರಿ 9: ಕಳೆದೊಂದು ವಾರದಿಂದ ನಡೆಯುತ್ತಿದ್ದ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಗುರುವಾರ ವೈಭವದ ತೆರೆಬಿತ್ತು. ಸಮಾರೋಪ ಸಮಾರಂಭದಲ್ಲಿ ಸಿನಿಮೋತ್ಸವದಲ್ಲಿ ವಿವಿಧ ವಿಭಾಗಗಳಿಗೆ ಸ್ಪರ್ಧಿಸಿದ್ದ ದೇಶ, ವಿದೇಶಗಳ ಚಲನಚಿತ್ರಗಳಲ್ಲಿ ಹಲವಾರು ಚಿತ್ರಗಳು ಪ್ರಶಸ್ತಿಗೆ ಭಾಜನವಾದವು.

ಅವುಗಳಲ್ಲಿ ಕನ್ನಡ ಚಿತ್ರಗಳ ವಿಭಾಗದಲ್ಲಿ 'ರಾಮಾ ರಾಮ ರೇ' ಮೊದಲ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದರೆ, 'ಪಲ್ಲಟ' ಚಿತ್ರ ದ್ವಿತೀಯ ಹಾಗೂ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ ತೃತೀಯ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿ ಪಡೆಯಿತು.
ಇನ್ನು, ಬಿ. ಸುರೇಶ್ ನಿರ್ದೇಶನದ ಉಪ್ಪಿನ ಕಾಗದ ಚಿತ್ರವು ಅಂತಾರಾಷ್ಟ್ರೀಯ ಜ್ಯೂರಿ ವಿಭಾಗದ ಮೆಚ್ಚುಗೆಗೆ ಪಾತ್ರವಾಯಿತು.

Kannada Movies Rama Rama Re got best Film Award in BIFF

ಇನ್ನು, ಬೆಸ್ಟ್ ಕನ್ನಡ ಪಾಪ್ಯುಲರ್ ಎಂಟರ್ಟೈನ್ ಮೆಂಟ್ ಚಿತ್ರಗಳ ವಿಭಾಗದಲ್ಲಿ, ಸುದೀಪ್ ಅಭಿನಯದ 'ಕೋಟಿಗೊಬ್ಬ-೨' ಮೊದಲ ಸ್ಥಾನ ಪಡೆದರೆ, ಆನಂತರದ ಸ್ಥಾನಗಳನ್ನು ದರ್ಶನ್ ಅಭಿನಯದ 'ಜಗ್ಗುದಾದ', ಪುನೀತ್ ರಾಜ್ ಕುಮಾರ್ ಅಭಿನಯದ 'ದೊಡ್ಮನೆ ಹುಡುಗ' ಚಿತ್ರಗಳು ಪಡೆದುಕೊಂಡವು.

ಇನ್ನು, ಭಾರತೀಯ ಸಿನಿಮಾ ವಿಭಾಗದಲ್ಲಿ ಕನ್ನಡದ 'ಹರಿಕಥಾ ಪ್ರಸಂಗ' ಹಾಗೂ 'ಕಾಡುಕ್ಕೂಕ್ಕನ್ ನೇರಂ' ಚಿತ್ರಗಳು ಅತ್ಯುತ್ತಮ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾದವು. ಕಾಡುಕ್ಕೂಕ್ಕನ್ ನೇರಂ ಚಿತ್ರಕ್ಕೆ ಲೇಥ್ ಜೋಷಿ ಪ್ರಶಸ್ತಿ ಲಭಿಸಿದೆ.

ವಿಮರ್ಶಕರ ಮೆಚ್ಚುಗೆಗೆ ಮಣಿಪುರದ 'ಲೇಡಿ ಆಫ್ ಲೇಕ್' ಚಿತ್ರ ಆಯ್ಕೆಯಾಯಿತು. ವಿಶೇಷ ಜ್ಯೂರಿ ಪ್ರಶಸ್ತಿಯು ಲತೆ ಜೋಷಿ ಚಿತ್ರದ ಪಾಲಾಯಿತು.

ಏಷ್ಯಾ ವಿಭಾಗದಲ್ಲಿ ಶ್ರೇಷ್ಠ ಚಿತ್ರ ಪ್ರಶಸ್ತಿಯನ್ನು ಕಿರ್ಗಿಸ್ತಾನದ 'ಎ ಫಾದರ್ಸ್ ವಿಲ್' ಎಂಬ ಚಿತ್ರ ಪಡೆದುಕೊಂಡಿತು.

ರಾಜ್ಯಪಾಲ ವಜುಭಾಯಿವಾಲ ಪ್ರಶಸ್ತಿ ವಿತರಿಸಿದರು. ಸಚಿವ ಮಹದೇವಪ್ಪ , ಮಹಾಪೌರರಾದ ರವಿಕುಮಾರ್ ಶಾಸಕಾಂಗದ ಸೋಮಶೇಖರ್ ಮತ್ತಿತರ ಗಣ್ಯರು ಭಾಗಿಯಾಗಿದ್ದರು.

English summary
In a closing ceremony of Bengaluru International Film Festival in Mysore on Thursday, Kannada films Rama Rama Re got award of best film in Kannada Category and Pallata and Godhi Banna Sadharana Maikattu got the 2nd and 3rd best movies respectively.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada