For Quick Alerts
  ALLOW NOTIFICATIONS  
  For Daily Alerts

  ಈ ವಾರ 7 ಚಿತ್ರಗಳು ರಿಲೀಸ್! ನಿಮ್ಮ ಆಯ್ಕೆ ಯಾವುದು?

  By Harshitha
  |

  ಎರಡ್ಮೂರು ವಾರಗಳ ಹಿಂದೆಯಷ್ಟೇ, ಸ್ಯಾಂಡಲ್ ವುಡ್ ನಲ್ಲಿ ಒಟ್ಟೊಟ್ಟಿಗೆ ಏಳು ಚಿತ್ರಗಳು ರಿಲೀಸ್ ಆಗಿದ್ದವು. ಹೀಗಿದ್ದರೂ, ಯಾವ ಚಿತ್ರವೂ ಪ್ರೇಕ್ಷಕರಿಗೆ ಬಂದಿದ್ದೂ ಗೊತ್ತಾಗ್ಲಿಲ್ಲ, ಹೋಗಿದ್ದೂ ಗೊತ್ತಾಗ್ಲಿಲ್ಲ.

  ಬಿಗ್ ಬಜೆಟ್ ಚಿತ್ರಗಳಾದ 'ವಿರಾಟ್' ಮತ್ತು 'ಶಿವಲಿಂಗ' ಬಿಡುಗಡೆಗೆ ಕಾದು ಕುಳಿತಿದ್ದ ಹೊಸಬರ ಏಳು ಸಿನಿಮಾಗಳು ಈ ವಾರ ಒಮ್ಮೆಲೆ ರಿಲೀಸ್ ಆಗುತ್ತಿವೆ. ['ಭಲೇ ಜೋಡಿ'ಯ ಜಬರ್ದಸ್ತ್ ಆಟ ನೋಡಲು ನೀವು ರೆಡಿಯಾಗಿ]

  ಕೆಲ ಚಿತ್ರಗಳು ಹೊಸತನದಿಂದ ನಿರೀಕ್ಷೆ ಮೂಡಿಸಿದ್ದರೆ, ಇನ್ನೂ ಕೆಲವು ಚಿತ್ರಗಳ ಪರಿಚಯ ಪ್ರೇಕ್ಷಕರಿಗೆ ಇಲ್ಲವೇ ಇಲ್ಲ. ಹೀಗಾಗಿ, ಈ ಶುಕ್ರವಾರ ತೆರೆಗೆ ಅಪ್ಪಳಿಸಲಿರುವ ಎಲ್ಲಾ ಏಳು ಚಿತ್ರಗಳ ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

  'ಭಲೇ ಜೋಡಿ'

  'ಭಲೇ ಜೋಡಿ'

  ಕಾಮಿಡಿ ಕಿಂಗ್ ಸಾಧು ಕೋಕಿಲ ನಿರ್ದೇಶಿಸಿರುವ 'ಭಲೇ ಜೋಡಿ' ಚಿತ್ರ ಈ ವಾರ ನಿಮ್ಮೆದುರಿಗೆ ಬರಲಿದೆ. ತೆಲುಗಿನ 'ಅಲಾ ಮೊದಲೈಯಿಂದಿ' ಚಿತ್ರದ ರೀಮೇಕ್ ಆಗಿರುವ ಈ ಸಿನಿಮಾದಲ್ಲಿ ಸುಮಂತ್ ಶೈಲೇಂದ್ರ ಮತ್ತು ಶಾನ್ವಿ ಶ್ರೀವಾಸ್ತವ ನಾಯಕ-ನಾಯಕಿ. ಹಾಡೊಂದರಲ್ಲಿ ಮಾತ್ರ ನಟಿ ಹರಿಪ್ರಿಯಾ ಮತ್ತು ಹರ್ಷಿಕಾ ಪೂಣಚ್ಚ ಹೆಜ್ಜೆ ಹಾಕಿದ್ದಾರೆ. [ಭಲೇ ಜೋಡಿ ಚಿತ್ರದ ಫೋಟೋ ಗ್ಯಾಲರಿ]

  'ಆಕ್ಟರ್'

  'ಆಕ್ಟರ್'

  ದಯಾಳ್ ಪದ್ಮನಾಭನ್ ನಿರ್ದೇಶನದ ನವೀನ್ ಕೃಷ್ಣ ಅಭಿನಯಿಸಿರುವ 'ಆಕ್ಟರ್' ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಆಕ್ಟರ್' ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ನಟನೊಬ್ಬನ ಸುತ್ತ ಹೆಣೆದಿರುವ 'ಆಕ್ಟರ್' ಸಿನಿಮಾ ಒಂದೇ ಮನೆಯಲ್ಲಿ ಚಿತ್ರೀಕರಣಗೊಂಡಿರುವುದು ವಿಶೇಷ.

  'ಮಧುರ ಸ್ವಪ್ನ'

  'ಮಧುರ ಸ್ವಪ್ನ'

  ಮನೆ ಮಂದಿಯೆಲ್ಲಾ ಕೂತು ನೋಡಬಹುದಾದ ಸಿನಿಮಾ 'ಮಧುರ ಸ್ವಪ್ನ' ಈ ವಾರ ನಿಮ್ಮ ಮುಂದೆ ಬರಲಿದೆ. ರವಿ ರತ್ನ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ತುಳು ರಂಗಭೂಮಿ ನಾಟಕಗಾರ ದೇವದಾಸ್ ಕಾಪಿಕಾಡ್ ಅವರ ಪುತ್ರ ಅರ್ಜುನ್ ನಾಯಕನಾಗಿ ಅಭಿನಯಿಸಿದ್ದಾರೆ. ಕೀರ್ತನ ಪೊದ್ವಾಲ್ ಮತ್ತು ಮಹಾಲಕ್ಷ್ಮಿ ಚಿತ್ರದ ನಾಯಕಿಯರು. ಅವಿನಾಶ್, ವಿನಯ ಪ್ರಕಾಶ್ ಹಾಗೂ ಶಾಸಕ ಸೋಮಶೇಖರ್ ತಾರಾಗಣದಲ್ಲಿದ್ದಾರೆ.[ಮಧುರ ಸ್ವಪ್ನ ಚಿತ್ರದ ಫೋಟೋ ಗ್ಯಾಲರಿ]

  'ರಾಜ್ ಬಹದ್ದೂರ್'

  'ರಾಜ್ ಬಹದ್ದೂರ್'

  ದಿಲ್ ಸತ್ಯ ನಿರ್ಮಾಣದ ಅಲ್ವಿನ್ ಅವರ ರಚನೆ ಹಾಗೂ ನಿರ್ದೇಶನದ 'ರಾಜ್ ಬಹದ್ದೂರ್' ಈ ವಾರ ತೆರೆ ಕಾಣುತ್ತಿದೆ. ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಪುತ್ರ ಪುನೀತ್ ಈ ಚಿತ್ರದ ನಾಯಕ. ಶ್ರೀ ಶ್ರುತಿ ಚಿತ್ರದ ನಾಯಕಿ. ಸಾಯಿ ಕುಮಾರ್, ಅನಿತಾ ಭಟ್ ಚಿತ್ರದಲ್ಲಿ ನಟಿಸಿದ್ದಾರೆ.

  'ನನ್ ಲವ್ ಟ್ರ್ಯಾಕ್'

  'ನನ್ ಲವ್ ಟ್ರ್ಯಾಕ್'

  ಕಿರುತೆರೆಯಲ್ಲಿ ಮಿಂಚಿರುವ ರಕ್ಷಿತ್ ಅಭಿನಯದ 'ನನ್ ಲವ್ ಟ್ರ್ಯಾಕ್' ಕೂಡ ಇದೇ ವಾರ ರಿಲೀಸ್ ಆಗುತ್ತಿದೆ. ನಿವೇದಿತಾ (ನಿಧಿ ಕುಶಾಲಪ್ಪ) ಚಿತ್ರದ ನಾಯಕಿ. ಕದಿರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.[ನನ್ ಲವ್ ಟ್ರ್ಯಾಕ್ ಚಿತ್ರದ ಫೋಟೋ ಗ್ಯಾಲರಿ]

  'ಮರೆಯಲಾರೆ'

  'ಮರೆಯಲಾರೆ'

  ಶರತ್ ಖಾದ್ರಿ ನಿರ್ದೇಶನದ 'ಮರೆಯಲಾರೆ' ಈ ವಾರದ ಮತ್ತೊಂದು ಸಿನಿಮಾ.[ಮರೆಯಲಾರೆ ಚಿತ್ರದ ಫೋಟೋ ಗ್ಯಾಲರಿ]

  'ಯು ದಿ ಎಂಡ್ ಎ'

  'ಯು ದಿ ಎಂಡ್ ಎ'

  ಹೊಸಬರೇ ಕೂಡಿ ತಯಾರು ಮಾಡಿರುವ ನಾಗ್ ನಿರ್ದೇಶನದ 'ಯು ದಿ ಎಂಡ್ ಎ' ಚಿತ್ರ ಕೂಡ ಇದೇ ಶುಕ್ರವಾರ ನಿಮ್ಮ ಮುಂದೆ.[ಯು ದಿ ಎಂಡ್ ಎ ಚಿತ್ರದ ಫೋಟೋ ಗ್ಯಾಲರಿ]

  ನಿಮ್ಮ ಆಯ್ಕೆ ಯಾವುದು?

  ನಿಮ್ಮ ಆಯ್ಕೆ ಯಾವುದು?

  ಕನ್ನಡ ಸಿನಿ ಪ್ರೇಮಿಗಳಿಗೆ ಈ ವಾರ ಏಳು ಆಯ್ಕೆಗಳಿವೆ. ಅದರಲ್ಲಿ ನೀವು ನೋಡಲು ಇಚ್ಛಿಸುವ ಕನ್ನಡ ಸಿನಿಮಾ ಯಾವುದು ಅಂತ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ...

  English summary
  Kannada Movies 'Bhale Jodi', 'Actor', 'Raj Bahaddur', 'Mareyalaare', 'U the end A', 'Madhura Swapna' and 'Nan Love Track' are releasing this week (February 19th). Here is the complete report on all the movies. Take a look.
  Wednesday, February 17, 2016, 15:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X