For Quick Alerts
  ALLOW NOTIFICATIONS  
  For Daily Alerts

  ಈ ಶುಕ್ರವಾರ ಆರು ಚಿತ್ರ ರಿಲೀಸ್! ನಿಮ್ಮ ಆಯ್ಕೆ ಯಾವುದು?

  By Harshitha
  |

  ಕಳೆದ ಶುಕ್ರವಾರ ಏಳು ಕನ್ನಡ ಚಲನಚಿತ್ರಗಳು ಕರ್ನಾಟಕದಾದ್ಯಂತ ಬಿಡುಗಡೆ ಆಗಿತ್ತು. ಏಳರಲ್ಲಿ ಮೂರು ಚಿತ್ರಗಳು ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳ ಕೃಪೆಯಿಂದ 'ಫೇಕ್ ಹೌಸ್ ಫುಲ್' ಬೋರ್ಡ್ ತೊಟ್ಟು ಪ್ರೇಕ್ಷಕರನ್ನ ಕಳೆದುಕೊಂಡಿತ್ತು. ಈ ವಾರ ಹಾಗೆ ಆಗಲ್ಲ ಎಂಬ ನಂಬಿಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಿದೆ.

  ಈಗ ವಿಷಯ ಅದಲ್ಲ. ಕಳೆದ ವಾರದಂತೆ ಈ ವಾರ ಕೂಡ ಸಾಲು ಸಾಲು ಸಿನಿಮಾಗಳು ನಿಮ್ಮ ಮುಂದೆ ಬರ್ತಿದೆ. [ಸರ್ಜಾರ ರಹಸ್ಯ 'ಗೇಮ್' ಚಿತ್ರದ ಸ್ಪೆಷಾಲಿಟಿ ಏನು?]

  ಈ ಶುಕ್ರವಾರ, ಅಂದ್ರೆ ನಾಳೆ (ಫೆಬ್ರವರಿ 26) ಒಟ್ಟು ಆರು ಚಿತ್ರಗಳು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಆ ಎಲ್ಲಾ ಆರು ಚಿತ್ರಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ....

  ಗೇಮ್

  ಗೇಮ್

  ಎ.ಎಂ.ಆರ್.ರಮೇಶ್ ನಿರ್ದೇಶನದ ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷೆ ಮೂಡಿಸಿರುವ 'ಗೇಮ್' ಸಿನಿಮಾ ಈ ವಾರ ನಿಮ್ಮ ಮುಂದೆ ಬರುತ್ತಿದೆ. ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಬಾಲಿವುಡ್ ನಟಿ ಮನಿಷಾ ಕೊಯಿರಾಲಾ, ಕಾಲಿವುಡ್ ನಟ ಶ್ಯಾಮ್ ನಟಿಸಿರುವ 'ಗೇಮ್' ಚಿತ್ರ ನೈಜ ಘಟನೆ ಆಧಾರಿತ ಚಿತ್ರ ಎಂದು ಹೇಳಲಾಗಿದೆ. ಒಂದು ಮರ್ಡರ್ ಸುತ್ತ ನಡೆಯುವ ಹಾವು ಏಣಿ ಆಟ ಈ 'ಗೇಮ್'. [ಅರ್ಜುನ್ ಸರ್ಜಾ, ಮನಿಷಾ 'ಗೇಮ್' ಟ್ರೈಲರ್ ನೋಡಿದ್ರಾ?]

  ಕೃಷ್ಣ-ರುಕ್ಕು

  ಕೃಷ್ಣ-ರುಕ್ಕು

  ಸ್ಯಾಂಡಲ್ ವುಡ್ ನಲ್ಲಿ 'ಕೃಷ್ಣ' ಸೀರೀಸ್ ಸಿನಿಮಾಗಳಿಗೆ ಹೆಸರುವಾಸಿ ಆಗಿರುವ ನಟ ಅಜೇಯ್ ರಾವ್ ಮತ್ತು ಅಮೂಲ್ಯ ಜೋಡಿಯಾಗಿ ನಟಿಸಿರುವ 'ಕೃಷ್ಣ-ರುಕ್ಕು' ಚಿತ್ರ ಕೂಡ ನಾಳೆ ಬಿಡುಗಡೆ ಆಗುತ್ತಿದೆ. ಅಪ್ಪಟ ಲವ್ ಸ್ಟೋರಿ ಆಗಿರುವ ಈ ಚಿತ್ರಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಶೋಭರಾಜ್, ಗಿರಿಜಾ ಲೋಕೇಶ್, ವಿಜಯ್ ಚೆಂಡೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ.['ಕೃಷ್ಣ-ರುಕ್ಕು' ರೋಮ್ಯಾನ್ಸ್ ನೋಡಲು ನೀವು ರೆಡಿನಾ?]

  ಪ್ರೀತಿ ಕಿತಾಬು

  ಪ್ರೀತಿ ಕಿತಾಬು

  ದುನಿಯಾ ರಶ್ಮಿ ಹಾಗೂ ನಿಹಾಲ್ ನಟಿಸಿರುವ 'ಪ್ರೀತಿ ಕಿತಾಬು' ಚಿತ್ರ ನಾಳೆ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ವಿಠಲ್ ಭಟ್. ಹೊಸಬರ ತಂಡವಾಗಿರುವ 'ಪ್ರೀತಿ ಕಿತಾಬು' ಚಿತ್ರದ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದನಿಯಾಗಿರುವುದು ವಿಶೇಷ.['ಪ್ರೀತಿ ಕಿತಾಬು' ಪಠಣ ಮಾಡಿದ ಪವರ್ ಸ್ಟಾರ್]

  ಮರೆಯಲಾರೆ

  ಮರೆಯಲಾರೆ

  ತಾಂಡವ್ ಹಾಗೂ ಪವಿತ್ರ ಬೆಳ್ಳಿಯಪ್ಪ ನಟಿಸಿರುವ ಶರತ್ ಖಾದ್ರಿ ನಿರ್ದೇಶನದ 'ಮರೆಯಲಾರೆ' ಚಿತ್ರ ಈ ಶುಕ್ರವಾರ ಬಿಡುಗಡೆ ಆಗುತ್ತಿದೆ.

  ವಾಟ್ಸಪ್ ಲವ್

  ವಾಟ್ಸಪ್ ಲವ್

  ಯುವ ಪ್ರತಿಭೆ ಜೀವಾ ಹಾಗೂ ಐಶ್ವರ್ಯ ಸಿಂಧೋಗಿ ನಟಿಸಿರುವ 'ವಾಟ್ಸಪ್ ಲವ್' ಕೂಡ ಈ ವಾರ ನಿಮ್ಮ ಮುಂದೆ ಬರುತ್ತಿದೆ.

  400

  400

  ಇನ್ನೂ ಅಷ್ಟೇನು ಪಬ್ಲಿಸಿಟಿ ಮಾಡದ ಹೊಸಬರ '400' ಕೂಡ ನಾಳೆ ರಿಲೀಸ್ ಆಗುತ್ತಿದೆ.

  ನಿಮ್ಮ ಆಯ್ಕೆ ಯಾವುದು?

  ನಿಮ್ಮ ಆಯ್ಕೆ ಯಾವುದು?

  'ಗೇಮ್', 'ಕೃಷ್ಣ-ರುಕ್ಕು', 'ಮರೆಯಲಾರೆ', 'ಪ್ರೀತಿ ಕಿತಾಬು', 'ವಾಟ್ಸಪ್ ಲವ್', '400'... ಈ ಆರು ಚಿತ್ರಗಳಲ್ಲಿ ನಿಮ್ಮ ಆಯ್ಕೆ ಯಾವುದು ಅಂತ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ...

  English summary
  Kannada Movies 'Game', 'Krishna Rukku', 'Preethi Kitabu', 'Mareyalaare', 'Whatsup Love' and '400' are releasing this week (February 26th). Here is the complete report on all the movies. Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X