»   » T20 ವರ್ಲ್ಡ್ ಕಪ್; ಮೊದಲು ನನ್ ಸಿನಿಮಾ ಬಿಡುಗಡೆ ಆದ್ರೆ ಸಾಕಪ್ಪಾ!

T20 ವರ್ಲ್ಡ್ ಕಪ್; ಮೊದಲು ನನ್ ಸಿನಿಮಾ ಬಿಡುಗಡೆ ಆದ್ರೆ ಸಾಕಪ್ಪಾ!

Posted By:
Subscribe to Filmibeat Kannada

ಎಂತಹ ಸ್ಟಾರ್ ಸಿನಿಮಾವೇ ಆಗಿರಲಿ. ಅದರ ಮುಂದೆ ಭಾರತ ಕ್ರಿಕೆಟ್ ಪಂದ್ಯ ಆಡುತ್ತಿದೆ ಅಂದ್ರೆ ಎಲ್ಲರ ಮೊದಲ ಆಯ್ಕೆ ಕ್ರಿಕೆಟ್ ಹೊರತು ಸಿನಿಮಾ ಅಲ್ಲ.! ಅದರಲ್ಲೂ ವರ್ಲ್ಡ್ ಕಪ್ ಇದ್ರೆ ಎಲ್ಲೆಲ್ಲೂ ಕ್ರಿಕೆಟ್ ಮಯ!

ಇದೇ ಕಾರಣಕ್ಕೆ ಯಾವ ನಿರ್ಮಾಪಕರೂ ಕ್ರಿಕೆಟ್ ಮುಂದೆ ತೊಡೆ ತಟ್ಟಿ ನಿಲ್ಲುವುದಿಲ್ಲ. ಇನ್ನೊಂದು ವಾರದಲ್ಲಿ ಅಂದ್ರೆ ಮಾರ್ಚ್ 8 ರಿಂದ ಟಿ.20 ವಿಶ್ವಕಪ್ ಪಂದ್ಯಾವಳಿ ಶುರುವಾಗಲಿದೆ. [ಭಾರತ ವರ್ಲ್ಡ್ ಕಪ್ ಫೈನಲ್ ಗೆ ಬಂದ್ರೆ ಎಡವಟ್ಟಾಗುತ್ತೆ]


ಹೇಳಿಕೇಳಿ ಇದು ಟಿ.20 ಮ್ಯಾಚ್. ಫಾಸ್ಟ್ ಫಾರ್ವಡ್ ಆಗಿ ಮ್ಯಾಚ್ ಮುಗಿಯುವುದರಿಂದ ಎಲ್ಲರಿಗೂ ಇದು ಅಚ್ಚುಮೆಚ್ಚು. ಅದರಲ್ಲೂ ವಿಶ್ವಕಪ್ ಆಗಿರುವುದರಿಂದ ಭಾರತದ ಮೂಲೆ ಮೂಲೆಯಲ್ಲೂ ಈ ಸಮಯದಲ್ಲಿ ದೇವಸ್ಥಾನಗಳು ಭರ್ತಿ ಆಗುತ್ತವೆ ಹೊರತು ಚಿತ್ರಮಂದಿರಗಳು ಅಲ್ಲ.! [ಕ್ರಿಕೆಟ್ ಸಮರ ಎದುರಿಸಲು ಸಜ್ಜಾದ ಸಿನಿಮಾರಂಗ]


ಇದೇ ಕಾರಣಕ್ಕೆ ಮಾರ್ಚ್ 8ರೊಳಗೆ 'ನಮ್ಮ ಸಿನಿಮಾ ರಿಲೀಸ್ ಆಗೋದ್ರೆ ಸಾಕಪ್ಪ! ಒಂದೇ ವಾರ ಸಾಕು. ಎಷ್ಟು ಕಲೆಕ್ಷನ್ ಆಗುತ್ತೋ ಆಗಲಿ' ಅಂತ ಕೆಲ ನಿರ್ಮಾಪಕರು ತಮ್ಮ ಚಿತ್ರ ಬಿಡುಗಡೆ ಮಾಡುವುದಕ್ಕೆ ನಾ ಮುಂದು ತಾ ಮುಂದು ಅಂತಿದ್ದಾರೆ. ಮುಂದೆ ಓದಿ.....


ಈ ವಾರ ಆರು ಚಿತ್ರಗಳು ರಿಲೀಸ್!

ಕಳೆದ ಮೂರ್ನಾಲ್ಕು ವಾರಗಳಿಂದ ಒಟ್ಟೊಟ್ಟಿಗೆ ಆರೇಳು ಚಿತ್ರಗಳು ರಿಲೀಸ್ ಆಗುತ್ತಿರುವುದನ್ನ ನೀವೆಲ್ಲಾ ನೋಡಿದ್ದೀರಾ. ಈ ವಾರ ಕೂಡ ಒಟ್ಟಿಗೆ ಒಟ್ಟು ಆರು ಚಿತ್ರಗಳು ಬಿಡುಗಡೆ ಆಗುತ್ತಿವೆ.


ತೆರೆಗೆ ಬರುತ್ತಿದೆ ...ರೆ!

ನಿನ್ನೆಯಷ್ಟೇ ಸೆನ್ಸಾರ್ ಅಂಗಳದಿಂದ U ಸರ್ಟಿಫಿಕೇಟ್ ಪಡೆದಿರುವ ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿರುವ '...ರೆ' ಸಿನಿಮಾ ಇದೇ ವಾರ, ಅಂದ್ರೆ ಮಾರ್ಚ್ 4ನೇ ತಾರೀಖು ರಿಲೀಸ್ ಆಗಲಿದೆ. ರಮೇಶ್ ಅರವಿಂದ್, ಹರ್ಷಿಕಾ ಪೂಣಚ್ಚ, ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿರುವ '...ರೆ' ಚಿತ್ರದ ಬಗ್ಗೆ ಸಿನಿ ಪ್ರಿಯರಲ್ಲಿ ನಿರೀಕ್ಷೆ ಇದೆ.


ಟೈಸನ್

'ಮರಿ ಟೈಗರ್' ವಿನೋದ್ ಪ್ರಭಾಕರ್ ಅಭಿನಯದ 'ಟೈಸನ್' ಚಿತ್ರ ಕೂಡ ಇದೇ ವಾರ ಬಿಡುಗಡೆ ಆಗಲಿದೆ. ವಿನೋದ್ ಪ್ರಭಾಕರ್ ಹಾಗೂ ಗಾಯತ್ರಿ ಅಯ್ಯರ್ ಜೋಡಿಯಾಗಿರುವ 'ಟೈಸನ್' ಚಿತ್ರಕ್ಕೆ ಕೆ.ರಾಮನಾರಾಯಣ್ ನಿರ್ದೇಶಕ.


ದಂಡು

ಡೈಲಾಗ್ ಕಿಂಗ್ ಸಾಯಿ ಕುಮಾರ್ ನಟಿಸಿರುವ 'ದಂಡು' ಚಿತ್ರ ಕೂಡ ಇದೇ ವಾರ ತೆರೆಗೆ ಅಪ್ಪಳಿಸಲಿದೆ.


ಸುಪಾರಿ ಸೂರ್ಯ

ವಿರಾಟ್, ಸಾಧು ಕೋಕಿಲ, ಮಧುರಿಮಾ ಬ್ಯಾನರ್ಜಿ ಮುಖ್ಯ ಭೂಮಿಕೆಯಲ್ಲಿರುವ 'ಸುಪಾರಿ ಸೂರ್ಯ' ಚಿತ್ರ ಕೂಡ ಮಾರ್ಚ್ 4 ರಂದು ತೆರೆಗೆ ಬರಲಿದೆ.


'ತ'

ಹೊಸಬರ ಹೊಸ ಪ್ರಯತ್ನವಾಗಿರುವ 'ತ' ಸಿನಿಮಾ ಕೂಡ ಇದೇ ವಾರ ನಿಮ್ಮ ಮುಂದೆ ಬರಲಿದೆ. 'ತ' ಥ್ರಿಲ್ಲರ್ ಸಿನಿಮಾ. ನಿಮಗೆ ಹಾರರ್ ಕಮ್ ಥ್ರಿಲ್ಲರ್ ಚಿತ್ರಗಳು ಇಷ್ಟವಾಗುವ ಹಾಗಿದ್ರೆ 'ತ' ಚಿತ್ರವನ್ನ ನೋಡಿ...


ಚದುರಿದ ಕಾರ್ಮೋಡ

ಹೊಸಬರ ದಂಡೇ ಇರುವ 'ಚದುರಿದ ಕಾರ್ಮೋಡ' ಕೂಡ ಇದೇ ವಾರ ಬಿಡುಗಡೆ ಆಗುತ್ತಿದೆ.


ಆರರಲ್ಲಿ ನಿಮ್ಮ ಆಯ್ಕೆ?

'...ರೆ', 'ಟೈಸನ್', 'ದಂಡು', 'ಸುಪಾರಿ ಸೂರ್ಯ', 'ತ' ಮತ್ತು 'ಚದುರಿದ ಕಾರ್ಮೋಡ' ಈ ವಾರ ರಿಲೀಸ್ ಆಗ್ತಿದೆ. ಈ ಆರರಲ್ಲಿ ನಿಮ್ಮೆ ಆಯ್ಕೆ ಯಾವುದು? ಅಂತ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....


English summary
Kannada Movies '..Re', 'Tyson', 'Dandu', 'Supari Surya', 'Tha' and 'Chadurida Kaarmoda' are releasing this week (March 4th). Here is the complete report on all the movies. Take a look.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada