For Quick Alerts
  ALLOW NOTIFICATIONS  
  For Daily Alerts

  ಈ ವಾರ ಸ್ಯಾಂಡಲ್‌ವುಡ್‌ನಲ್ಲಿ ಎರಡು ಸಿನಿಮಾ ಬಿಡುಗಡೆ!

  |

  ಲಾಕ್‌ಡೌನ್ ನಂತರ ಕನ್ನಡ ಚಿತ್ರರಂಗ ಚೇತರಿಸಿಕೊಳ್ಳುತ್ತಿದೆ. ವಾರದಿಂದ ವಾರಕ್ಕೆ ಹೊಸ ಸಿನಿಮಾಗಳ ಬಿಡುಗಡೆ ಸಂಖ್ಯೆ ಹೆಚ್ಚಾಗುತ್ತಿದೆ. ಈ ವಾರ ಸ್ಯಾಂಡಲ್‌ವುಡ್ನನಲ್ಲಿ ಎರಡು ಕನ್ನಡ ಸಿನಿಮಾ ತೆರೆಕಾಣುತ್ತಿದೆ.

  ಕಲಾತ್ಮಕ ಚಿತ್ರ ಸಾಧನೆ ಶಿಖರ ಹಾಗೂ ಭರಪೂರ ಮನರಂಜನೆಯ 'ಪುರ್ ಸೋತ್ ರಾಮ' ಸಿನಿಮಾಗಳು ಈ ವಾರ ಚಿತ್ರಮಂದಿರಕ್ಕೆ ಬರ್ತಿದೆ.

  ಡಿಸೆಂಬರ್ 25ಕ್ಕೆ ಭಾರತದಲ್ಲಿ 'ವಂಡರ್ ವುಮನ್ 1984' ಬಿಡುಗಡೆಡಿಸೆಂಬರ್ 25ಕ್ಕೆ ಭಾರತದಲ್ಲಿ 'ವಂಡರ್ ವುಮನ್ 1984' ಬಿಡುಗಡೆ

  ಪುರ್ ಸೋತ್ ರಾಮ ಸಿನಿಮಾ ಬಗ್ಗೆ
  ರವಿಶಂಕರ್ ಗೌಡ, ಶಿವರಾಜ್ ಕೆ ಆರ್ ಪೇಟೆ, ಕುರಿ ಪ್ರತಾಪ್, ಬ್ಯಾಂಕ್ ಜನಾರ್ಧನ್, ರಿತಿಕ್ ಸರು, ಸಹನ, ಮಾನಸ, ಅನುಷ ಪಕಾಲಿ ಸೇರಿದಂತೆ ಬಹುದೊಡ್ಡ ಕಾಮಿಡಿ ಕಲಾವಿದರು ಪುರ್ ಸೋತ್ ರಾಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಮಾನಸದೇವಿ ಪ್ರೊಡಕ್ಷನ್ ಲಾಂಛನದಲ್ಲಿ ಮಾನಸ ಅವರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಪ್ರಭುದೇವ್ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಸರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು ಸುದ್ದೋರಾಯ್ ಸಂಗೀತವಿದೆ.

  Kannada Movies Releasing this week Dec 9, 2020

  ಸಾಧನೆ ಶಿಖರ ಸಿನಿಮಾ ಕುರಿತು
  ಎನ್ ಈರಣ್ಣ ಮಧುಗಿರಿ ನಿರ್ದೇಶನದಲ್ಲಿ ತಯಾರಾಗಿರುವ ಚಿತ್ರ ಸಾಧನೆ ಶಿಖರ. ಬಾಲಕಾರ್ಮಿಕ ಪದ್ದತಿ, ಜೀತದಾಳು ಪದ್ದತಿ ಹಾಗೂ ಮಹಿಳಾ ಶಿಕ್ಷಣದ ಕುರಿತು ಮಹತ್ವದ ಸಂದೇಶ ಸಾರು ಚಿತ್ರ ಇದಾಗಿದೆ.

  Arjun Sarjaಗೆ ಇನ್ನೂ ಮರೆಯಾಗಿಲ್ಲ ಆ ನೋವು | Filmibeat Kannada

  ಬಿರಾದರ್, ಶಂಕನಾದ ಆಂಜಿ, ಸಾಹಿತಿ ದೊಡ್ಡರಂಗೇಗೌಡ, ಅಪೂರ್ವ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬೇಬಿ ಬೈರವಿ, ಪ್ರೀತಮ್ ಬಾಲನಟರಾಗಿ ನಟಿಸಿದ್ದಾರೆ.

  English summary
  Pursotrama and Sadhane Shikara Kannada Movies Releasing this week Dec 9, 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X