For Quick Alerts
  ALLOW NOTIFICATIONS  
  For Daily Alerts

  ಪ್ರಸ್ತುತ ಚಿತ್ರಮಂದಿರದಲ್ಲಿ ಪ್ರದರ್ಶನವಾಗ್ತಿರುವ ಕನ್ನಡ ಸಿನಿಮಾಗಳ ಪಟ್ಟಿ

  |

  ಪರಭಾಷೆ ಚಿತ್ರಗಳ ಹಾವಳಿಯಲ್ಲೂ ಕನ್ನಡ ಸಿನಿಮಾಗಳು ಸದ್ದು ಮಾಡ್ತಿದೆ. ಸ್ಟಾರ್ ನಟರ ಚಿತ್ರಗಳ ಮಧ್ಯೆಯೂ ಹೊಸಬರ ಸಿನಿಮಾಗಳು ರಿಲೀಸ್ ಆಗಿ ಪ್ರದರ್ಶನವಾಗುತ್ತಿದೆ. ಕನ್ನಡ ಸಿನಿಮಾ ನೋಡಲು ಕಾಯುತ್ತಿರುವ ಪ್ರೇಕ್ಷಕರಿಗೆ ಅಗತ್ಯವಾದ ಮಾಹಿತಿ ಇಲ್ಲಿದೆ.

  ಸದ್ಯ ಕರ್ನಾಟಕದಲ್ಲಿ ಪ್ರದರ್ಶನವಾಗುತ್ತಿರುವ ಕನ್ನಡ ಸಿನಿಮಾಗಳು ಯಾವುದು, ಯಾವ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದೆ ಎಂಬುದಕ್ಕೆ ಉತ್ತರ ಇಲ್ಲಿದೆ. ಡಿಸೆಂಬರ್ 27 ರಂದು ತೆರೆಕಂಡಿದ್ದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಹಲವು ಚಿತ್ರಮಂದಿರಗಳಲ್ಲಿ ಶೋ ಕಾಣ್ತಿದೆ. ಯಶಸ್ವಿ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ.

  ಶ್ರೀಮನ್ನಾರಾಯಣನ ಮೇಲೆ ಮುನಿಸಿಕೊಂಡ ಫ್ಯಾನ್ಸ್: ಇದ್ದಕ್ಕಿದ್ದಂತೆ ಪ್ರೋಮೋ ಮಾಯವಾಗಿದ್ದೇಕೆ?ಶ್ರೀಮನ್ನಾರಾಯಣನ ಮೇಲೆ ಮುನಿಸಿಕೊಂಡ ಫ್ಯಾನ್ಸ್: ಇದ್ದಕ್ಕಿದ್ದಂತೆ ಪ್ರೋಮೋ ಮಾಯವಾಗಿದ್ದೇಕೆ?

  ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ನಟಿಸಿರುವ 'ಶ್ರೀ ಭರತ ಬಾಹುಬಲಿ' ಸಿನಿಮಾ ಕಳೆದ ವಾರ ಬಿಡುಗಡೆಯಾಗಿತ್ತು. ಈ ಚಿತ್ರವೂ ಹಲವು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣ್ತಿದೆ.

  ಪಿ ಶೇಷಾದ್ರಿ ನಿರ್ದೇಶನದ 'ಮೂಕಜ್ಜಿಯ ಕನಸುಗಳು' ಚಿತ್ರ ಬೆಂಗಳೂರಿನ ಗೋಪಾಲನ್ ಮಾಲ್ ನಲ್ಲಿ ಒಂದು ಶೋ ಇದೆ. ಕಳೆದ ಬಿಡುಗಡೆಯಾಗಿದ್ದ 'ಜನ್ ಧನ್' ಸಿನಿಮಾವೂ ಕೆಲವು ಚಿತ್ರಮಂದಿರದಲ್ಲಿ ಶೋ ಕಾಣ್ತಿದೆ.

  ಜಿಲ್ಕ ಚಿತ್ರಕ್ಕಾಗಿ ಕವೀಶ್ ಶೆಟ್ಟಿ ಸಾಹಸ: ಚಿತ್ರರಂಗದಲ್ಲೇ ಇಂತಹ ಪ್ರಯತ್ನ ಮೊದಲ ಸಲ!ಜಿಲ್ಕ ಚಿತ್ರಕ್ಕಾಗಿ ಕವೀಶ್ ಶೆಟ್ಟಿ ಸಾಹಸ: ಚಿತ್ರರಂಗದಲ್ಲೇ ಇಂತಹ ಪ್ರಯತ್ನ ಮೊದಲ ಸಲ!

  ಜಗ್ಗೇಶ್, ಮೇಘನಾ ಗಾಂವ್ಕರ್ ನಟಿಸಿದ್ದ 'ಕಾಳಿದಾಸ ಕನ್ನಡ ಮೇಷ್ಟ್ರು' ಸಿನಿಮಾ ರಾಜ್ ಕುಮಾರ್ ರಸ್ತೆಯಲ್ಲಿರುವ ಒರೆಯಾನ್ ಮಾಲ್ ನಲ್ಲಿ ಒಂದು ಶೋ ಇದೆ. ಇನ್ನು ಕಳೆದ ವಾರ ರಿಲೀಸ್ ಆಗಿದ್ದ 'ಗುಡುಮನ ಅವಾಂತರ' ಚಿತ್ರವೂ ಒಂದು ಚಿತ್ರಮಂದಿರದಲ್ಲಿದೆ.

  ಸುದೀಪ್ ಮತ್ತು ಸಲ್ಮಾನ್ ನಟಿಸಿರುವ ದಬಾಂಗ್ 3 ಸಿನಿಮಾ ಕನ್ನಡ ವರ್ಷನ್ ಕೆಂಗೇರಿ ಉಪನಗರದ ರಾಬಿನ್ ಚಿತ್ರಮಂದಿರದಲ್ಲಿ ನಾಲ್ಕು ಶೋ ಕಾಣ್ತಿದೆ. ಶ್ರೀಮುರಳಿಯ 'ಭರಾಟೆ' ಸಿನಿಮಾ ಮೆಜಿಸ್ಟಿಕ್ ನ ಸ್ವಪ್ನ ಚಿತ್ರಮಂದಿರದಲ್ಲಿ ಎರಡು ಶೋ ಪ್ರದರ್ಶನ ಕಾಣ್ತಿದೆ.

  ನಟ ಚೇತನ್ ಮದುವೆ ದಿನಾಂಕ ಬಹಿರಂಗ: ಅನಾಥಾಶ್ರಮದಲ್ಲಿ ನಡೆಯಲಿದೆ ವಿವಾಹನಟ ಚೇತನ್ ಮದುವೆ ದಿನಾಂಕ ಬಹಿರಂಗ: ಅನಾಥಾಶ್ರಮದಲ್ಲಿ ನಡೆಯಲಿದೆ ವಿವಾಹ

  ಡಿಸೆಂಬರ್ 6 ರಂದು ತೆರೆಕಂಡಿದ್ದ 'ಅಳಿದು ಉಳಿದವರು' ಸಿನಿಮಾ ಮೆಜಿಸ್ಟಿಕ್ ನ ಸ್ವಪ್ನ ಚಿತ್ರಮಂದಿರದಲ್ಲಿ ಎರಡು ಶೋ ಹೋಗ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಒಡೆಯ' ಸಿನಿಮಾ ಯಶವಂತಪುರದ ಚಿತ್ರಮಂದಿರದಲ್ಲಿ ಎರಡು ಶೋ ಪ್ರದರ್ಶನವಾಗ್ತಿದೆ.

  ಈ ಚಿತ್ರಗಳ ಜೊತೆಗೆ ಮುಂದಿನ ವಾರ ಅಂದ್ರೆ ಜನವರಿ 24 ರಂದು, ಚಿರು ಸರ್ಜಾ ನಟನೆಯ 'ಖಾಕಿ', ಶಿವರಾಜ್ ಕೆ ಆರ್ ಪೇಟೆ ನಟನೆಯ 'ನಾನು ಮತ್ತು ಗುಂಡ', ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರಗಳು ತೆರೆಕಾಣ್ತಿದೆ.

  English summary
  Avane srimannarayan, odeya, Sri Bharatha Baahubali, Mookajjiya Kanasugalu, Jandhan, Kalidasa Kannada Meshtru movies are showing in film theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X