'Youtube'ನಲ್ಲಿ ಪರಭಾಷೆ ಚಿತ್ರಗಳಿಗೆ ಸೆಡ್ಡು ಹೊಡೆದು ನಿಂತ ಸ್ಯಾಂಡಲ್ ವುಡ್

By Naveen

ಕನ್ನಡ ಚಿತ್ರರಂಗದಲ್ಲಿ ಈಗ ನಿಜಕ್ಕೂ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಪ್ರಯೋಗಾತ್ಮಕ ಕಥೆಗಳ ಜೊತೆ ಗುಣಮಟ್ಟದ ಚಿತ್ರಗಳು ತಯಾರಾಗುತ್ತಿದೆ. ಅದರಲ್ಲೂ, ಪರಭಾಷೆ ಚಿತ್ರಗಳಿಗೆ ಸೆಡ್ಡು ಹೊಡೆಯುವಂತಹ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಸಿದ್ದವಾಗುತ್ತಿರುವುದು ಖುಷಿಯ ವಿಚಾರ.

ಸಾಮಾನ್ಯವಾಗಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಚಿತ್ರಗಳಿಗಿಂತ ಬೇರೆ ಭಾಷೆಯ ಚಿತ್ರಗಳೇ ಟ್ರೆಂಡಿಂಗ್ ನಲ್ಲಿರುತ್ತೆ. ಆದ್ರೆ, ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕನ್ನಡ ಸಿನಿಮಾಗಳ ಕ್ರೇಜ್ ದೊಡ್ಡದಾಗಿದೆ.

ಸದ್ಯ, ಕನ್ನಡ ಸಿನಿಮಾಗಳ ಹಾಡು, ಟೀಸರ್, ಟ್ರೇಲರ್ ಗಳು ಈಗ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿರುವುದು ಇದಕ್ಕೆ ಸಾಕ್ಷಿ. ಮುಂದೆ ಓದಿ...

ಸುದೀಪ್ ಟೀಸರ್

ಸುದೀಪ್ ಟೀಸರ್

'ರಾಜು ಕನ್ನಡ ಮೀಡಿಯಂ' ಚಿತ್ರದ ಸುದೀಪ್ ಟೀಸರ್ ಬಿಡುಗಡೆಯಾದ 8 ದಿನಗಳಲ್ಲಿ ಯ್ಯೂಟ್ಯೂಬ್ ನಲ್ಲಿ 1 ಮಿಲಿಯನ್ ಹಿಟ್ಸ್ ಪಡೆದಿತ್ತು. ಈ ಮೂಲಕ ಅತಿ ಹೆಚ್ಚು ವೀಕ್ಷಿಸಿದ ಕನ್ನಡದ ಸಿನಿಮಾಗಳ ಟೀಸರ್ ಗಳ ಸಾಲಿಗೆ ಈ ಟೀಸರ್ ಕೂಡ ಸೇರಿಕೊಂಡಿದೆ.

'ತಾರಕ್' ಟೀಸರ್

'ತಾರಕ್' ಟೀಸರ್

ದರ್ಶನ್ ಅವರ 'ತಾರಕ್' ಚಿತ್ರದ ಟೀಸರ್ ನ ಸದ್ಯ ಎಂಟುವರೆ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಆರಂಭದಲ್ಲಿ ನಂಬರ್ 1 ಸ್ಥಾನದಲ್ಲಿದ್ದ ತಾರಕ್ ಟೀಸರ್ ಈಗ 13 ನೇ ಸ್ಥಾನದಲ್ಲಿದೆ.

ದರ್ಶನ್ v/s ಜೂನಿಯರ್ ಎನ್ ಟಿ ಆರ್

ದರ್ಶನ್ v/s ಜೂನಿಯರ್ ಎನ್ ಟಿ ಆರ್

'ತಾರಕ್' ಚಿತ್ರದ ಟೀಸರ್ ಜೊತೆಗೆ ತೆಲುಗಿನ 'ಜೈ ಲವ ಕುಶ' ಚಿತ್ರದ ಟೀಸರ್ ಕೂಡ ಬಿಡುಗಡೆಯಾಗಿತ್ತು. ಎರಡು ಚಿತ್ರಗಳಿಗೆ ಯ್ಯೂಟ್ಯೂಬ್ ನಲ್ಲಿ ಪೈಪೋಟಿ ಜೋರಾಗಿತ್ತು. ಕೆಲವೊಮ್ಮೆ ನಂ.1 ಟ್ರೆಂಡಿಂಗ್ ನಲ್ಲಿ ದರ್ಶನ್ ಟೀಸರ್ ಇದ್ರೆ, ಇನ್ನು ಕೆಲವೊಮ್ಮೆ 'ಜೈ ಲವ ಜುಶ' ನಂ.1 ಟ್ರೆಂಡಿಂಗ್ ನಲ್ಲಿತ್ತು.

'ಭರ್ಜರಿ' ಹಾಡು

'ಭರ್ಜರಿ' ಹಾಡು

'ಭರ್ಜರಿ' ಸಿನಿಮಾದ ಟೈಟಲ್ ಹಾಡು ಕೂಡ ಸೆನ್ಸೇಷನ್ ಹುಟ್ಟಿಸಿತ್ತು. ಸದ್ಯ 'ಭರ್ಜರಿ' ಸಿನಿಮಾದ ಟೈಟಲ್ ಹಾಡನ್ನ ಎರಡುವರೆ ಮಿಲಿಯನ್ ಗೂ ಅಧಿಕ ಜನರು ಕಣ್ತುಂಬಿಕೊಂಡಿದ್ದಾರೆ.

ಹಂಬಲ್ ಪೊಲಿಟಿಷಿಯನ್ ನಾಗರಾಜ್

ಹಂಬಲ್ ಪೊಲಿಟಿಷಿಯನ್ ನಾಗರಾಜ್

ಡ್ಯಾನಿಶ್‌ ಸೇಠ್ ಅಭಿನಯದ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಟ್ರೇಲರ್ ಕೂಡ ಯ್ಯೂಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ವಿಡಿಯೋ ಆಗಿತ್ತು. ರಿಲೀಸ್ ಆದ ಎರಡೇ ದಿನದಲ್ಲಿ ಈ ಚಿತ್ರದ ಟ್ರೇಲರ್ 2 ಲಕ್ಷಕ್ಕೂ ಜನರು ನೋಡಿದ್ದಾರೆ.

ಉಳಿದ ಸಿನಿಮಾಗಳು

ಉಳಿದ ಸಿನಿಮಾಗಳು

ಈ ಹಿಂದೆ ಪುನೀತ್ ಅಭಿನಯದ 'ರಾಜಕುಮಾರ' ದರ್ಶನ್ ಅಭಿನಯದ 'ಚಕ್ರವರ್ತಿ' ಮತ್ತು ರಕ್ಷಿತ್ ನಟನೆಯ 'ಕಿರಿಕ್ ಪಾರ್ಟಿ' ಚಿತ್ರಗಳು ಇದೇ ರೀತಿ ಯ್ಯೂಟ್ಯೂಬ್ ನಲ್ಲಿ ದೊಡ್ಡ ಸದ್ದು ಮಾಡಿತ್ತು.

More from Filmibeat

English summary
Kannada movies teasers, songs, trailers are trending in youtube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X