ಅಭಿಮಾನಿಗಳಿಗೆ ನಿರಾಸೆ ಮಾಡಿದ ಬಹು ನಿರೀಕ್ಷೆಯ ಸಿನಿಮಾಗಳು
ಈ ವರ್ಷ ಮುಗಿಯಲು ಒಂದೇ ತಿಂಗಳು ಬಾಕಿ ಇದೆ. 11 ತಿಂಗಳಿನಲ್ಲಿ 170ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆ ಆಗಿವೆ. ಆದರೆ, ಬಹು ನಿರೀಕ್ಷೆಯ ಸ್ಟಾರ್ ಸಿನಿಮಾಗಳು ಕೈ ಕೊಟ್ಟಿವೆ.
'ರಾಬರ್ಟ್', 'ಕೋಟಿಗೊಬ್ಬ 3', 'ರಾಜೇಂದ್ರ ಪೊನ್ನಪ್ಪ', 'ಪೊಗರು', 'ಯುವರತ್ನ', 'ದ್ರೋಣ', ಹಾಗೂ 'ಕೆಜಿಎಫ್ 2' ಸಿನಿಮಾಗಳು ಈ ವರ್ಷ ಬಿಡುಗಡೆ ಆಗುತ್ತದೆ ಎನ್ನುವ ನಿರೀಕ್ಷೆ ಇತ್ತು. ಸ್ಟಾರ್ ನಟರ ಅಭಿಮಾನಿಗಳು ಕಾಯುತ್ತಿದ್ದರು. ಆದರೆ, ಈ ಸಿನಿಮಾಗಳು ಈ ವರ್ಷ ಬಿಡುಗಡೆ ಆಗುತ್ತಿಲ್ಲ.
ಸುದೀಪ್, ದರ್ಶನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಧ್ರುವ ಸರ್ಜಾ ಹೀಗೆ ಅನೇಕ ಸ್ಟಾರ್ ಸಿನಿಮಾಗಳು ಈ ವರ್ಷದಿಂದ ಮುಂದಿನ ವರ್ಷಕ್ಕೆ ಹೋಗಿವೆ. ಈ ವರ್ಷವೇ ಸಿನಿಮಾ ನೋಡಬಹುದು ಎಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಆಗಿದೆ.

'ರಾಬರ್ಟ್' ಹಾಗೂ 'ಕೋಟಿಗೊಬ್ಬ 3'
ದರ್ಶನ್ ಅಭಿನಯದ 'ರಾಬರ್ಟ್' ಹಾಗೂ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಸಿನಿಮಾಗಳು ಈ ವರ್ಷ ಬಿಡುಗಡೆ ಆಗಬಹುದು ಎನ್ನುವ ಊಹೆ ಇತ್ತು. ಆದರೆ, ಈ ಎರಡು ಸಿನಿಮಾಗಳ ಚಿತ್ರೀಕರಣ ತಡ ಆಗಿದೆ. 'ಕೋಟಿಗೊಬ್ಬ 3' ಹಾಗೂ 'ರಾಬರ್ಟ್' ಚಿತ್ರದ ಶೂಟಿಂಗ್ ಇನ್ನು ನಡೆಯುತ್ತಿದೆ. ಹಾಗಾಗಿ ಸಿನಿಮಾ ಈ ವರ್ಷ ಬರಲು ಆಗಲಿಲ್ಲ. ಅಂದಹಾಗೆ, ಸುದೀಪ್ ಹಾಗೂ ದರ್ಶನ್ ಇಬ್ಬರ ಮೂರು ಸಿನಿಮಾಗಳು 2019 ರಲ್ಲಿ ರಿಲೀಸ್ ಆಗಿತ್ತು.

'ಯುವರತ್ನ' ಹಾಗೂ 'ಕೆಜಿಎಫ್ 2'
'ಯುವರತ್ನ' ಹಾಗೂ 'ಕೆಜಿಎಫ್ 2' ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾಗಳು. ಈ ಎರಡೂ ಚಿತ್ರಗಳು ಈ ವರ್ಷ ರಿಲೀಸ್ ಆಗುವ ಸುದ್ದಿ ಇತ್ತು. ಆದರೆ, ಎರಡು ಚಿತ್ರಗಳು ಮುಂದಕ್ಕೆ ಹೋಗಿವೆ. 2020ಗೆ ಈ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲಿದೆ. 'ಯುವರತ್ನ' ಪುನೀತ್ ನಟನೆಯ ಸಿನಿಮಾವಾಗಿದ್ದು, 'ಕೆಜಿಎಫ್ 2' ಯಶ್ ಸಿನಿಮಾ.

'ದ್ರೋಣ' ಹಾಗೂ 'ರಾಜೇಂದ್ರ ಪೊನ್ನಪ್ಪ'
ಶಿವರಾಜ್ ಕುಮಾರ್ ಅಭಿನಯದ 'ದ್ರೋಣ' ಸಿನಿಮಾದ ಟೀಸರ್ ಬಂದು ಮೂರು ತಿಂಗಳ ಕಳೆದಿದೆ. ಆದರೆ, ಸಿನಿಮಾದ ಬಗ್ಗೆ ಯಾವುದೇ ಅಪ್ ಡೇಟ್ ಇಲ್ಲ. ರವಿಚಂದ್ರನ್ ರವರ 'ರಾಜೇಂದ್ರ ಪೊನ್ನಪ್ಪ' ಕೂಡ ಇದೇ ವರ್ಷ ರಿಲೀಸ್ ಆಗುವುದು ಎನ್ನುವ ಲೆಕ್ಕಾಚಾರ ಇತ್ತು. ಆದರೆ, ಈ ಎರಡು ಚಿತ್ರಗಳು ಮುಂದಿನ ವರ್ಷಕ್ಕೆ ಹೋಗಿವೆ. ಈ ವರ್ಷ ರವಿಚಂದ್ರನ್ ಬರೋಬ್ಬರಿ ನಾಲ್ಕು ಚಿತ್ರಗಳಲ್ಲಿ ನಟಿಸಿದ್ದಾರೆ.

ಜನವರಿಯಲ್ಲಿ 'ಪೊಗರು' ಬಿಡುಗಡೆ
'ಪೊಗರು' ಚಿತ್ರ ಆಗ ಬರುತ್ತೆ, ಈಗ ಬರುತ್ತೆ ಎಂದು ಅಭಿಮಾನಿಗಳು ಕಾಯುತ್ತಲೇ ಇದ್ದರು. ಕೊನೆಗೂ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಿದೆ. 2020 ಜನವರಿ 14 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ನಟಿಸಿದ್ದಾರೆ. ನಂದಕಿಶೋರ್ ಈ ಸಿನಿಮಾದ ನಿರ್ದೇಶಕ.


Click it and Unblock the Notifications