'ಒರಟ ಐ ಲವ್ ಯು' ಖ್ಯಾತಿಯ ಸಂಗೀತ ನಿರ್ದೇಶಕ ಶಂಕರ್ ನಿಧನ
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳಿಂದ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಜಿ.ಆರ್.ಶಂಕರ್ ನಿನ್ನೆ ನಿಧನ ಹೊಂದಿದ್ದಾರೆ. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅವರು ನಿನ್ನೆ ಮೃತರಾದರು.
2007ರಲ್ಲಿ ಬಿಡುಗಡೆಯಾದ 'ಒರಟ ಐ ಲವ್ ಯು' ಸಿನಿಮಾದ ಮೂಲಕ ತಮ್ಮ ಚಿತ್ರ ಜೀವನ ಶುರು ಮಾಡಿದ ಶಂಕರ್ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಕಾಶೀನಾಥ್ ಪುತ್ರ ಅಭಿ ನಟನೆಯ 'ಬಾಜಿ', ಶ್ರೀ ಮುರಳಿ ಅಭಿನಯದ 'ಸಿಹಿಗಾಳಿ', ಲೂಸ್ ಮಾದ ಯೋಗೀಶ್ ಅವರ 'ಮಿಸ್ಟರ್ ಪೈಂಟರ್', 'ಚಿರಾಯು' ಹಾಗೂ 'ಮೇಸ್ತ್ರಿ ಸೇರಿದಂತೆ ಹದಿನಾಲ್ಕು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಇವರ ಸಂಗೀತ ನಿರ್ದೇಶನದಲ್ಲಿ ಬಂದ 'ಒರಟ ಐ ಲವ್ ಯು' ಸಿನಿಮಾದ ಹಾಡುಗಳು ಹಿಟ್ ಆಗಿದ್ದವು. ಇದೇ ಚಿತ್ರ ಮುಂದೆ ಒಂದಷ್ಟು ಅವಕಾಶಗಳು ಬರಲು ಸಹಾಯ ಮಾಡಿತ್ತು. 2016ರಲ್ಲಿ ಬಂದ 'ಬರ್ತ್' ಸಿನಿಮಾ ಇವರ ಕೊನೆಯ ಸಿನಿಮಾವಾಗಿದೆ
ನೆಲಮಂಗಲದ ದಾಸನಪುರದ ನಿವಾಸಿಯಾಗಿದ್ದ ಶಂಕರ್ ತಮ್ಮ ಪತ್ನಿ ಹಾಗು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಮೃತದೇಹದ ಅಂತ್ಯ ಸಂಸ್ಕಾರ ಇಂದು ದಾಸನಪುರದಲ್ಲಿ ನಡೆಯಲಿದೆ.


Click it and Unblock the Notifications











