»   » ಆಸ್ಪತ್ರೆಯಿಂದ 'ನಾದಬ್ರಹ್ಮ' ಹಂಸಲೇಖ ಡಿಸ್ಚಾರ್ಜ್

ಆಸ್ಪತ್ರೆಯಿಂದ 'ನಾದಬ್ರಹ್ಮ' ಹಂಸಲೇಖ ಡಿಸ್ಚಾರ್ಜ್

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಸಂಗೀತಕ್ಕೆ ಹೊಸ ಭಾಷ್ಯ ಬರೆದ ಸಂಗೀತ ನಿರ್ದೇಶಕ ಹಂಸಲೇಖ ಅವರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡುಬಂದಿದೆ. ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಿಂದ ಅವರನ್ನ ನಿನ್ನೆ ಸಂಜೆ ಡಿಸ್ಚಾರ್ಜ್ ಮಾಡಲಾಗಿದೆ.

hamsalekha

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹಂಸಲೇಖ, ಕಳೆದ ಬುಧವಾರ ರಾತ್ರಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣ ಅವರನ್ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. [ನಾದಬ್ರಹ್ಮ ಹಂಸಲೇಖ ಆರೋಗ್ಯದಲ್ಲಿ ಚೇತರಿಕೆ]

ಹಂಸಲೇಖ ಅವರಿಗೆ ಆಂಜಿಯೋಪ್ಲಾಸ್ಟಿ ಕೂಡ ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಹಂಸಲೇಖ ಇದೀಗ ಗುಣ ಮುಖರಾಗಿದ್ದಾರೆ. ಕೆಲ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ.

ಹಂಸಲೇಖ ಆರೋಗ್ಯವಾಗಿದ್ದಾರೆ ಅಂತ ಕುಟುಂಬದ ಮೂಲಗಳು ತಿಳಿಸಿವೆ.

English summary
Kannada Music Director Hamsalekha, who had suffered from a mild heart attack gets discharged from Fortis Hospital, Bengaluru on Saturday (Aug 15th). After Angioplasty Hamsalekha's health condition is better, says family sources.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada