For Quick Alerts
  ALLOW NOTIFICATIONS  
  For Daily Alerts

  ''ಪೈಲ್ವಾನ್' ಸುದೀಪ್ ಗೆ ಅವಮಾನ ಮಾಡೋ ಸಿನಿಮಾ'' - ಸಂಗೀತ ನಿರ್ದೇಶಕ ಹೇಳಿಕೆ

  |
  ಸುದೀಪ್ ಪೈಲ್ವಾನ್ ಗೆ ಬೈದ ಸಂಗೀತ ನಿರ್ದೇಶಕ..? | Pailwaan | FILMIBEAT KANNADA

  'ಪೈಲ್ವಾನ್' ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತದೆ. ಸಿನಿಮಾ ಬಿಡುಗಡೆಯಾಗಿ ಎರಡು ದಿನಗಳು ಕಳೆದಿದ್ದು, ಹೌಸ್ ಫುಲ್ ಪ್ರದರ್ಶನಗಳು ಮುಂದುವರೆದಿದೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರು 'ಪೈಲ್ವಾನ್' ಅಬ್ಬರ ಇದೆ.

  ಸಿನಿಮಾ ನೋಡಿ ಬಂದ ಪ್ರೇಕ್ಷಕರು ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದು ಸಾಮಾನ್ಯ. ಕನ್ನಡ ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ಕೂಡ 'ಪೈಲ್ವಾನ್' ಸಿನಿಮಾ ನೋಡಿ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ''ಈ ಸಿನಿಮಾ ಸುದೀಪ್ ರಿಗೆ ಅವಮಾನ ಮಾಡುವ ಸಿನಿಮಾ'' ಎಂದು ಹೇಳಿದ್ದಾರೆ.

  ಕೆಜಿಎಫ್, ಕುರುಕ್ಷೇತ್ರದ 'ಫಸ್ಟ್ ಡೇ' ಕಲೆಕ್ಷನ್ ದಾಖಲೆ ಮುರಿತಾ ಪೈಲ್ವಾನ್?ಕೆಜಿಎಫ್, ಕುರುಕ್ಷೇತ್ರದ 'ಫಸ್ಟ್ ಡೇ' ಕಲೆಕ್ಷನ್ ದಾಖಲೆ ಮುರಿತಾ ಪೈಲ್ವಾನ್?

  ಸಂಗೀತ ನಿರ್ದೇಶಕ ಕಿರಣ್ ತೋಟಂಬೈಲ್ ರಿಗೆ ನಿಜವಾಗಿಯೂ ಸಿನಿಮಾ ಹೀಗನಿಸಿತೋ, ಅಥವಾ ಎಲ್ಲರ ಗಮನ ಸೆಳೆಯಲು ಈ ರೀತಿಯ ಫೇಸ್ ಬುಕ್ ಸ್ಟೇಟಸ್ ಹಾಕಿದರೋ ಗೊತ್ತಿಲ್ಲ. ಆದರೆ, ಈ ಸಂಗೀತ ನಿರ್ದೇಶಕ ಹಾಕಿರುವ ಸ್ಟೇಟಸ್ ಸುದೀಪ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅಭಿಮಾನಿಯೊಬ್ಬ ಕಿರಣ್ ಗೆ ಕ್ಲಾಸ್ ತೆಗೆದುಕೊಂಡಿದ್ದಾನೆ.

  ಕಿರಣ್ ತೋಟಂಬೈಲ್ ಹೇಳಿದ್ದು ಏನು?

  ಕಿರಣ್ ತೋಟಂಬೈಲ್ ಹೇಳಿದ್ದು ಏನು?

  'ಪೈಲ್ವಾನ್' ಸಿನಿಮಾ ನೋಡಿದ ಕಿರಣ್ ತೋಟಂಬೈಲ್ ಫೇಸ್ ಬುಕ್ ನಲ್ಲಿ ಬೈದಿದ್ದಾರೆ. ''ಪೈಲ್ವಾನ್ ನೋಡಿ ಶಾಕ್ ಆಗಿದ್ದೀವಿ. ಕೃಷ್ಣ ಅವರೇ ಯಾಕೆ ಇಂತಹ ಸಿನಿಮಾ ಮಾಡಿ ಸುದೀಪ್ ನ ಅವಮಾನ ಮಾಡಿತ್ತೀರಿ'' ಎಂದು ನಿರ್ದೇಶಕ ಕೃಷ್ಣ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

  ಪೈಲ್ವಾನ್ ಗಳಿಕೆಗೆ ಬ್ರೇಕ್ ಹಾಕಿದ ಕಿರಾತಕರು: ಲೆಕ್ಕಾಚಾರ ಎಲ್ಲವೂ ಉಲ್ಟಾಪಲ್ಟಾಪೈಲ್ವಾನ್ ಗಳಿಕೆಗೆ ಬ್ರೇಕ್ ಹಾಕಿದ ಕಿರಾತಕರು: ಲೆಕ್ಕಾಚಾರ ಎಲ್ಲವೂ ಉಲ್ಟಾಪಲ್ಟಾ

  ತನ್ನ ಸಿನಿಮಾಗೆ ತಾನೇ ಬೈದ ಕಿರಣ್

  ತನ್ನ ಸಿನಿಮಾಗೆ ತಾನೇ ಬೈದ ಕಿರಣ್

  ಉಪೇಂದ್ರ ನಟನೆಯ, ಆರ್ ಚಂದ್ರು ನಿರ್ದೇಶನದ 'ಐ ಲವ್ ಯೂ' ಸಿನಿಮಾ ಕೆಲ ತಿಂಗಳಗಳ ಹಿಂದೆ ಬಿಡುಗಡೆಯಾಗಿತ್ತು. ಈ ಸಿನಿಮಾಗೆ ಕಿರಣ್ ತೋಟಂಬೈಲ್ ಸಂಗೀತ ನೀಡಿದ್ದರು. 'ಪೈಲ್ವಾನ್' ಗೆ ತೆಗಳುವುದರ ಜೊತೆಗೆ ತನ್ನ ಸಿನಿಮಾಗೆ ತಾವೇ ಡಬ್ಬಾ ಸಿನಿಮಾ ಎಂದು ಕಿರಣ್ ಹೇಳಿದ್ದಾರೆ. 'ಐ ಲವ್ ಯೂ' ವೈಯಕ್ತಿಕವಾಗಿ ನನಗೆ ಇಷ್ಟ ಇಲ್ಲ ಎಂದಿದ್ದಾರೆ.

  'ಪೈಲ್ವಾನ್' ನೋಡಿ ವಿಮರ್ಶಕರು ಏನ್ ಹೇಳಿದ್ರು?, ಎಷ್ಟು ಸ್ಟಾರ್ ಕೊಟ್ರು?'ಪೈಲ್ವಾನ್' ನೋಡಿ ವಿಮರ್ಶಕರು ಏನ್ ಹೇಳಿದ್ರು?, ಎಷ್ಟು ಸ್ಟಾರ್ ಕೊಟ್ರು?

  ಕ್ಲಾಸ್ ತೆಗೆದುಕೊಂಡ ಸುದೀಪ್ ಅಭಿಮಾನಿ

  ಕ್ಲಾಸ್ ತೆಗೆದುಕೊಂಡ ಸುದೀಪ್ ಅಭಿಮಾನಿ

  'ಪೈಲ್ವಾನ್' ಬಗ್ಗೆ ಕಿರಣ್ ಹಾಕಿದ್ದ ಸ್ಟೇಟಸ್ ಗೆ ಸುದೀಪ್ ಅಭಿಮಾನಿಯೊಬ್ಬ ಕಮೆಂಟ್ ಮಾಡಿದ್ದಾರೆ. ನಿಮ್ಮ 'ಐ ಲವ್ ಯೂ' ಕೆಟ್ಟ ಸಿನಿಮಾ. 'ಪೈಲ್ವಾನ್' ಸಿನಿಮಾ ಬಗ್ಗೆ ಮಾತಾಡೋಕ್ಕೆ ಯೋಗ್ಯತೆ ಬೇಕು. 'ಐ ಲವ್ ಯೂ' ಹಾಡುಗಳು ಕೂಡ ಉಪ್ಪಿ ಅವರ ರೇಂಜ್ ಗೆ ಇರಲಿಲ್ಲ. ಎಲ್ಲ ಫ್ಲಾಪ್ ಸಾಂಗ್ಸ್.'' ಎಂದು ತಿರುಗೇಟು ನೀಡಿದ್ದಾನೆ.

  ಬಾಯಿ ಮುಚ್ಚಿಕೊಂಡ ಕಿರಣ್

  ಬಾಯಿ ಮುಚ್ಚಿಕೊಂಡ ಕಿರಣ್

  ವಾದ ವಿವಾದದ ನಂತರ ಕಿರಣ್ ತೋಟಂಬೈಲ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದ 'ಪೈಲ್ವಾನ್' ಸ್ಟೇಟಸ್ ಅನ್ನು ಡಿಲೀಟ್ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡದೆ ಬಾಯಿ ಮುಚ್ಚಿಕೊಂಡಿದ್ದಾರೆ. ಕಿರಣ್ ಒಂದೇ ಒಂದು ಸಿನಿಮಾಗೆ ಸಂಗೀತ ನೀಡಿದ್ದಾರೆ. ಆ ಚಿತ್ರದ ಒಂದು ಹಾಡು ಮಾತ್ರ ಜನರಿಗೆ ತಲುಪಿದೆ. ಹೀಗಿರುವಾಗ, 'ಪೈಲ್ವಾನ್' ಅಂತ ದೊಡ್ಡ ಪ್ರಯತ್ನದ ಬಗ್ಗೆ ಕಿರಣ್ ಮಾತನಾಡುವುದು ಸರಿಯೇ. ತನ್ನನ್ನು ತಾನು ಸಾಬೀತು ಮಾಡಿಕೊಳ್ಳದೆ ಇರುವ ಒಬ್ಬ ತಂತ್ರಜ್ಞ ಒಬ್ಬ ನಿರ್ದೇಶಕನ ಬಗ್ಗೆ ದೂರುವುದು ತರವೇ.

  Pailwan Review : ಕ್ರೀಡಾ ಹಿನ್ನೆಲೆಯ ಭಾವನಾತ್ಮಕ ಸಿನಿಮಾPailwan Review : ಕ್ರೀಡಾ ಹಿನ್ನೆಲೆಯ ಭಾವನಾತ್ಮಕ ಸಿನಿಮಾ

  English summary
  Kannada music director, 'I Love You' fame Kiran Thotambyle comment on 'Pailwaan' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X