ಹರಿಕೃಷ್ಣ ಬರ್ತ್ ಡೇ : ದರ್ಶನ್ ಸೇರಿದಂತೆ ಅನೇಕರ ಶುಭಾಶಯ ಹೀಗಿವೆ

ಕನ್ನಡದ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಆಗಿರುವ ವಿ ಹರಿಕೃಷ್ಣ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಬರ್ತ್ ಡೇ ಖುಷಿಯಲ್ಲಿ ಇರುವ ಈ ಸ್ವರ ಸಂಪನ್ನನಿಗೆ ಶುಭಾಶಯಗಳು ಹರಿದುಬರುತ್ತಿವೆ.

ನಟ ದರ್ಶನ್ ಬಳಗದಲ್ಲಿ ಗುರುತಿಸಿಕೊಂಡ ಹರಿಕೃಷ್ಣ 'ಜೊತೆ ಜೊತೆಯಲ್ಲಿ' ಸಿನಿಮಾದ ಮೂಲಕ ತಮ್ಮ ಸಂಗೀತ ಯಾತ್ರೆ ಶುರು ಮಾಡಿದರು. ಆ ಬಳಿಕ ಸಾಕಷ್ಟು ಸೂಪರ್ ಹಿಟ್ ಹಾಡುಗಳನ್ನು ನೀಡಿ ಹೊಸ ಟ್ರೆಂಡ್ ಶುರು ಮಾಡಿದರು.

ಈಗಾಗಲೇ, ಹರಿಕೃಷ್ಣ ನೂರಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಎಷ್ಟೋ ನಿರ್ದೇಶಕರ ನೆಚ್ಚಿನ ಮ್ಯೂಸಿಕ್ ಡೈರೆಕ್ಟರ್ ಆಗಿದ್ದಾರೆ.

ಅಂದಹಾಗೆ, ಹರಿಕೃಷ್ಣ ಅವರ ಹುಟ್ಟುಹಬ್ಬದ ದಿನ ನಟ ದರ್ಶನ್ ಹಾಗೂ ಕನ್ನಡದ ಕೆಲ ನಿರ್ದೇಶಕರು ತಮ್ಮ ಶುಭಾಶಯ ತಿಳಿಸಿದ್ದಾರೆ. ಮುಂದೆ ಓದಿ....

ದರ್ಶನ್ ಟ್ವೀಟ್

''14 ವರ್ಷಗಳಿಂದ ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಹಾಡುಗಳನ್ನು ನೀಡುತ್ತಾ ಬಂದಿರುವ ಹರಿಕೃಷ್ಣಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು'' ಎಂದು ದರ್ಶನ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಶುಭಾಶಯ ತಿಳಿಸಿದ್ದಾರೆ. ದರ್ಶನ್ ಅವರ 20ಕ್ಕೂ ಹೆಚ್ಚು ಸಿನಿಮಾಗೆ ಹರಿಕೃಷ್ಣ ಸಂಗೀತ ನೀಡಿದ್ದಾರೆ.

ತರುಣ್ ಸುಧೀರ್ ಶುಭಾಶಯ

ನಿರ್ದೇಶಕ ತರುಣ್ ಸುಧೀರ್ ಕೂಡ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹರಿಕೃಷ್ಣ ಹಾಗೂ 'ರಾಂಬೋ 2' ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ತರುಣ್ ನಿರ್ದೇಶನದ 'ಚೌಕ' ಚಿತ್ರದ 'ಅಲ್ಲಾಡ್ಸು ಅಲ್ಲಾಡ್ಸು..' ಹಾಡಿಗೆ ಹರಿ ಸಂಗೀತವಿದೆ.

ಚೇತನ್ ಕುಮಾರ್ ವಿಶ್

ಚೇತನ್ ಕುಮಾರ್ ವಿಶ್

ನಿರ್ದೇಶಕ ಚೇತನ್ ಕುಮಾರ್ ಸಹ ತಮ್ಮ ಮೆಚ್ಚಿನ ಸಂಗೀತ ನಿರ್ದೇಶಕರಾದ ಹರಿಕೃಷ್ಣ ಅವರಿಗೆ ವಿಶ್ ಮಾಡಿದ್ದಾರೆ. ಚೇತನ್ ನಿರ್ದೇಶನದ 'ಬಹದ್ದೂರ್' ಹಾಗೂ 'ಭರ್ಜರಿ' ಎರಡೂ ಚಿತ್ರಕ್ಕೆ ಹರಿಕೃಷ್ಣ ಅವರೇ ಸಂಗೀತ ನೀಡಿದ್ದಾರೆ.

ಸ್ವರಗಳ ರಾಜಕುಮಾರ ಎಂದ ಸಂತೋಷ್

''ಸ್ವರಗಳ ರಾಜಕುಮಾರನಿಗೆ ಹಾಡುಗಳ ಯಜಮಾನನಿಗೆ ಹುಟ್ಟು ಹಬ್ಬದ ಶುಭಾಶಯಗಳು'' ಎಂದು ಸಂತೋಷ್ ಆನಂದ್ ರಾಮ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 'ರಾಜಕುಮಾರ' ನಂತರ 'ಯುವರತ್ನ' ಸಿನಿಮಾದಲ್ಲಿ ಕೂಡ ಈ ಜೋಡಿ ಒಂದಾಗಿದೆ.

ಹರಿನಾಮ ಜಪಿಸಿದ ರಘು ರಾಮ್

''ಹರಿ ನಾಮವೇ ಚಂದ ,ಹರಿಕೃಷ್ಣನ ಹಾಡುಗಳೇ ಅಂದ, ತನ್ನ ಸ್ವರಗಳ ಗೂಡಿನಿಂದ, ವೈವಿಧ್ಯಮಯ ರಾಗಗಳನ್ನು ತಂದ ,ತಾಯಿ ಶಾರದೆಯ ಮುದ್ದಿನ ಕಂದನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು'' ಎಂದು ನಿರ್ದೇಶಕ ರಘು ರಾಮ್ ತಮ್ಮ ಶುಭಾಶಯ ತಿಳಿಸಿದ್ದಾರೆ.

ಅಭಿಮಾನಿಗಳ ಶುಭ ಹಾರೈಕೆ

ಅಭಿಮಾನಿಗಳ ಶುಭ ಹಾರೈಕೆ

ಇವುಗಳ ಜೊತೆಗೆ ಸ್ಟಾರ್ ನಟರಾದ ದರ್ಶನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸುದೀಪ್, ಯಶ್ ಅಭಿಮಾನಿಗಳು ಸೇರಿದಂತೆ ಸಾಕಷ್ಟು ನಟರ ಫ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಕೃಷ್ಣ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.

More from Filmibeat

English summary
Kannada music director V Harikrishna calibrating his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X