twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಮರೆತರಾ ರಶ್ಮಿಕಾ: 'ಪುಷ್ಪ' ಬಗ್ಗೆ ಅಸಮಾಧಾನ

    |

    ಎರಡು ದಿನಗಳ ಹಿಂದಷ್ಟೆ ಅಲ್ಲು ಅರ್ಜುನ್, ಕನ್ನಡತಿ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿನಿಮಾ ಟ್ರೇಲರ್ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ.

    Recommended Video

    ತೆಲುಗು ಪುಷ್ಪ ಮೇಲಿರೋ ಪ್ರೀತಿ ಕನ್ನಡದ ಮೇಲೆ ಯಾಕಿಲ್ಲ ರಶ್ಮಿಕಾ ಮಂದಣ್ಣ..?

    ಟ್ರೇಲರ್‌ನಲ್ಲಿ ಅಲ್ಲು ಅರ್ಜುನ್ ರಗಡ್ ಸ್ಟೈಲ್, ರಶ್ಮಿಕಾ ಗ್ಲಾಮರಸ್ ಲುಕ್ ಡಾಲಿ ಧನಂಜಯ್ ಕೊನೆಗೆ ಫಹಾದ್ ಫಾಸಿಲ್ ನಟೋರಿಯಸ್ ನಗುವಿನ ದರ್ಶನವಾಗುತ್ತದೆ. ಒಟ್ಟಾರೆ ಸಿನಿಮಾದ ಟ್ರೇಲರ್ ಬಹಳ ಚೆನ್ನಾಗಿದೆ ಆದರೆ ಟ್ರೇಲರ್ ನೋಡಿದ ಕೆಲವು ಕನ್ನಡಿಗರಿಗೆ ರಶ್ಮಿಕಾ ಮಂದಣ್ಣ ಮೇಲೆ ಮತ್ತೆ ಸಿಟ್ಟು ಬಂದಿದೆ.

    ಈಗಾಗಲೇ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾದಿಂದ ಎರಡೂ ಕಾಲು ಆಚೆ ಇಟ್ಟಿದ್ದಾರೆ. ಬೇರೆ ಚಿತ್ರರಂಗದಲ್ಲಿ ಚೆನ್ನಾಗಿ ಹೆಸರು, ಕೀರ್ತಿ ಹಣ ಗಳಿಸುತ್ತಿದ್ದಾರೆ ಒಳ್ಳೆಯದೇ, ಆದರೆ ಅವರಿಗೆ ಮೊದಲ ಅವಕಾಶ ಕೊಟ್ಟ, ಬ್ರೇಕ್ ಕೊಟ್ಟ ತಮ್ಮ ತಾಯ್ನುಡಿ ಕನ್ನಡವನ್ನೇ ಮರೆತುಬಿಟ್ಟರಾ ಎಂಬ ಅನುಮಾನ 'ಪುಷ್ಪ' ಸಿನಿಮಾದ ಕನ್ನಡ ಡಬ್ಬಿಂಗ್ ಟ್ರೇಲರ್‌ ನೋಡಿದವರಿಗೆ ಉದ್ಭವಿಸಿದೆ.

    Kannada Netizen Unhappy With Pushpa Movie Kannada Dubbing Version

    'ಪುಷ್ಪ' ಸಿನಿಮಾ ಮೂಲತಃ ತೆಲುಗುವಿನದ್ದು, ಅದನ್ನು ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಿಗೆ ರೀಮೇಕ್ ಮಾಡಲಾಗುತ್ತಿದೆ. 'ಪುಷ್ಪ' ಸಿನಿಮಾದ ತೆಲುಗು ವರ್ಷನ್‌ನಲ್ಲಿ ರಶ್ಮಿಕಾ ಅವರೇ ಡಬ್ಬಿಂಗ್ ಮಾಡಿ ಧ್ವನಿ ನೀಡಿದ್ದಾರೆ. ಆದರೆ ಸಿನಿಮಾದ ಕನ್ನಡ ವರ್ಷನ್‌ನ ಟ್ರೇಲರ್‌ನಲ್ಲಿ ರಶ್ಮಿಕಾ ಪಾತ್ರಕ್ಕೆ ಬೇರೊಬ್ಬರ ಧ್ವನಿ ಬಳಸಿರುವುದು ಬೇಸರಕ್ಕೆ ಕಾರಣವಾಗಿದೆ.

    ಸಿನಿಮಾದ ಕನ್ನಡ ವರ್ಷನ್‌ಗೆ ಧ್ವನಿ ನೀಡದೇ ಇರುವುದು ರಶ್ಮಿಕಾರ ನಿರ್ಧಾರ ಎಂಬುದು ಖಂಡಿತ ತಪ್ಪು. ನಿರ್ಮಾಪಕ, ನಿರ್ದೇಶಕರು ಬಯಸಿದ್ದನ್ನು ನೀಡುವುದಷ್ಟೆ ರಶ್ಮಿಕಾರ ಕೆಲಸ. ಆದರೆ ಮೂಲ ಭಾಷೆಯ ನಟರಿರುವಾಗ ಅವರ ಭಾಷೆಯ ವರ್ಷನ್‌ಗೆ ಅವರ ಕೈಲೇ ಡಬ್ಬಿಂಗ್ ಮಾಡಿಸಿದರೆ ಉತ್ತಮ. 'ಪುಷ್ಪ' ಸಿನಿಮಾದ ಕನ್ನಡ ಆವೃತ್ತಿಯಲ್ಲಿ ಡಾಲಿ ಧನಂಜಯ್ ಧ್ವನಿಯನ್ನೂ ಬೇರೊಬ್ಬರ ಕೈಲಿ ನೀಡಿಸಿದ್ದಾರೋ ಏನೋ?

    ಸಾಮಾನ್ಯವಾಗಿ ಡಬ್ಬಿಂಗ್ ಸಿನಿಮಾಗಳಲ್ಲಿ ಮೂಲ ಸಿನಿಮಾಕ್ಕಷ್ಟೆ ಆಯಾ ಪಾತ್ರದ ನಟರು ಡಬ್ಬಿಂಗ್ ಮಾಡುತ್ತಾರೆ. ಉಳಿದ ಭಾಷೆಯ ಸಿನಿಮಾಗಳಿಗೆ ಡಬ್ಬಿಂಗ್ ಕಲಾವಿದರಿಂದ ಧ್ವನಿ ಕೊಡಿಸಲಾಗುತ್ತದೆ. ಖರ್ಚು ಉಳಿಸಲು ನಿರ್ಮಾಪಕರು ಮಾಡುವ ಐಡಿಯಾ ಇದು. 'ಪುಷ್ಪ' ಸಿನಿಮಾದಲ್ಲಿಯೂ ಹಾಗೆಯೇ ಆಗಿದೆ. ತೆಲುಗು ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ಡಬ್ಬಿಂಗ್ ಮಾಡಿದ್ದಾರೆ, ಕನ್ನಡ ವರ್ಷನ್‌ಗೆ ಬೇರೊಬ್ಬರಿಂದ ಡಬ್ಬಿಂಗ್ ಮಾಡಿಸಲಾಗಿದೆ.

    'ಪುಷ್ಪ' ಸಿನಿಮಾವು ಡಿಸೆಂಬರ್ 17 ರಂದು ಬಿಡುಗಡೆ ಆಗಲಿದೆ. ಸಿನಿಮಾವು ರಕ್ತ ಚಂದನ ಕುರಿತಾದ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಅಲ್ಲು ಅರ್ಜುನ್ ಎದುರು ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಫಹಾದ್ ಫಾಸಿಲ್, ಹಾಸ್ಯನಟ ಸುನಿಲ್, ಡಾಲಿ ಧನಂಜಯ್ ಇನ್ನೂ ಹಲವು ಪ್ರತಿಭಾವಂತ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ನಿರ್ಮಾಣ ಮೈತ್ರಿ ಮೂವೀಸ್ ಅವರದ್ದು.

    English summary
    Pushpa movie Kannada dubbing version does not have Rashmika Mandanna's voice. She gave her voice in Telugu movie but not for Kannada dubbed version.
    Thursday, December 9, 2021, 9:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X