ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ 'ಡೇವಿಡ್' ಚಿತ್ರಕ್ಕೆ ರಿಲೀಸ್ ಸಮಸ್ಯೆ

'ಡೇವಿಡ್' ಇದು ಕನ್ನಡ ಸಿನಿಮಾ. ಹೆಸರು ಕೇಳಿದಾಕ್ಷಣ ಇದ್ಯಾವುದೊ ಹಾಲಿವುಡ್ ಸಿನಿಮಾನಾ ಅಂತ ಅಂದ್ಕೋಬೇಡಿ. ಹಾಲಿವುಡ್ ಸಿನಿಮಾ ಅಲ್ಲದ್ದಿದ್ರು, ಹಾಲಿವುಡ್ ರೇಂಜ್ ನಲ್ಲಿ ಇರುವ ಸಿನಿಮಾ. ಈಗಾಗಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಸಿನಿಮಾ ಎನ್ನುವುದೇ ಕನ್ನಡಿಗರಿಗೆ ಹೆಮ್ಮೆಯ ವಿಚಾರ.

'ಡೇವಿಡ್' ಯುವ ನಿರ್ದೇಶಕ ಭಾರ್ಗವ್ ಯೋಗಂಭರ್ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ. ಈ ಸಿನಿಮಾ ಈಗಾಗಲೆ ಅಂತರಾಷ್ಟ್ರೀಯಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಜಗತ್ತಿನ ಖ್ಯಾತ ಸಿನಿಮೋತ್ಸವಗಳಲ್ಲಿ ಒಂದಾಗಿರುವ ಕಾನ್ ಚಿತ್ರೋತ್ಸವದ ಪರದೆ ಮೇಲೆ ಕನ್ನಡದ ಡೇವಿಡ್ ಸಿನಿಮಾ ರಾರಾಜಿಸಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ 'ಡೇವಿಡ್' ಸಿನಿಮಾಗೆ ರಿಲೀಸ್ ಸಮಸ್ಯೆ ಎದುರಾಗಿದೆ. ಹೌದು, 'ಡೇವಿಡ್' ಸಿನಿಮಾ ರಿಲೀಸ್ ಗೆ ಚಿತ್ರಮಂದಿರಗಳೆ ಸಿಗುತ್ತಿಲ್ಲವಂತೆ. ಅಲ್ಲದೆ ಸಿನಿಮಾ ವಿತರಣೆ ಮಾಡಲು ವಿತರಕರು ಕೂಡ ಯಾರು ಮುಂದೆ ಬರುತ್ತಿಲ್ಲ ಎಂದು ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ಹೊಸಬರ ಸಿನಿಮಾವೊಂದಕ್ಕೆ ರಿಲೀಸ್ ಸಮಸ್ಯೆ ಎದುರಾಗುವುದು ಸ್ಯಾಂಡಲ್ ವುಡ್ ನಲ್ಲೇನು ಹೊಸದೇನಲ್ಲ. 'ಡೇವಿಡ್' ಹೊಸಬರ ಸಿನಿಮಾವಾದ್ರು ಸಹ ಈಗಾಗಲೆ ದೊಡ್ಡ ಮಟ್ಟಕ್ಕೆ ಹೆಸರು ಮಾಡಿರುವ ಚಿತ್ರ.

Kannada new film David has facing a theatre problm

ಒಂದೆಡೆ ಹೊಸಬರ ಸಿನಿಮಾ ಎನ್ನುವ ಟ್ಯಾಗ್ ಲೈನ್, ಮತ್ತೊಂದೆಡೆ ಗಾಂಧಿನಗರ ಸದ್ಯ ಮಂಕಾಗಿದೆ. ದೊಡ್ಡ ದೊಡ್ಡ ಸಿನಿಮಾಗಳು ಇವತ್ತು ರಿಲೀಸ್ ಮಾಡುತ್ತೇವೆ ನಾಳೆ ರಿಲೀಸ್ ಮಡುತ್ತೇವೆ ಎಂದು ಇನ್ನೂ ದಿನಾಂಕ ಲೆಕ್ಕಹಾಕುವುದ್ರಲ್ಲೆ ಇದೆ. ಇದರಿಂದ ಸಣ್ಣ ಸಿನಿಮಾಗಳನ್ನು ವಿತರಣೆ ಮಾಡಲು ವಿತರಕರು ಭಯಪಡುತ್ತಿದ್ದಾರೆ.

ಸದ್ಯ ಡೇವಿಡ್ ಸಿನಿಮಾ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆದ್ಮೇಲೆ ತೆರೆಗೆ ಬರಲು ಎದುರು ನೋಡುತ್ತಿದೆ. ಅಂದ್ರೆ ಸಮಸ್ಯೆಗಳು ಭಗೆ ಹರಿದು ಎಲ್ಲಾ ಅಂದುಕೊಂಡಂತೆ ಆದ್ರೆ ಚಿತ್ರ ಸೆಪ್ಟಂಬರ್ ಕೊನೆಯಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ತೆರೆಗೆ ತರುವ ತಯಾರಿ ಮಾಡಿಕೊಳ್ಳುತ್ತಿದೆ.

Kannada new film David has facing a theatre problm

ಭಾರ್ಗವ್ ನಿರ್ದೇಶನದ ಚೊಚ್ಚಲ ಚಿತ್ರವೆ ಕಾನ್ ಫೆಸ್ಟಿವಲ್ ಗೆ ಎಂಟ್ರಿ ಕೊಟ್ಟು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಡೇವಿಡ್ ನಲ್ಲಿ ಶ್ರೇಯಸ್ ಚಿಂಗ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವಿನಾಶ್ ಯಳಂದೂರು, ರಾಕೇಶ್ ಅಡಿಗ, ಕಾವ್ಯಾ ಶಾ, ರಮ್ಯಾ ರಮೇಶ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ಒಂದೊಳ್ಳೆ ಸಿನಿಮಾವನ್ನು ಕನ್ನಡ ಚಿತ್ರಪ್ರಿಯರು ಯಾವತ್ತು ಕಡೆಗಣಿಸಿಲ್ಲ. ಹಾಗಾಗಿ ಡೇವಿಡ್ ಸಿನಿಮಾಗೂ ಚಿತ್ರಾಭಿಮಾನಿಗಳ ಸಹಕಾರ ಸಿಗಲಿದೆ ಎನ್ನುವುದು ಚಿತ್ರತಂಡದ ಬಲವಾದ ನಂಬಿಕೆ.

More from Filmibeat

English summary
Kannada new film David has facing a theatre problm. This film world premiered at the Cannes International Film Festival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X