ಚಂದನವನದಲ್ಲಿ ಸದ್ದು ಮಾಡುತ್ತಿದೆ 'ನಂದನವನದೊಳ್' ಸಿನಿಮಾ
'ನಂದನವನದೋಳ್' ಚಂದನವನದಲ್ಲಿ ರಿಲೀಸ್ ಗೆ ಸಿದ್ದವಾಗಿರುವ ಸಿನಿಮಾ. ವಿಭಿನ್ನ ಟೈಟಲ್ ಮೂಲಕ ಚಿತ್ರಾಭಿಮಾನಿಗಳ ಗಮನ ಸೆಳೆದಿರುವ 'ನಂದನವನದೊಳ್' ಸಿನಿಮಾ ಇದೆ ವಾರ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ಅಂದ್ಹಾಗೆ 'ನಂದನವನದೊಳ್' ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ.
ಈ ಚಿತ್ರದಲ್ಲಿ ಕೊಡಗಿನ ಸಂಸ್ಕೃತಿಯನ್ನು ಸುಂದರವಾಗಿ ಚಿತ್ರಿಸಲಾಗಿದೆಯಂತೆ. ಕಾರಣ ಈ ಚಿತ್ರದ ಕಥೆ ಬಹುತೇಕ ಭಾಗ ಕೊಡಗಿನಲ್ಲೆ ನಡೆಯುತ್ತಂತೆ. ಹಾಗಾಗಿ ಕೊಡಗಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಿದೆ ಚಿತ್ರತಂಡ. ಸಸ್ಪನ್ಸ್, ಥ್ರಿಲ್ಲರ್ ಅಂದಕ್ಷಣ ಸಾಕಷ್ಟು ಸಿನಿಮಾಗಳು ಕಣ್ಣಮುಂದೆ ಬರುತ್ತೆ. ಆದ್ರೆ ಈ ಎಲ್ಲಾ ಸಿನಿಮಾಗಳಿಂದ ವಿಭಿನ್ನವಾಗಿದೆ ಎನ್ನುವುದು ಚಿತ್ರತಂಡದ ಮಾತು.
ವೃತ್ತಿಪರ ಕೊಲೆಗಾರನೊಬ್ಬನನ್ನು ಹುಡುಕುವ ಕಥೆ ಇದಾಗಿದೆ. ವಿಶೇಷ ಅಂದ್ರೆ ಕೊಲೆಗಾರನ ಹುಡುಕಲು, ಸಿನಿಮಾದಲ್ಲಿ 'ನಂದನವನದೊಳ್' ಎನ್ನುವ ಕಾದಂಬರಿ ಸಹಾಯ ಮಾಡುತ್ತಂತೆ. ಇದರ ಜೊತೆಗೆ ಹಾಕಿ ಆಟದ ಬಗ್ಗೆಯು ಚಿತ್ರದಲ್ಲಿ ಹೇಳಲಾಗಿದೆಯಂತೆ. ಕೊಲೆ, ಕ್ರೀಡೆ ಮತ್ತು ನಂದವನದೊಳ್ ಕಾದಂಬರಿ ಸುತ್ತ ನಡೆಯುವ ಕಥೆಯೆ ಈ ಸಿನಿಮಾ.

ಚಿತ್ರಕ್ಕೆ ಸಂದೀಪ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದಾರೆ. ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿದಿರುವ ಸಂದೀಪ್ ಸಸ್ಪೆನ್ಸ್, ಥ್ರಿಲ್ಲರ್ ಕತೆಯನ್ನು ಹೊತ್ತು ಚಿತ್ರಾಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಇವರ ಪ್ರಯತ್ನ ನೋಡಿ ಬಂಡವಾಳ ಹೂಡುವ ಮೂಲಕ ಸಾಥ್ ನೀಡಿದ್ದಾರೆ ಶರಣ್ ಪೂಣಚ್ಚ.
ಚಿತ್ರದಲ್ಲಿ ಭರತ್ ರೈ, ಸಂತೋಷ್ ಶೆಟ್ಟಿ, ಆಶಿಕಾ, ಆನಂದ್ ಯದವಾಡ್ ಸೇರಿದಂತೆ ಅನೇಕ ಹೊಸ ಕಲಾವಿದರು ಬಣ್ಣಹಚ್ಚಿದ್ದಾರೆ. ಈಗಾಗಲೆ ಸೆನ್ಸಾರ್ ಬೋರ್ಡ್ ನಿಂದ ಯು ಪ್ರಮಾಣ ಪತ್ರ ಪಡೆದಿರುವ 'ನಂದನವನದೊಳ್' ಇದೆ ತಿಂಗಳು 26ಕ್ಕೆ ತೆರೆಗೆ ಬರುತ್ತಿದೆ. ಹೊಸಬರ ಸಸ್ಪನ್ಸ್, ಥ್ರಿಲ್ಲರ್ ನಂದನವನ ಹೇಗಿದೆ ಎನ್ನುವುದು ಗೊತ್ತಾಗಬೇಕಾದ್ರೆ ಚಿತ್ರಮಂದಿರಕ್ಕೆ ಹೋಗಬೇಕು.


Click it and Unblock the Notifications











