Just In
Don't Miss!
- Automobiles
ಕುಟುಂಬ ನಿರ್ವಹಣೆಗಾಗಿ ಆಟೋ ಚಾಲಕಳಾದ 21 ವರ್ಷದ ಯುವತಿ
- News
ರೈತರ ಹೋರಾಟ ಬೆಂಬಲಿಸಿ ಜ.20ರಂದು ರಾಜ್ ಭವನ ಚಲೋ
- Sports
ಗಬ್ಬಾ ಸ್ಟೇಡಿಯಂನಲ್ಲಿ ಭಾರತೀಯರ ಮನ ಗೆದ್ದ ಬಡ ಕ್ರಿಕೆಟಿಗರ ಕತೆ
- Lifestyle
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Education
NBT Recruitment 2021: 26 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೀಪಾವಳಿ ವಿಶೇಷ: ಆಕರ್ಷಕವಾಗಿದೆ ಸ್ಟಾರ್ ನಟರ ಹೊಸ ಪೋಸ್ಟರ್ ಗಳು
ಗೋಲ್ಡನ್ ಸ್ಟಾರ್ ಗಣೇಶ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ದುನಿಯಾ ವಿಜಯ್ ಅವರ ಹೊಸ ಚಿತ್ರಗಳಿಗಾಗಿ ಕನ್ನಡ ಪ್ರೇಕ್ಷಕರು ಕಾಯ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೇಕಿಂಗ್ ನಿಂದ ಮತ್ತಷ್ಟು ಗಮನ ಸೆಳೆಯುತ್ತಿದ್ದಾರೆ.
ಹೀಗಿರುವಾಗ, ದೀಪಾವಳಿ ಹಬ್ಬದ ಪ್ರಯುಕ್ತ ಈ ಸ್ಟಾರ್ ನಟರ ಚಿತ್ರಗಳು ಆಕರ್ಷಕವಾದ ಹೊಸ ಪೋಸ್ಟರ್ ಗಳನ್ನ ಬಿಡುಗಡೆ ಮಾಡಿ, ಶುಭಕೋರಿದೆ.
ಹಾಗಿದ್ರೆ, ಯಾವ ನಟನ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ ಎಂದು ತಿಳಿಯಲು ಮುಂದೆ ಓದಿ......

ಬೆಳಕಿನ ಹಬ್ಬದಲ್ಲಿ ರಶ್ಮಿಕಾ ಲುಕ್
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಚಮಕ್' ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ರಶ್ಮಿಕಾ ಅವರ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಹುಡುಗರ ದಿಲ್ ಖುಷ್ ಮಾಡಿದೆ.

ಗಣೇಶ್ ಕಿಲ್ಲಿಂಗ್ ಲುಕ್
'ಚಮಕ್' ಚಿತ್ರದಲ್ಲಿ ಗಣೇಶ್ ಅವರ ಸ್ಟೈಲಿಶ್ ಲುಕ್ ರಿಲೀಸ್ ಆಗಿದ್ದು, ದೀಪಾವಳಿ ಹಬ್ಬಕ್ಕೆ ಸಮಸ್ತ ಕನ್ನಡಿಗರಿಗೂ ಗಣೀ ವಿಶ್ ಮಾಡಿದ್ದಾರೆ.
ವಿಷ್ಣು ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ 'ಚಮಕ್' ಗಣೇಶ್.!

'ಜಾನಿ' ಜೊತೆ ಡಿಂಪಲ್
ದುನಿಯಾ ವಿಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸುತ್ತಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಪೋಸ್ಟ್ ಲುಕ್ ರಿಲೀಸ್ ಆಗಿದ್ದು, ಈ ಹೊಸ ಜೋಡಿಯ ಮೇಲೆ ಕಣ್ಣು ಬಿದ್ದಿದೆ.
ಅಂದು ಕೈಬಿಟ್ಟು ಹೋಗಿದ್ದ 'ಜಾನಿ' ಮತ್ತೆ ರಚಿತಾ ರಾಮ್ ತೆಕ್ಕೆಗೆ.!

'ಬೃಹಸ್ಪತಿ' ಆದ ಕ್ರೇಜಿಪುತ್ರ
ಇನ್ನು ರವಿಚಂದ್ರನ್ ಅವರ ಮಗ ಮನೋರಂಜನ್ ಅಭಿನಯಿಸುತ್ತಿರುವ ಎರಡನೇ ಚಿತ್ರದ 'ಬೃಹಸ್ಪತಿ' ಪೋಸ್ಟರ್ ಕೂಡ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ.
ರವಿಚಂದ್ರನ್ ಮಗನ ಸಿನಿಮಾಗೆ ಮತ್ತೆ ಟೈಟಲ್ ಬದಲಾವಣೆ.!

'ಅಂಜನಿಪುತ್ರ'ನ ಖದರ್
ಪುನೀತ್ ರಾಜ್ ಕುಮಾರ್ ಅಭಿನಯದಲ್ಲಿ ಮೂಡಿ ಬರುತ್ತಿರುವ 'ಅಂಜನಿಪುತ್ರ'ದ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ದೀಪಾವಳಿ ಹಬ್ಬಕ್ಕೆ ಶುಭಕೋರಿದೆ.
ಹೊಸ 'ಆಡಿಯೋ ಕಂಪನಿ' ಸ್ಥಾಪಿಸಿದ ಪುನೀತ್ ರಾಜ್ ಕುಮಾರ್

ಶ್ರೀಮುರಳಿ 'ಮಫ್ತಿ'
ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ 'ಮಫ್ತಿ' ಚಿತ್ರದ ಹೊಸ ಪೋಸ್ಟರ್ ಬಹಿರಂಗವಾಗಿದ್ದು, ಸದ್ಯದಲ್ಲೇ ಟ್ರೈಲರ್ ಮತ್ತು ಆಡಿಯೋ ನಿಮ್ಮ ಮುಂದೆ ಬರಲಿದೆ.