ಸಂಕ್ರಾಂತಿಗೆ ಬಂದ ಪೋಸ್ಟರ್ ಗಳಲ್ಲಿ ಯಾವುದು ಸೂಪರ್?

ಪ್ರತಿಯೊಂದು ಹಬ್ಬಗಳ ಸಂಭ್ರಮದಲ್ಲಿ ಚಿತ್ರರಂಗದಿಂದ ಒಂದಷ್ಟು ಉಡುಗೊರೆಗಳು ಅಭಿಮಾನಿಗಳಿಗಾಗಿ ಬರುತ್ತವೆ. ಅದೇ ರೀತಿ ಇಂದು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕನ್ನಡ ಕೆಲ ಸಿನಿಮಾಗಳ ಪೋಸ್ಟರ್ ಗಳು ಬಿಡುಗಡೆಯಾಗಿವೆ.

ನಟ ದರ್ಶನ್, ಸುದೀಪ್, ಗಣೇಶ್, ಪುನೀತ್ ರಾಜ್ ಕುಮಾರ್, ಜಗ್ಗೇಶ್, ಸೃಜನ್ ಲೋಕೇಶ್, ನಟಿ ಹರಿಪ್ರಿಯಾ ಎಲ್ಲರೂ ತಮ್ಮ ಅಭಿಮಾನಿಗಳ ಸಂಭ್ರಮವನ್ನು ಹೆಚ್ಚು ಮಾಡಿದ್ದಾರೆ.

ಗಿಮಿಕ್, ಒಡೆಯ, ನಟ ಸಾರ್ವಭೌಮ, ಬೆಲ್ ಬಾಟಂ, ಸೂಜಿದಾರ, ಎಲ್ಲಿದೆ ಇಲ್ಲಿ ತನಕ, ಕನ್ನಡ್ ಗೊತ್ತಿಲ್ಲ, ಬಜಾರ್, ಪ್ರೀಮಿಯರ್ ಪದ್ಮಿನಿ ಸಿನಿಮಾಗಳ ಹೊಸ ಪೋಸ್ಟರ್ ಗಳು ಇಂದು ಬಿಡುಗಡೆಯಾಗಿವೆ.

ಸಂಕ್ರಾಂತಿ ಹಬ್ಬದ ವಿಶೇಷವಾಗಿ ಇಂದು ಹೊರ ಬಂದ ಕನ್ನಡದ ಹೊಸ ಸಿನಿಮಾ ಹೊಸ ಪೋಸ್ಟರ್ ಗಳ ಝಲಕ್ ಮುಂದಿವೆ...

ಒಡೆಯ

ಒಡೆಯ

ಒಂದು ಕಡೆ 'ಯಜಮಾನ' ಸಿನಿಮಾದ ಹಾಡು ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ. ಮತ್ತೊಂದು ಕಡೆ ದರ್ಶನ್ ಅವರ 'ಒಡೆಯ' ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಈ ಸಿನಿಮಾವನ್ನು ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಎಂ ಡಿ ಶ್ರೀಧರ್ ಸಿನಿಮಾದ ನಿರ್ದೇಶನ ಜವಾಬ್ದಾರಿ ಹೊಂದಿದ್ದಾರೆ. ರಾಘವಿ ಈ ಚಿತ್ರದ ನಾಯಕಿಯಾಗಿದ್ದಾರೆ.

ಗಿಮಿಕ್

ಗಿಮಿಕ್

ಗೋಲ್ಡನ್ ಸ್ಟಾರ್ ಗಣೇಶ್ ಈಗ 'ಗಿಮಿಕ್' ಶುರು ಮಾಡಿದ್ದಾರೆ. 'ಗಿಮಿಕ್' ಸಿನಿಮಾದ ಪೋಸ್ಟರ್ ನಿನ್ನೆ ಬಿಡುಗಡೆಯಾಗಿದೆ. ನಾಗಣ್ಣ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಪೋಸ್ಟರ್ ನ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಶುಭಾಶಯ ತಿಳಿಸಿದ್ದಾರೆ.

ನಟ ಸಾರ್ವಭೌಮ

ನಟ ಸಾರ್ವಭೌಮ

'ನಟ ಸಾರ್ವಭೌಮ'ನಾಗಿರುವ ಪುನೀತ್ ಹಬ್ಬದ ಶುಭಾಶಯವನ್ನು ಹೊಸ ಪೋಸ್ಟರ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿದ್ದು, ಟ್ರೇಲರ್ ಜನವರಿ 25ಕ್ಕೆ ರಿಲೀಸ್ ಆಗಲಿದೆ. ಪುನೀತ್ ರಾಜ್ ಕುಮಾರ್, ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಚಿತ್ರದಲ್ಲಿ ನಟಿಸಿದ್ದಾರೆ. ಪವನ್ ಒಡೆಯರ್ ನಿರ್ದೇಶನ ಹಾಗೂ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ.

ಪ್ರೀಮಿಯರ್ ಪದ್ಮಿನಿ ಹಾಗೂ ಬಜಾರ್

ಪ್ರೀಮಿಯರ್ ಪದ್ಮಿನಿ ಹಾಗೂ ಬಜಾರ್

ನವರಸ ನಾಯಕ ಜಗ್ಗೇಶ್ ಅಭಿನಯದ 'ಪ್ರೀಮಿಯರ್ ಪದ್ಮಿನಿ' ಚಿತ್ರದ ಪೋಸ್ಟರ್ ಸಹ ಇಂದು ಹೊರ ಬಂದಿದೆ. ಸಂಕ್ರಾಂತಿ ಹಬ್ಬಕ್ಕೆ ಸರಿಯಾಗಿ ಜಗ್ಗೇಶ್ ಎತ್ತಿನ ಗಾಡಿ ಓಡಿಸುತ್ತಿರುವ ಚಿತ್ರ ಇದಾಗಿದೆ. ಜೊತೆಗೆ ಸಿಂಪಲ್ ಸುನಿ ನಿರ್ದೇಶನದ 'ಬಜಾರ್' ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಆಗಿದೆ. 'ಬಜಾರ್' ಫೆಬ್ರವರಿ 1ಕ್ಕೆ ಬಿಡುಗಡೆಯಾಗುತ್ತಿದೆ.

ಹರಿಪ್ರಿಯಾ ಸಿನಿಮಾಗಳು

ಹರಿಪ್ರಿಯಾ ಸಿನಿಮಾಗಳು

ನಟಿ ಹರಿಪ್ರಿಯಾ ಈಗ ಐದಾರು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈ ಎಲ್ಲ ಸಿನಿಮಾಗಳು ಪೋಸ್ಟರ್ ಗಳು ಹಬ್ಬದ ವಿಶೇಷವಾಗಿ ಬಂದಿವೆ. ಬೆಲ್ ಬಾಟಂ, ಸೂಜಿದಾರ, ಎಲ್ಲಿದೆ ಇಲ್ಲಿ ತನಕ, ಕನ್ನಡ್ ಗೊತ್ತಿಲ್ಲ ಹರಿಪ್ರಿಯಾ ಅವರ ಮುಂದಿನ ಸಿನಿಮಾಗಳಾಗಿವೆ. ಈ ಎಲ್ಲ ಸಿನಿಮಾಗಳಲ್ಲಿ ಅವರ ಪಾತ್ರ ಒಂದಕ್ಕೊಂದು ವಿಭಿನ್ನವಾಗಿವೆ.

More from Filmibeat

English summary
Kannada new movie posters released on the occasion of makara sankranthi 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X