ಹೊಸ ವರ್ಷಕ್ಕೆ ಬಂದ ಹೊಸ ಹೊಸ ಪೋಸ್ಟರ್ ಗಳಲ್ಲಿ ಯಾವುದು ಬೆಸ್ಟ್?

ಈ ವರ್ಷದ ಮೊದಲ ದಿನ ಸಿನಿ ಪ್ರಿಯರಿಗೆ ಅನೇಕ ಉಡುಗೊರೆಗಳು ಸಿಕ್ಕಿವೆ. ಬಹುತೇಕ ಸ್ಟಾರ್ ಗಳ ಸಿನಿಮಾಗಳ ಪೋಸ್ಟರ್ ಗಳು ಹೊಸ ವರ್ಷದ ವಿಶೇಷವಾಗಿ ಬಿಡುಗಡೆಯಾಗಿವೆ. ಈ ಮೂಲಕ ಅಭಿಮಾನಿಗಳಿಗೆ ಚಿತ್ರತಂಡಗಳು ಶುಭಾಶಯ ತಿಳಿಸಿವೆ.

ನಟ ಸಾರ್ವಭೌಮ, ಯಜಮಾನ, ಭರಾಟೆ, ಬೆಲ್ ಬಾಟಂ, 777 ಚಾರ್ಲಿ, ಪಂಚತಂತ್ರ, ಡಾಟರ್ ಆಫ್ ಪಾರ್ವತಮ್ಮ, ಕಪಟ ನಾಟಕ ಪಾತ್ರಧಾರಿ, ಅಮರ್, ಸೀತಾ ರಾಮ ಕಲ್ಯಾಣ, ಗೀತಾ ಹೀಗೆ ಸಾಕಷ್ಟು ಸಿನಿಮಾದ ಹೊಸ ಹೊಸ ಪೋಸ್ಟರ್ ಗಳು ಗಮನ ಸೆಳೆಯುತ್ತಿವೆ.

ಅಂದಹಾಗೆ, ಇಂದು ಹೊಸ ವರ್ಷದ ವಿಶೇಷವಾಗಿ ಬಿಡುಗಡೆಯಾಗಿರುವ ಕನ್ನಡದ ಹೊಸ ಸಿನಿಮಾಗಳ ಹೊಸ ಪೋಸ್ಟರ್ ಗಳ ಝಲಕ್ ಮುಂದಿವೆ...

ನಟ ಸಾರ್ವಭೌಮ

ನಟ ಸಾರ್ವಭೌಮ

'ನಟ ಸಾರ್ವಭೌಮ' ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಇದರ ಮೂಲಕ ಆಡಿಯೋ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಚಿತ್ರದ ಹಾಡುಗಳು ಹುಬ್ಬಳ್ಳಿಯಲ್ಲಿ ಜನವರಿ 5 ರಂದು ಬಿಡುಗಡೆ ಆಗಲಿದೆ. ಪುನೀತ್ ರಾಜ್ ಕುಮಾರ್, ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಪವನ್ ಒಡೆಯರ್ ನಿರ್ದೇಶನ ಹಾಗೂ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ.

ಯಜಮಾನ

ಯಜಮಾನ

ಇಂದು 'ಯಜಮಾನ' ಸಿನಿಮಾದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ. ಇಲ್ಲಿ ದರ್ಶನ್ ಖಡಕ್ ಲುಕ್ ನೀಡಿದ್ದಾರೆ. ಈ ಮೂಲಕ ಹೊಸ ವರ್ಷಕ್ಕೆ ಡಿ ಬಾಸ್ ಫ್ಯಾನ್ಸ್ ಗೆ ವಿಶ್ ಮಾಡಿದ್ದಾರೆ. ಹರಿಕೃಷ್ಣ ಹಾಗೂ ಪಿ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಶೈಲಜಾ ನಾಗ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಭರಾಟೆ

ಭರಾಟೆ

ನಟ ಶ್ರೀ ಮುರಳಿ ನಟನೆಯ 'ಭರಾಟೆ' ಈಗಾಗಲೇ ತುಂಬ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದ ಪೋಸ್ಟರ್ ಸಹ ಇಂದು ಬಿಡುಗಡೆಯಾಗಿದೆ. ಪಂಚೆ ಹಾಕಿ ದೇಸಿ ದೊರೆಯಾಗಿ ಶ್ರೀಮುರಳಿ ಕಾಣಿಸಿಕೊಂಡಿದ್ದಾರೆ. ಬಹದ್ದೂರ್ ಚೇತನ್ ಈ ಚಿತ್ರದ ನಿರ್ದೇಶನ ಮಾಡಿದ್ದು, ಶ್ರೀಲೀಲಾ ಚಿತ್ರದ ನಾಯಕಿಯಾಗಿದ್ದಾರೆ.

ಬೆಲ್ ಬಾಟಂ

ಬೆಲ್ ಬಾಟಂ

'ಬೆಲ್ ಬಾಟಂ' ಸಿನಿಮಾ ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ದೊಡ್ಡ ಪ್ರಶಂಸೆ ಪಡೆದಿದೆ. ಈ ಹಾಡಿನ ಬಳಿಕ ಈ ದಿನ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಈ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ನೂತನ ವರ್ಷದ ಶುಭಾಶಯ ತಿಳಿಸಿದೆ. ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ಸಿನಿಮಾದಲ್ಲಿ ನಟಿಸಿದ್ದು, ಜಯತೀರ್ಥ ನಿರ್ದೇಶನ ಮಾಡಿದ್ದಾರೆ.

777 ಚಾರ್ಲಿ

777 ಚಾರ್ಲಿ

ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ತನ್ನ ವಿಭಿನ್ನತೆಯ ಮೂಲಕ ಪ್ರತಿ ಹಂತದಲ್ಲಿಯೂ ಗಮನ ಸೆಳೆಯುತ್ತಿದೆ. ಬೇರೆ ರೀತಿಯ ಪೋಸ್ಟರ್ ಗಳು ಈಗಾಗಲೇ ಪ್ರೇಕ್ಷಕರ ಮುಂದೆ ಬಂದಿದ್ದು, ಈಗ ಹೊಸ ಪೋಸ್ಟರ್ ಕೂಡ ಇಂಟ್ರೆಸ್ಟಿಂಗ್ ಆಗಿದೆ. ಕಿರಣ್ ರಾಜ್ ಕೆ ರಚನೆ ಮತ್ತು ನಿರ್ದೇಶನ ಸಿನಿಮಾಗಿದೆ.

ಪಂಚತಂತ್ರ

ಪಂಚತಂತ್ರ

ಯೋಗರಾಜ್ ಭಟ್ ಅವರ ಹೊಸ ಸಿನಿಮಾ 'ಪಂಚತಂತ್ರ' ಹಾಡಿನ ಮೂಲಕ ಸಾಕಷ್ಟು ಸದ್ದು ಮಾಡಿದೆ. ಈಗ ಚಿತ್ರದ ಹೊಸ ಪೋಸ್ಟರ್ ಹೊರಬಂದಿದೆ. ಪೋಸ್ಟರ್ ನಲ್ಲಿ ಸಖತ್ ಕೂಲ್ ಲುಕ್ ನಲ್ಲಿ ನಟ ವಿಹಾನ್ ಕಾಣಿಸಿಕೊಂಡಿದ್ದಾರೆ. ಹರಿಕೃಷ್ಣ ಸಂಗೀತ ಸಿನಿಮಾದಲ್ಲಿ ಇರಲಿದೆ.

ಡಾಟರ್ ಆಫ್ ಪಾರ್ವತಮ್ಮ

ಡಾಟರ್ ಆಫ್ ಪಾರ್ವತಮ್ಮ

'ಡಾಟರ್ ಆಫ್ ಪಾರ್ವತಮ್ಮ' ಸಿನಿಮಾ ಸಹ ತನ್ನ ಹೊಸತನದ ಮೂಲಕ ವಿಭಿನ್ನತೆಯನ್ನು ಸಾಬೀತು ಮಾಡುತ್ತಿದೆ. ಈಗ ಕಪ್ಪು ಬಣ್ಣದ ಪೋಸ್ಟರ್ ಕೂಡ ಗಮನ ಸೆಳೆಯುತ್ತಿದೆ. ಹರಿಪ್ರಿಯಾ ಹಾಗೂ ಸುಮಲತಾ ಅಂಬರೀಶ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಂಕರ್ ಜೆ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

ಕಪಟ ನಾಟಕ ಪಾತ್ರಧಾರಿ

ಕಪಟ ನಾಟಕ ಪಾತ್ರಧಾರಿ

'ಹುಲಿರಾಯ' ಸಿನಿಮಾದ ನಂತರ ಮತ್ತೆ ನಟ ಬಾಲು ನಾಗೇಂದ್ರ ಬಂದಿದ್ದಾರೆ. ಅವರ 'ಕಪಟ ನಾಟಕ ಪಾತ್ರಧಾರಿ' ಸಿನಿಮಾದ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ. ಆಟೋ ಡ್ರೈವರ್ ಆಗಿ ಬಾಲು ಪೋಸ್ ಕೊಟ್ಟಿದ್ದಾರೆ. ಕ್ರಿಷ್ ಈ ಚಿತ್ರದ ನಿರ್ದೇಶನ ಮಾಡಿದ್ದು, ವೇಣು ಹಸ್ರಾಲಿ ಮತ್ತು ಕಿರಣ್ ಚಂದ್ರ ಸಂಭಾಷಣೆ ಬರೆದಿದ್ದಾರೆ.

ಅಮರ್

ಅಮರ್

ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟನೆಯ ಚೊಚ್ಚಲ ಸಿನಿಮಾ 'ಅಮರ್' ಚಿತ್ರದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಈ ಚಿತ್ರದ ಒಂದು ಪೋಸ್ಟರ್ ರಿಲೀಸ್ ಮಾಢುವ ಮೂಲಕ ಅಭಿ ಹೊಸ ವರ್ಷಕ್ಕೆ ವಿಶ್ ಮಾಡಿದ್ದಾರೆ. ಪೋಸ್ಟರ್ ಸಖತ್ ರಿಚ್ ಆಗಿದೆ. ನಾಗಶೇಖರ್ ಚಿತ್ರದ ನಿರ್ದೇಶನ ಹಾಗೂ ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ.

ಗೀತಾ

ಗೀತಾ

ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೊಸ ಸಿನಿಮಾ 'ಗೀತಾ' ಚಿತ್ರದ ಮುದ್ದಾದ ಎರಡು ಪೋಸ್ಟರ್ ಗಳು ಹೊಸ ವರ್ಷದ ಉಡುಗೊರೆಯಾಗಿ ಬಂದಿವೆ. ಈ ಸಿನಿಮಾವನ್ನು ವಿಜಯ್ ನಾಗೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಗಣೀಗೆ ಮೂರು ನಾಯಕಿಯರು ಜೋಡಿಯಾಗಿದ್ದಾರೆ.

ಸೀತಾರಾಮ ಕಲ್ಯಾಣ

ಸೀತಾರಾಮ ಕಲ್ಯಾಣ

ನಟ ನಿಖಿಲ್ ಕುಮಾರ್ ನಟನೆಯ 'ಸೀತಾರಾಮ ಕಲ್ಯಾಣ' ಸಿನಿಮಾದ ಪೋಸ್ಟರ್ ಸಹ ಹೊಸ ವರ್ಷಕ್ಕೆ ಬಂದಿವೆ. ರಾಯಲ್ ಲುಕ್ ನಲ್ಲಿ ಯುವರಾಜ ಎಂಟ್ರಿ ಕೊಟ್ಟಿದ್ದಾರೆ. ರಚಿತಾ ರಾಮ್ ಸಿನಿಮಾದ ನಾಯಕಿಯಾಗಿದ್ದು, ಎ ಹರ್ಷ ನಿರ್ದೇಶನ ಮಾಡಿದ್ದಾರೆ. ಅನಿತಾ ಕುಮಾರಸ್ವಾಮಿ ಅವರೇ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

More from Filmibeat

English summary
Kannada new movie posters released on the occasion of new year 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X