ಈ 7 ಸ್ಟಾರ್ ನಟರ ಮಕ್ಕಳ ಎಂಟ್ರಿಗೆ ಕನ್ನಡ ಇಂಡಸ್ಟ್ರಿ ಸಜ್ಜು.!

ಬಣ್ಣದ ಲೋಕಕ್ಕೆ ಸಾಕಷ್ಟು ಮಂದಿ ಎಂಟ್ರಿ ಕೊಡುತ್ತಾರೆ. ಆದ್ರೆ ಗಟ್ಟಿಯಾಗಿ ಬೇರುರುವರ ಸಂಖ್ಯೆ ತೀರ ವಿರಳ. ಇದರ ನಡುವೆ ಸ್ಟಾರ್ ನಟರ ಮಕ್ಕಳು ಎನ್ನುವ ಲೇಬಲ್ ಇಟ್ಟುಕೊಂಡು ಅನೇಕರು ಚಿತ್ರರಂಗ ಪ್ರವೇಶ ಮಾಡುತ್ತಾರೆ. ಅವರಿಗೆ ಅವಕಾಶಗಳು ಹೆಚ್ಚಾಗಿರುತ್ತದೆ ಜೊತೆ ಅವರ ನಿರೀಕ್ಷೆ ಕೂಡ ಜಾಸ್ತಿ ಇರುತ್ತದೆ.

ಹೀಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ ಕೆಲವು ಸ್ಟಾರ್ ನಟ-ನಟಿಯ ಮಕ್ಕಳು. ಸುಮಾರು ಮೂರು ದಶಕಗಳ ಹಿಂದೆ ಚಂದನವನಕ್ಕೆ ಎರಡನೆ ತಲೆಮಾರು ಎಂಟ್ರಿ ಕೊಟ್ಟಿತ್ತು. ಈಗ ಮೂರನೆ ತಲೆಮಾರು ಈಗ ಬೆಳ್ಳಿ ಪರದೆಯಲ್ಲಿ ಮಿಂಚಲು ಸಿದ್ದತೆ ಮಾಡಿಕೊಳ್ಳುತ್ತಿದೆ.

ಡಾ.ರಾಜ್ ಕುಮಾರ್, ತೂಗುದೀಪ ಶ್ರೀನಿವಾಸ್, ದೇವರಾಜ್, ಪ್ರಭಾಕರ್ ಮಕ್ಕಳು ಇಂದು ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರಾಗಿ ಆಳ್ವಿಕೆ ಮಾಡುತ್ತಿದ್ದಾರೆ. ಈಗ ಮೂರನೆ ತಲೆಮಾರು ಭರ್ಜರಿ ತಯಾರಿಮಾಡಿಕೊಳ್ಳುತ್ತಿದೆ. ಹಾಗಾದ್ರೆ ಯಾರೆಲ್ಲ ಸ್ಟಾರ್ ನಟರ ಮಕ್ಕಳು ಚಿತ್ರರಂಗ ಪ್ರವೇಶಕ್ಕೆ ಸಜ್ಜಾಗಿದ್ದಾರೆ ಗೊತ್ತಾ? ಮುಂದೆ ಓದಿ..

ರಾಮ್ ಕುಮಾರ್ ಮಗಳು ಧನ್ಯಾ

ರಾಮ್ ಕುಮಾರ್ ಮಗಳು ಧನ್ಯಾ

ಡಾ.ರಾಜ್ ಕುಮಾರ್ ಮೊಮ್ಮಗಳಾದ ಧನ್ಯಾ ಸದ್ಯ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸೂರಜ್ ಗೌಡ ನಾಯಕಾಗಿ ಕಾಣಿಸಿಕೊಳ್ಳುತ್ತಿರುವ ಹೊಸ ಚಿತ್ರದಲ್ಲಿ ಧನ್ಯಾ ನಾಯಕಿಯಾಗಿ ಮಿಂಚಲಿದ್ದಾರೆ. ಧನ್ಯಾ ರಾಜ್ ಕುಮಾರ್ ಮಗಳಾದ ಪೂರ್ಣಿಮ ಮತ್ತು ರಾಮ್ ಕುಮಾರ್ ದಂಪತಿಯ ಮಗಳು. ಧನ್ಯಾ ಚಿತ್ರರಂಗದ ಎಂಟ್ರಿಯಿಂದ ದೊಡ್ಮನೆ ಕುಟುಂಬದಿಂದ ಮೊದಲ ಬಾರಿಗೆ ನಾಯಕಿ ಒಬ್ಬಳು ಚಿತ್ರರಂಗ ಪ್ರವೇಶ ಮಾಡಿದ್ದಂತೆ ಆಗಿದೆ.

ಧೀರನ್ ರಾಮ್ ಕುಮಾರ್

ಧೀರನ್ ರಾಮ್ ಕುಮಾರ್

ಸದ್ಯ ನಾಯಕಿಯಾಗಿ ಎಂಟ್ರಿ ಕೊಡುವ ಮೂಲಕ ಧನ್ಯಾ ಚಿತ್ರರಂಗದಲ್ಲಿ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗೆ ನಿಲ್ಲುತ್ತಿದ್ದಾರೆ. ಆದ್ರೆ ಅದಾಗಲೆ ಧನ್ಯಾ ಸಹೋದರ ಧೀರನ್ ರಾಮ್ ಕುಮಾರ್ ಮೊದಲ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ದಾರಿ ತಪ್ಪಿದ ಮಗ' ಚಿತ್ರದಲ್ಲಿ ಧೀರನ್ ಅಭಿನಯಿಸುತ್ತಿದ್ದಾರೆ. ತಾತನ ಸಿನಿಮಾ ಹೆಸರನ್ನೆ ಬಳಸಿಕೊಂಡು ಮೊದಲ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ.

ಯುವರಾಜ್ ಕುಮಾರ್ ಎಂಟ್ರಿಗೆ ತಯಾರಿ

ಯುವರಾಜ್ ಕುಮಾರ್ ಎಂಟ್ರಿಗೆ ತಯಾರಿ

ದೊಡ್ಮನೆ ಕುಟುಂಬದಿಂದ ಮತ್ತೋರ್ವ ನಟ ಎಂಟ್ರಿ ಕೊಡುವ ಸಾಧ್ಯತೆ ಇದೆ. ರಾಘವೇಂದ್ರ ರಾಜ್ ಕುಮಾರ್ ಎರಡನೆ ಮಗ ಯುವರಾಜ್ ಕುಮಾರ್ ಸಿನಿಮಾ ಎಂಟ್ರಿಗೆ ಭರ್ಜರಿ ತಯಾರಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಯುವರಾಜ್ ಕುಮಾರ್ ಅಣ್ಣನಂತೆ ಚಿತ್ರರಂಗ ಪ್ರವೇಶಿಸಲಿದ್ದಾರೆ.

'ಮೊಡವೆ' ಮೂಲಕ ಬಂದ ಆದಿತ್ಯ

'ಮೊಡವೆ' ಮೂಲಕ ಬಂದ ಆದಿತ್ಯ

ಆದಿತ್ಯ ಹಿರಿಯ ನಟ ಶಶಿಕುಮಾರ್ ಪುತ್ರ. ಈಗಾಗಲೆ ಮೊದಲ ಸಿನಿಮಾ ಪ್ರಾರಂಭಿಸಿದ್ದಾರೆ. 'ಮೊಡವೆ' ಚಿತ್ರದ ಮೂಲಕ ಚಂದನವನದ ಪಯಣ ಶುರು ಮಾಡಿದ್ದಾರೆ. ಆದಿತ್ಯ ಹೊಸ ಚಿತ್ರಕ್ಕೆ ಯುವ ನಿರ್ದೇಶಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶಶಿಕುಮಾರ್ ಬಣ್ಣದ ಲೋಕದಲ್ಲಿ ಅನೇಕ ವರ್ಷ ಮಿಂಚಿರುವ ಕಾರಣ ಆದಿತ್ಯ ಅವರಿಗೆ ಒಳ್ಳೆಯ ಸ್ಟಾರ್ಟ್ ಸಿಗುವುದ್ರಲ್ಲಿ ಯಾವುದೆ ಅನುಮಾನ ವಿಲ್ಲ.

ಶ್ರುತಿ-ಮಹೇಂದರನ್ ಮಗಳು

ಶ್ರುತಿ-ಮಹೇಂದರನ್ ಮಗಳು

ಹಿರಿಯ ನಟಿ ಶ್ರುತಿ ಮಗಳು ಗೌರಿ ಕೂಡ ಚಿತ್ರರಂಗದ ಎಂಟ್ರಿಗೆ ಸಜ್ಜಾಗಿದ್ದಾರೆ. ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಗೌರಿ ಚಿತ್ರಪ್ರಿಯರ ಗಮನ ಸೆಳೆದಿದ್ದಾರೆ. ಮಗಳನ್ನು ಒಂದೊಳ್ಳೆ ಸಿನಿಮಾ ಮೂಲಕ ಎಂಟ್ರಿ ಕೊಡಿಸಲು ಶ್ರುತಿ ಅವರು ಉತ್ತಮ ಕಥೆಗಾಗಿ ಎದುರು ನೋಡುತ್ತಿದ್ದಾರಂತೆ. ಎಲ್ಲವು ಅಂದುಕೊಂಡತೆ ಆದ್ರೆ ಮುಂದಿನ ವರ್ಷ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

ಚಿತ್ರರಂಗಕ್ಕೆ ಕುಮಾರ್ ಬಂಗಾರಪ್ಪ ಮಗ

ಚಿತ್ರರಂಗಕ್ಕೆ ಕುಮಾರ್ ಬಂಗಾರಪ್ಪ ಮಗ

ಶಾಸಕ ಮತ್ತು ನಟ ಕುಮಾರ್ ಬಂಗಾರಪ್ಪ ಪುತ್ರ ಅರ್ಜುನ್ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಿರ್ದೇಶಕ ರಘು ಕೋವಿ ಅರ್ಜುನ್ ಮೊದಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ಮಲಯಾಳಂನ ಕಣ್ಸನ್ನೆಯ ಸುಂದರಿ ಪ್ರಿಯಾ ವಾರಿಯರ್ ಅವರನ್ನು ನಾಯಕಿಯಾಗಿ ಕನ್ನಡಕ್ಕೆ ಕರೆತರಲು ರಘು ಕೋವಿ ಪ್ರಯತ್ನಿಸುತ್ತಿದ್ದಾರೆ. ಎಲ್ಲವು ಅಂದುಕೊಂಡಂತೆ ಆದ್ರೆ ಸಧ್ಯದಲ್ಲೇ ಚಿತ್ರ ಸೆಟ್ಟೇರಲಿದೆ.

ರಕ್ಷಿತಾ ಸಹೋದರನ ಸಿನಿಮಾ ಎಂಟ್ರಿ

ರಕ್ಷಿತಾ ಸಹೋದರನ ಸಿನಿಮಾ ಎಂಟ್ರಿ

ನಟಿ ರಕ್ಷಿತಾ ಸಹೋದರ ರಾಣಾ ಕೂಡ ಈಗಾಗಲೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಜೋಗಿ ಪ್ರೇಮ್ ಸಾರಥ್ಯದಲ್ಲಿ ರಾಣಾ ಮೊದಲ ಸಿನಿಮಾ ತಯಾರಾಗುತ್ತಿದೆ. 'ಏಕ್ ಲವ್ ಯಾ' ಎಂದು ಚಿತ್ರಕ್ಕೆ ಟೈಟಲ್ ಫಿಕ್ಸ್ ಮಾಡಲಾಗಿದೆ. ಸಹೋದರನ ಸಿನಿಮಾಗೆ ರಕ್ಷಿತಾ ಬಂಡವಾಳ ಹೂಡುತ್ತಿದ್ದಾರೆ.

More from Filmibeat

English summary
Kannada popular film stars children's are preparing for their first film. Dr Raj Kumar grand childrens, actor shashi kumar son, shruthi daughter and Kumar bangarappa son to make debut in sandalwood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X