»   » 'ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಬಂಧನ!

'ಸಂಗೊಳ್ಳಿ ರಾಯಣ್ಣ' ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಬಂಧನ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಇತಿಹಾಸ ಸೃಷ್ಟಿಸಿದ ನಟ ದರ್ಶನ್ ಅಭಿನಯದ 'ಸಂಗೊಳ್ಳಿ ರಾಯಣ್ಣ' ಚಿತ್ರವನ್ನ ನಿರ್ಮಾಣ ಮಾಡಿದ್ದ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರನ್ನು ಬಂಧಿಸಲಾಗಿದೆ.

ಮುಂಬೈನಲ್ಲಿ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರನ್ನು ಪೋಲೀಸರು ಬಂಧನ ಮಾಡಿದ್ದು, ಇಂದು ಮಧ್ಯಾಹ್ನ ಕೋರ್ಟ್ ಗೆ ಒಪ್ಪಿಸಲಿದ್ದಾರೆ.

ಬೆಳಗಾವಿಯಿಂದ ನಾಪತ್ತೆಯಾಗಿದ್ದ ನಿರ್ಮಾಪಕ ಆನಂದ್ ಅಪ್ಪುಗೋಳ್ ಇಂದು ಮುಂಬೈನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

Kannada Producer Anand Appugol arrested in mumbai

ಆನಂದ್ ಅಪ್ಪುಗೋಳ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ' ಸಂಸ್ಥೆಯ ಮೂಲಕ ಸುಮಾರು 300 ಕೋಟಿ ರೂಪಾಯಿ ಹಣವನ್ನು ಗ್ರಾಹಕರಿಗೆ ಹಿಂದಿರುಗಿಸಲಾಗದೆ ನಿರ್ಮಾಪಕ ಆನಂದ್ ಅಪ್ಪುಗೋಳ್ ತಲೆಮರೆಸಿಕೊಂಡಿದ್ದರು.

15ಕ್ಕೂ ಅಧಿಕ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ' ಬ್ಯಾಂಕ್, ಅಪನಗದೀಕರಣದ ನಂತರ ತನ್ನ ವಹಿವಾಟು ಸ್ಥಗಿತಗೊಳಿಸಲಾಗಿದ್ದು, ಬ್ಯಾಂಕ್ ನಲ್ಲಿ ಹಣ ತೊಡಗಿಸಿದ್ದಗ್ರಾಹಕರು ವಾಪಸ್ ಮಾಡುವಂತೆ ದುಂಬಾಲು ಬಿದ್ದಿದ್ದರು. ಇವರ ಹಣ ವಾಪಸ್ ನೀಡಲು ಸಾಧ್ಯವಾಗದೆ ನಿರ್ಮಾಪಕ ಆನಂದ್ ಅಪ್ಪುಗೋಳ್ ನಾಪತ್ತೆ ಆಗಿದ್ದ ಅನಂದ್ ಅಪ್ಪುಗೋಳ್ ಇಂದು ಪೊಲೀಸರ ಅತಿಥಿಯಾಗಿದ್ದಾರೆ.

English summary
Krantiveera Sangolli Rayanna Bank MD, Kannada Movie 'Krantiveera Sangolli Rayanna'Producer Anand Appugol arrested in Mumbai by Karnataka police.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada